Friday, July 25, 2025
Google search engine

Homeಅಪರಾಧಸಚಿವ ಭೈರತಿ ಸುರೇಶ್ ಮಾಜಿ ಪಿಎಸ್ ಮನೆ ಮೇಲೆ ಲೋಕಾಯುಕ್ತ ದಾಳಿ: ಅಪಾರ ಆಸ್ತಿ ದಾಖಲೆ...

ಸಚಿವ ಭೈರತಿ ಸುರೇಶ್ ಮಾಜಿ ಪಿಎಸ್ ಮನೆ ಮೇಲೆ ಲೋಕಾಯುಕ್ತ ದಾಳಿ: ಅಪಾರ ಆಸ್ತಿ ದಾಖಲೆ ವಶ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಚಿವ ಭೈರತಿ ಸುರೇಶ್ ಅವರ ಪರ್ಸನಲ್ ಸಕ್ರೆಟರಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಆಸ್ತಿ ದಾಖಲೆಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಸಚಿವ ಭೈರತಿ ಸುರೇಶ್ ಅವರ ಪರ್ಸನಲ್ ಸಕ್ರೆಟರಿ ಆಗಿದ್ದ ಮಾರುತಿ ಬಗಲಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಈವರೆಗೆ 8 ನಿವೇಶನಗಳು, 5 ವಾಸ ಮನೆ, 19 ಎಕರೆ ಜಮೀನು ಆಸ್ತಿ ಪತ್ರಗಳು ಸೇರಿದಂತೆ ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಮಾರುತಿ ಬಗಲಿ ಎರಡು ವರ್ಷಗಳ ಕಾಲ ಸಚಿವ ಭೈರತಿ ಸುರೇಶ್ ಅವರ ಪಿಎಸ್ ಆಗಿದ್ದರು. ಕಳೆದ ಮೂರು ತಿಂಗಳ ಹಿಂದಷ್ಟೇ ಕೆಲಸ ಬಿಟ್ಟಿದ್ದರು ಎಂದು ತಿಳಿದುಬಂದಿದೆ.

RELATED ARTICLES
- Advertisment -
Google search engine

Most Popular