ವರದಿ: ಚಪ್ಪರದಹಳ್ಳಿ ವಿನಯ್ ಕುಮಾರ್
ಬೆಟ್ಟದಪುರ: ಈ ಚುನಾವಣೆಯ ಫಲಿತಾಂಶ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಕುರ್ಚಿ ಅಲುಗಾಡುವಂತಾಗಬೇಕು, ಭ್ರಷ್ಟ ಸರ್ಕಾರ ನಮಗೆ ಬೇಡ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ ಹೇಳಿದರು.
ಪಿರಿಯಾಪಟ್ಟಣ ತಾಲೂಕು ಚಪ್ಪರದಹಳ್ಳಿ, ಹಾರನಹಳ್ಳಿ, ಅಂಬಲಾರೆ, ರಾಜನಬಿಳಗುಲಿ ಸೇರಿದಂತೆ ಕಣಗಾಲು ಗ್ರಾಮಗಳಲ್ಲಿ ಲೋಕಸಭೆ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಒಂದು ದಿನ ಕೂಡ ರಜೆ ತೆಗೆದುಕೊಳ್ಳದೆ ದೇಶ ಸೇವೆ ಮಾಡುತ್ತಿದ್ದಾರೆ, ಆದರೆ ರಾಹುಲು ಗಾಂಧಿ ೩ ದಿನ ಕೆಲಸ ಮಾಡಿದರೆ ಇಂಗ್ಲೇAಡ್ ಅಥವಾ ಬೇರೆ ದೇಶಕ್ಕೆ ಹೋಗಿ ವಿಶ್ರಾಂತಿ ಪಡೆಯುತ್ತಾರೆ. ಮೋದಿ ಸರ್ಕಾರದಲ್ಲಿ ನಾಲ್ಕು ಚಕ್ರದ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗುಂತೆ ಆದಾರ್ ಕಾರ್ಡ್ ಮುಖಂತರ ೧೦ ಸಾವಿರದಿಂದ ಒಂದು ಲಕ್ಷದ ವರೆಗೆ ಬ್ಯಾಂಕ್ ಮೂಲಕ ಸಾಲ ಸಿಗುತ್ತಿದೆ, ಮುದ್ರಾ ಯೋಜನೆಯಲ್ಲಿ ಕಡಿಮೆ ಬಡ್ಡಿದರದಲ್ಲಿ ಯಾವುದೇ ಜಾಮೀನಿಲ್ಲದೆ ಸ್ವಉದ್ಯೋಗಕ್ಕೆ ಸಾಲ ನೀಡಲಾಗುತ್ತಿದೆ, ಈ ರೀತಿ ಹಲವು ಯೋಜನೆಗಳಿಂದ ದೇಶದ ಎಲ್ಲರೂ ಸ್ವಾವಲಂಬಿಗಳಾಗಬೇಕು, ಮುಂದಿನ ಐದು ವರ್ಷದಲ್ಲಿ ನಮ್ಮ ದೇಶ ಆರ್ಥಿಕವಾಗಿ ೩ನೇ ಸ್ಥಾನಕ್ಕೆ ತರಲಾಗುವುದು ಎಂದು ಮೋದಿಯವರು ತಿಳಿಸಿದ್ದಾರೆ. ಸಕಾಲ ನನ್ನ ಅವದಿಯಲ್ಲಿ ಜಾರಿಗೆ ಬಂದತಹ ಸಕಾಲ ಯೋಜನೆ ಬಹಲಷು ಉಪಯೋಗವಾಗುತ್ತಿದೆ, ಸುಭದ್ರ ಸರ್ಕಾರ ನೀವುಕೊಡಿ, ಸಮರ್ಥ ನಾಯಕರನ್ನು ಎನ್‌ಡಿಎ ನೀಡುತ್ತದೆ, ೨೦೪೭ ಕ್ಕೆ ನಂ.೧ ರಾಷ್ಟçವಾಗಬೇಕಿದೆ. ಆದ್ದರಿಂದ ನಮ್ಮ ಅಭ್ಯರ್ಥಿ ಯದುವೀರ್ ಒಡೆಯರ್‌ಗೆ ಮತ ನೀಡುವುದರ ಮೂಲಕ ಮೋದಿಯವರಿಗೆ ಬಲ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ ಮಹದೇವ್ ಮಾತನಾಡಿ ನಾನು ನನಗೆ ಸಿಕ್ಕಿದ ಅವಧಿಯಲಿ ತಾಲೂಕಿನಲ್ಲಿ ಹೆಚ್ಚು ಅಭಿವೃದ್ದಿ ಕೆಲಸಗಳನ್ನು ್ಲ ಮಾಡಿಕೊಟ್ಟಿದ್ದೇನೆ, ಚಪ್ಪರದಹಳ್ಳಿ ಗ್ರಾಮಕ್ಕೂ ಕೂಡ ಹೆಚ್ಚು ಅನುದಾನ ನೀಡಿ, ಗುದ್ದಲಿ ಪೂಜೆ ಮಾಡಿ ತಕ್ಷಣದಲ್ಲೇ ಕಾಮಗಾರಿಯನ್ನು ಪೂರ್ಣಗೊಳಿಸಿದ್ದೇನೆ. ನಮ್ಮ ಅಭ್ಯರ್ಥಿಗೆ ನೀವೆಲ್ಲರು ಒಗ್ಗಟ್ಟಾಗಿ ಮತ ನೀಡಿಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಚ್.ಸಿ ಬಸವರಾಜು, ತಾಲೂಕು ಬಿಜೆಪಿ ಅಧ್ಯಕ್ಷ ಎಂ.ಎಂ ರಾಜೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಚುನಾವಣಾ ಪ್ರಚಾರ ಸಮಿತಿ ಸಂಚಾಲಕ ಸುರೇಶ್ ಬಾಬು, ಝೂ ಪ್ರಾಧೀಕಾರ ಮಾಜಿ ಅಧ್ಯಕ್ಷ ಶಿವಕುಮಾರ್, ಮೈತ್ರಿ ಪಕ್ಷದ ಮುಖಂಡರಾದ ಕೌಲನಹಳ್ಳಿ ಸೋಮಶೇಖರ್, ಸುರೇಶ್ ಬಾಬು, ಶಿವಕುಮಾರ್, ವಕೀಲ ಗೋವಿಂದೇಗೌಡ, ಗ್ರಾಮದ ಮುಖಂಡರಾದ ನಂಜೇಗೌಡ, ಮರೀಗೌಡ ಸಿ.ಎಸ್, ಗ್ರಾ.ಪಂ ಸದಸ್ಯರು ಸೇರಿದಂತೆ ಹಲವರು ಹಾಜರಿದ್ದರು.