Wednesday, May 21, 2025
Google search engine

Homeಸ್ಥಳೀಯಹುಚ್ಚು ನಾಯಿ ದಾಳಿ: ಒಂಬತ್ತು ಮಂದಿಗೆ ಗಾಯ

ಹುಚ್ಚು ನಾಯಿ ದಾಳಿ: ಒಂಬತ್ತು ಮಂದಿಗೆ ಗಾಯ

ಪಿರಿಯಾಪಟ್ಟಣ: ಹುಚ್ಚು ನಾಯಿಯೊಂದು ಮೂವರು ಬಾಲಕರು ಸೇರಿ ಒಂಬತ್ತು ಮಂದಿಗೆ ಕಚ್ಚಿರುವ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದೆ.
ಪಿರಿಯಾಪಟ್ಟಣದ ಈಡಿಗರ ಬೀದಿಯ ಬಳಿ ಈ ಘಟನೆ ಜರುಗಿದ್ದು ಪಟ್ಟಣದ ನಿವಾಸಿ ಇಬಾದುಲ್ಲಾ ಖಾನ್ ಮಗ ಫರಾನ್ ಎಂಬ ೯ ವರ್ಷದ ಮಗುವಿಗೆ ಮೊದಲು ಈ ಹುಚ್ಚುನಾಯಿ ಕಚ್ಚಿದ್ದು ಈ ಬಗ್ಗೆ ಇಬಾದುಲ್ಲಾ ಖಾನ್ ಪಟ್ಟಣಪಂಚಾಯಿತಿಗೂ ಮಾಹಿತಿ ನೀಡಿದ್ಧಾರೆ. ಈ ಮಾಹಿತಿ ನಿರ್ಲಕ್ಷಿಸಿದ ಪುರಸಭೆಯವರು ಯಾವುದೆ ಕ್ರಮವಹಿಸಿಲ್ಲ.
೮ ಮಂದಿಗೆ ಕಡಿತ
ಇದೇ ನಾಯಿ ಸಂಜೆಯ ವೇಳೆಗೆ ವರ್ಧನ್ ಆರ್ಯ ಎಂಬ ೧೦ ವರ್ಷದ ಮಗುವಿನ ಮೇಲೆ ಮಾರಣಾಂತಿಕವಾಗಿ ಕಚ್ಚಿದ್ದು ತೊಡೆಯ ಬಾಗ, ಕಾಲುಗಳನ್ನು ಗಾಯಗೊಳಿಸಿದೆ. ಇದಾದ ನಂತರ ಜುಬೇರ್ ಶರೀಫ್, ದರ್ಶನ್, ಸುಯೇಬ್‌ಶರೀಫ್, ಇಬಾದುಲ್ಲಾಖಾನ್ ರನ್ನು ಕಡಿದಿರುವ ನಾಯಿ ಒಂದೆ ದಿನ ೭ ಮಂದಿಗೆ ಕಚ್ಚಿದೆ. ಮಗುವಿಗೆ ಜಬೀರ್ ಶರೀಫ್, ರಂಗಮ್ಮ ಎಂಬ ಮಹಿಳೆಗೆ ತೀವ್ರವಾಗಿ ಗಾಯಗೊಳಿಸಿರುವ ನಾಯಿ ತೊಂದರೆ ಉಂಟು ಮಾಡಿದೆ.
ಮೈಸೂರಿಗೆ ರವಾನೆ
ನಾಯಿಕಡಿತದಿಂದ ದಾಖಲಾದ ಇಬ್ಬರಿಗೆ ಬೆಳಿಗ್ಗೆ ರ್‍ಯಾಡೀಸ್ ಇಮನೋಗೋಬಿನ್ ಎಂಬ ಇಂಜೆಕ್ಷನ್ ನೀಡಲಾಗಿತ್ತು. ತದ ನಂತರ ಬಂದ ೮ ಮಂದಿಗೆ ಇಂಜೆಕ್ಷನ್ ಇಲ್ಲವಾದ ಕಾರಣ ಎಲ್ಲರನ್ನು ಮೈಸೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ ಇವರ ಬಗ್ಗೆ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿಗಳು ಮೈಸೂರಿನಲ್ಲಿ ಚಿಕಿತ್ಸೆ ಕೊಡಿಸುವ ಸಂಬಂಧ ಕ್ರಮವಹಿಸಲಿದ್ದಾರೆ. ಇದಲ್ಲದೆ ಬೀದಿ ನಾಯಿಗಳಹಾವಳಿಯ ಬಗ್ಗೆ ಘಟನೆಯಲ್ಲಿ ಹುಚ್ಚುನಾಯಿ ಕಡಿತಕ್ಕೆ ಒಳಗಾದವರ ಬಗ್ಗೆ ಕ್ರಮವಹಿಸುವಂತೆ ಪತ್ರಬರೆದು ಗಮನಕ್ಕೆ ತರಲಾಗುವುದು ಎಂದು ನಾಯಿ ಕಡಿತಕ್ಕೆ ಒಳಗಾದವರಿಗೆ ಚಿಕಿತ್ಸೆ ನೀಡಿದ ವೈದ್ಯ ಡಾ.ಪ್ರಮೋದ್ ತಿಳಿಸಿದ್ದಾರೆ.
ಬೀದಿನಾಯಿಗಳ ಹಾವಳಿ
ಪಿರಿಯಾಪಟ್ಟಣದ ತುಂಬೆಲ್ಲಾ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಿಸುವ ಸಂಬಂಧ ಪುರಸಭೆ ಕ್ರಮವಹಿಸಬೇಕು. ಈ ಮೂಲಕ ಬೀದಿನಾಯಿಗಳ ಹಾವಳಿಯನ್ನು ತಡೆಗಟ್ಟಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಹೀಗೆ ನಾಯಿಕಡಿತಕ್ಕೆ ಒಳಗಾದವರಿಗೆ ಸೂಕ್ತ ಚಿಕಿತ್ಸೆ ಸಿಗಬೇಕು ಮತ್ತು ಯಾರಾದರೂ ಹುಚ್ಚುನಾಯಿ ಬಗ್ಗೆ ಮಾಹಿತಿ ನೀಡಿದ ಸಂದರ್ಭದಲ್ಲಿ ತಕ್ಷಣ ಪುರಸಭೆವತಿಯಿಂದ ಸ್ಪಂಧಿಸುವ ಕೆಲಸವಾಗಬೇಕು ಎಂದು ತಿಳಿಸಿದರು.
ನಾಯಿ ಹುಚ್ಚು ಹಿಡಿದಿದ್ದು ನನ್ನ ಮಗ ಸೇರಿದಂತೆ ಇಬ್ಬರು ಮಕ್ಕಳಿಗೆ ಕಡಿದಿರುವ ಬಗ್ಗೆ ಪುರಸಬೆ ಕಚೇರಿಗೆ ಹೋಗಿ ತಿಳಿಸಿದ್ದೇನೆ ಆದರೆ ಯಾವ ಅಧಿಕಾರಿಯೂ ಕ್ರಮವಹಿಸಿಲ್ಲ ಇವರ ನಿರ್ಲಕ್ಷದಿಂದ ೮ ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ಧಾರೆ. ಇಬಾದುಲ್ಲಾಖಾನ್ ಕುಂಬಾರ ಬೀದಿ ನಿವಾಸಿ.
ಹುಚ್ಚುನಾಯಿ ದಾಳಿಮಾಡಿ ಕಚ್ಚಿರುವ ಬಗ್ಗೆ ಮಾಹಿತಿ ಪಡೆಯಲಾಗುತ್ತಿದ್ದು ಶೀಘ್ರದಲ್ಲಿ ಕ್ರಮವಹಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಮುತ್ತಪ್ಪ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular