Sunday, June 8, 2025
Google search engine

Homeರಾಜ್ಯಸುದ್ದಿಜಾಲಲೋಕಸಭಾ ಚುನಾವಣೆ: ಡಿಎಂಕೆ ಜತೆ ಕಮಲ್ ಹಾಸನ್ ಮೈತ್ರಿ ನಿರೀಕ್ಷೆ

ಲೋಕಸಭಾ ಚುನಾವಣೆ: ಡಿಎಂಕೆ ಜತೆ ಕಮಲ್ ಹಾಸನ್ ಮೈತ್ರಿ ನಿರೀಕ್ಷೆ

ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮೈಯಂ ದಕ್ಷಿಣ ಚೆನ್ನೈ ಮತ್ತು ಕೊಯಮತ್ತೂರು ಲೋಕಸಭಾ ಕ್ಷೇತ್ರಗಳಲ್ಲಿ ಇಂಡಿಯಾ ಬ್ಲಾಕ್ ಮೈತ್ರಿಕೂಟದಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ಈ ಎರಡು ಕ್ಷೇತ್ರಗಳ ಪೈಕಿ ಒಂದರಲ್ಲಿ ಕಮಲ್ ಹಾಸನ್ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಡಿಎಂಕೆ ನೇತೃತ್ವದ, ಕಾಂಗ್ರೆಸ್ ಪಕ್ಷವನ್ನು ಒಳಗೊಂಡ ಮೈತ್ರಿಕೂಟದ ಜತೆಗಿನ ಒಲವನ್ನು ಹಲವು ತಿಂಗಳ ಹಿಂದೆ ವ್ಯಕ್ತಪಡಿಸಿದ್ದ ಕಮಲ್ ಹಾಸನ್, ಡಿಎಂಕೆ ಮುಖಂಡ ಎಂ.ಕೆ.ಸ್ಟಾಲಿನ್ ಅವರನ್ನು ಭೇಟಿ ಮಾಡಿದ ಬಳಿಕ ಲೋಕಸಭೆಗೆ ಸ್ಪರ್ಧಿಸುವ ಸಂಬಂಧ ಮಾತುಕತೆ ಆರಂಭಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಇಂದು ಸೋಮವಾರ ಆರಂಭವಾಗುವ ರಾಜ್ಯ ವಿಧಾನಸಭೆಯ ಬಜೆಟ್ ನ ಸಂಕ್ಷಿಪ್ತ ಅಧಿವೇಶನದ ಬಳಿಕ ಉಭಯ ಮುಖಂಡರು ಮಾತುಕತೆ ನಡೆಸಲಿದ್ದಾರೆ ಎಂದು ಉನ್ನತ ಮೂಲಗಳು ದೃಢಪಡಿಸಿವೆ. ಎಂಎನ್‌ಎಂಗೆ ಒಂದು ಸ್ಥಾನವನ್ನು ನೀಡುವ ನಿರೀಕೆ ಇದೆ ಎಂದು ಮೂಲಗಳು ಹೇಳಿವೆ. ಟಾರ್ಚ್ ಲೈಟ್ ಚಿಹ್ನೆಯಡಿ ಎಂಎನ್‌ಎಂ ಮುಖಂಡ ಕಮಲ್ ಹಾಸನ್ ಸ್ವತಃ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಮೈತ್ರಿಕೂಟದ ಬಹುತೇಕ ಎಲ್ಲ ಪಾಲುದಾರ ಪಕ್ಷಗಳ ಜತೆ ಡಿಎಂಕೆ ಈಗಾಗಲೇ ಒಂದು ಸುತ್ತು ಮಾತುಕತೆ ನಡೆಸಿದೆ. ಯಾವುದೇ ಪಕ್ಷ ಮೈತ್ರಿಕೂಟಕ್ಕೆ ಸೇರುವುದಾದಲ್ಲಿ, ಈಗ ಮಾತುಕತೆ ನಡೆಸಲಾಗುತ್ತದೆ ಎಂದು ಡಿಎಂಕೆ ಮೂಲಗಳು ತಿಳಿಸಿವೆ.

RELATED ARTICLES
- Advertisment -
Google search engine

Most Popular