ಬೆಂಗಳೂರು: ಲಾಂಗ್ ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣದಲ್ಲಿ ರಜತ್‌ಗೆ ಜಾಮೀನು ಮಂಜೂರು ಮಾಡಲಾಗಿದೆ. ರೀಲ್ಸ್ ಕೇಸ್‌ಗೆ ಸಂಬಂಧ ವಿಚಾರಣೆಗೆ ರಜತ್‌ಗೆ 2 ಬಾರಿ ನೋಟಿಸ್ ನೀಡಿದ್ದರು.
ವಿಚಾರಣೆಗೆ ಹಾಜರಾಗದ ರಜತ್‌ನನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿ ಇಂದು ಕೋರ್ಟ್ ಹಾಜರುಪಡಿಸಿದ್ದರು. ಈ ವೇಳೇ 14 ದಿನಗಳ ನ್ಯಾಯಾಂಗ ಬಂಧನಕ್ಕೆ 24ನೇ ಎಸಿಎಂಎಂ ಕೋರ್ಟ್ ಆದೇಶ ನೀಡಿತ್ತು.
ಈ ನಡುವೆ ಇಂದು ಜಾಮೀನು ಅರ್ಜಿ ನಡೆಸಿದ್ದ 24ನೇ ಎಸಿಎಂಎಂ ನ್ಯಾಯಾಧೀಶರು ಷರತ್ತುಬದ್ದ ಜಾಮೀನು ನೀಡಿ ಆದೇಶವನ್ನು ಹೊರಡಿಸಿದ್ದರು. ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿ ಅದನ್ನು ಇನ್‌ಸ್ಟಾಗ್ರಾಂನ ‘ಬುಜ್ಜಿ’ ಹೆಸರಿನ ಖಾತೆಯಲ್ಲಿ ಹಾಕಿದ್ದ ಇಬ್ಬರನ್ನು ಮಾರ್ಚ್ 25ರಂದು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದರು.
ಬಳಿಕ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ್ದ ನ್ಯಾಯಾಲಯ, ವಿಚಾರಣೆಯ ಸಂದರ್ಭದಲ್ಲಿ ಖುದ್ದು ಹಾಜರಿರುವಂತೆ ಷರತ್ತು ವಿಧಿಸಿತ್ತು. ಆದರೆ, ನ್ಯಾಯಾಲಯದ ವಿಚಾರಣೆಗೆ ರಜತ್ ಕಿಶನ್ ಹಾಜರಾಗಿರಲಿಲ್ಲ. ವಾರಂಟ್‌ನ ಅನ್ವಯ ರಜತ್ ಅವರನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ರಜತ್ ಬಂಧನ ವಿಚಾರ ತಿಳಿದು ವಿನಯ್ ಗೌಡ ನ್ಯಾಯಾಲಯಕ್ಕೆ ಹಾಜರಾದರು.