ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಜ್ಯದ ಒಟ್ಟು 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯಲಿದೆ. 14 ಕ್ಷೇತ್ರಗಳಿಗೆ ಏಪ್ರಿಲ್ 26 ರಂದು ಮತದಾನ ನಡೆಯಲಿದೆ. ಇನ್ನುಳಿದ ಉತ್ತರ ಕರ್ನಾಟಕದ ಭಾಗದ 14 ಕ್ಷೇತ್ರಗಳಿಗೆ ಮೇ 7 ರಂದು ಮತದಾನ ನಡೆಯಲಿದೆ. ಇನ್ನು ಮತ ಚಲಾಯಿಸಲು ಮತಗಟ್ಟೆ ಪ್ರವೇಶಿಸುವ ಮತದಾರರು ಮತಗಟ್ಟೆ ಅಧಿಕಾರಿಗೆ ತಮ್ಮ ಗುರುತನ್ನು ಖಾತ್ರಿ ಪಡಿಸಲು ಫೋಟೋ ಇರುವ ಗುರುತಿನ ಚೀಟಿಯನ್ನು ತೋರಿಸಬೇಕು. ಹೀಗಾಗಿ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದ್ದು, ವೋಟರ್ ಐಡಿ ಕಾರ್ಡ್ ಇಲ್ಲದಿದ್ದರೂ ಸಹ ನೀವು ಮತದಾನ ಮಾಡಬಹುದು. ಹಾಗಾದ್ರೆ, ಯಾವೆಲ್ಲಾ ಗುರುತಿನ ಚೀಟಿ ಮೂಲಕ ಮತದಾನ ಮಾಡಬಹುದು ಎನ್ನುವುದು ಈ ಕೆಳಗಿನಂತಿದೆ.
ಎಲೆಕ್ಷನ್ ವೋಟರ್ ಐಡಿ ಇಲ್ಲವಾದಲ್ಲಿ ಪರ್ಯಾಯ ದಾಖಲೆಗಳು
*  ಪ್ಯಾನ್ ಕಾರ್ಡ್
*   ಆಧಾರ್ ಕಾರ್ಡ್
*  ಬ್ಯಾಂಕ್/ಪೋಸ್ಟ್ ಆಫೀಸ್ ನೀಡಿದ ಭಾವಚಿತ್ರವಿರುವ ಪಾಸ್‌ಬುಕ್‌ಗಳು
* ಕಾರ್ಮಿಕ ಸಚಿವಾಲಯದ ಯೋಜನೆಯ ಅಡಿಯಲ್ಲಿ ನೀಡಲಾದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್,   ಚಾಲನಾ ಪರವಾನಗಿ.
* MNREGA ಜಾಬ್ ಕಾರ್ಡ್
* NPR ಅಡಿಯಲ್ಲಿ RGI ನೀಡಿದ ಸ್ಮಾರ್ಟ್ ಕಾರ್ಡ್, ಭಾರತೀಯ ಪಾಸ್‌ಪೋರ್ಟ್
* ಭಾವಚಿತ್ರ ಹೊಂದಿರುವ ಪಿಂಚಣಿಯ ದಾಖಲೆ.
* ಕೇಂದ್ರ / ರಾಜ್ಯ ಸರ್ಕಾರ / ಪಿಎಸ್‌ಯು / ಪಬ್ಲಿಕ್ ಲಿಮಿಟೆಡ್ ಕಂಪನಿಗಳು ಉದ್ಯೋಗಿಗಳಿಗೆ ನೀಡಿದ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು
* MPಗಳು/MLAಗಳು/MLC ಗಳಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿಗಳು
* ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಭಾರತ ಸರ್ಕಾರ ನೀಡಿರುವ ವಿಶಿಷ್ಟ ಅಂಗವೈಕಲ್ಯ ID (UDID) ಕಾರ್ಡ್.
*ಭಾವಚಿತ್ರ ಹೊಂದಿರುವ ಮತದಾರರ ಗುರುತಿನ ಚೀಟಿಯಲ್ಲಿ(ಎಲೆಕ್ಷನ್ ಕಾರ್ಡ್) ದೋಷಗಳಿದ್ದರೆ, ಇಲ್ಲವೆ ಗುರುತಿನ ಚೀಟಿ ತರದಿದ್ದ ಸಂದರ್ಭದಲ್ಲಿ ಭಾರತ ಆಯೋಗ ಪರಿಗಣಿಸಿರುವ ಮೇಲಿನ ದಾಖಲೆಗಳ ಪೈಕಿ ಒಂದನ್ನು ತೋರಿಸಿ ಮತದಾನ ಮಾಡಬಹುದು. ಒಂದು ವೇಳೆ ಮತದಾರರ ಗುರುತಿನ ಚೀಟಿಯಲ್ಲಿ ದೋಷವಿದ್ದರೆ, ಇಲ್ಲವೆ ಮತದಾರರ ಗುರುತಿನ ಚೀಟಿಯಲ್ಲಿರುವ ವ್ಯಕ್ತಿಯ ಭಾವಚಿತ್ರ ಹೊಂದಾಣಿಕೆ ಆಗದಿದ್ದಾಗ ಮೇಲೆ ತಿಳಿಸಲಾಗಿರುವ ದಾಖಲಾತಿಗಳ ಪೈಕಿ ಒಂದನ್ನು ತೋರಿಸಿ ಮತ ಚಲಾಯಿಸಬಹುದು.
ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ: ರಾಜ್ಯದಲ್ಲಿ ಮೊದಲ ಹಂತದಲ್ಲಿ ನಡೆಯುವ ಮತದಾನದ ವೇಳೆ ಎಲ್ಲ ಮತ ಹಾಕಿದ ಮತದಾರರ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿಯನ್ನು (ಚುನಾವಣಾ ನೀತಿ ಸಂಹಿತೆ 1961 ರ ನಿಯಮ 49K ಪ್ರಕಾರ) ಹಚ್ಚಲಾಗುತ್ತದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.



                                    