Wednesday, May 21, 2025
Google search engine

Homeಅಪರಾಧಮಂಡ್ಯದಲ್ಲಿ ಲವ್, ಸೆಕ್ಸ್ ದೋಖಾ!?: ಪ್ರಿಯಕರನ ಮನೆ ಮುಂದೆ ಯುವತಿ ಧರಣಿ

ಮಂಡ್ಯದಲ್ಲಿ ಲವ್, ಸೆಕ್ಸ್ ದೋಖಾ!?: ಪ್ರಿಯಕರನ ಮನೆ ಮುಂದೆ ಯುವತಿ ಧರಣಿ

ಮಂಡ್ಯ: 8 ವರ್ಷ ಪ್ರೀತಿಸಿ, ಎಲ್ಲಾ ರೀತಿ ಬಳಸಿಕೊಂಡು ಬಳಿಕ ಅನ್ಯಜಾತಿ ನೆಪವೊಡ್ಡಿ ಪ್ರಿಯತಮೆಗೆ ಪ್ರಿಯಕರ ಕೈ ಕೊಟ್ಟಿರುವ ಘಟನೆ ಮಳವಳ್ಳಿ ತಾಲೂಕಿನ ಬಿಜಿ ಪುರ ಹೋಬಳಿಯ ಬಳ್ಳಗೆರೆ ಗ್ರಾಮದಲ್ಲಿ ನಡೆದಿದೆ.

ನಂಜನಗೂಡಿನ ಮಹದೇಶ್ವರ ಲೇಔಟ್ ನ ರಮಶ್ರೀ ನಂಬಿ ಮೋಸ ಹೋದ ಯುವತಿ. ಬಳ್ಳಗೆರೆ ಗ್ರಾಮದ ಮಂಜು.ಬಿ.ಆರ್ ನಂಬಿಸಿ ವಂಚನೆ ಮಾಡಿರುವ ಯುವಕ.

ಪ್ರಿಯಕರನಿಂದ ವಂಚನೆಗೊಳಗಾದ ಯುವತಿ ಕೈ ಕೊಟ್ಟ ಪ್ರಿಯಕರನಿಗಾಗಿ ಮನೆ ಮುಂದೆ ಧರಣಿ ಕುಳಿತಿದ್ದಾಳೆ.

ಕಳೆದ ಎಂಟು ವರ್ಷದಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಪ್ರಿಯತಮೆ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಂತೆ ಆತ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದಾನೆ. ಬೇರೆ ಬೇರೆ ಕಾರಣ ನೀಡಿ  ಮದುವೆ ಮುಂದೆ ಆಗುವುದಾಗಿ ಭರವಸೆ ನೀಡಿದ್ದಾನೆ.

ಇದೀಗ ಪ್ರೀತಿಸಿದಾಕೆ ಬಿಟ್ಟು ಮತ್ತೊಂದು ಹುಡುಗಿಯೊಂದಿಗೆ ಮದುವೆಯಾಗಲು ಯುವಕ ಮುಂದಾಗಿದ್ದ. ವಿಷಯ ತಿಳಿದ ಯುವತಿ ಪ್ರಿಯಕರ ಮಂಜನ ಮನೆ ಮುಂದೆ ಕುಳಿತು ಮದುವೆಗೆ ಪಟ್ಟು ಹಿಡಿದಿದ್ದಾಳೆ.

ನ್ಯಾಯಕ್ಕಾಗಿ ಗೋಗರೆದರು ಮಂಜ ಹಾಗೂ ಕುಟುಂಬಸ್ಥರು ಸ್ಪಂದಿಸಿಲ್ಲ ಎಂದು ಯುವತಿ ಆರೋಪಿಸಿದ್ದಾಳೆ.

RELATED ARTICLES
- Advertisment -
Google search engine

Most Popular