Wednesday, May 21, 2025
Google search engine

Homeಅಪರಾಧಯಡಿಯೂರಪ್ಪಗೆ ಲೋಕಾಯುಕ್ತದಿಂದ ಮತ್ತೊಂದು ಸಮನ್ಸ್ ಜಾರಿ

ಯಡಿಯೂರಪ್ಪಗೆ ಲೋಕಾಯುಕ್ತದಿಂದ ಮತ್ತೊಂದು ಸಮನ್ಸ್ ಜಾರಿ

ಬೆಂಗಳೂರು: ಈಗಾಗಲೇ ಪೋಕ್ಸೋ ಕೇಸಲ್ಲಿ ಸಂಕಷ್ಟ ಎದುರಿಸುತ್ತಿರುವಂತ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಮತ್ತೊಂದು ಶಾಕ್ ನೀಡಲಾಗಿದೆ. ಅದೇ ಅಕ್ರಮ ಡಿನೋಟಿಫಿಕೇಷನ್ ಕೇಸಲ್ಲಿ ಲೋಕಾಯುಕ್ತದಿಂದ ಸಮನ್ಸ್ ಜಾರಿಗೊಳಿಸಲಾಗಿದೆ.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಕೃಷ್ಣಭೈರೇಗೌಡ ಸೇರಿದಂತೆ ವಿವಿಧ ಸಚಿವರು ಅಕ್ರಮ ಡಿನೋಟಿಫಿಕೇಷನ್ ಆರೋಪ ಮಾಡಿದ್ದರು. ಅಲ್ಲದೇ ಅದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು.

ಬಿಎಸ್ ಯಡಿಯೂರಪ್ಪ ಅವರ ವಿರುದ್ಧದ ಡಿನೋಟಿಫಿಕೇಷನ್ ಹಗರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತದಿಂದ ಸಮನ್ಸ್ ಜಾರಿಗೊಳಿಸಲಾಗಿದೆ. ಅಂದಹಾಗೇ ಅಕ್ರಮ ಡಿನೋಟಿಫಿಕೇಷ್ ಆರೋಪದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಎ.೧ ಆರೋಪಿಯಾಗಿ ಮಾಡಲಾಗಿದೆ. ಬೆಂಗಳೂರಿನ ಗಂಗಾನಗರದಲ್ಲಿ ೧ ಎಕರೆಗೂ ಹೆಚ್ಚು ಭೂಮಿಯನ್ನು ಸತ್ತವರ ಹೆಸರಿನಲ್ಲಿ ಹೆಚ್.ಡಿ ಕುಮಾರಸ್ವಾಮಿ ಹಾಗೂ ಬಿಎಸ್ ಯಡಿಯೂರಪ್ಪ ಅವರು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿದಂತ ಆರೋಪ ಎದುರಿಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular