Tuesday, November 4, 2025
Google search engine

Homeಸ್ಥಳೀಯಮದನ್ ಗೋಪಾಲ್ ರಾಜ್ ಅರಸ್ ವಿಧಿ ವಶ

ಮದನ್ ಗೋಪಾಲ್ ರಾಜ್ ಅರಸ್ ವಿಧಿ ವಶ

ಮೈಸೂರು : ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ತಾತ ಮದನ್ ಗೋಪಾಲ್ ರಾಜ್ ಅರಸ್ ವಿಧಿವಶರಾಗಿದ್ದಾರೆ.

ಅವರಿಗೆ 93 ವರ್ಷ ವಯಸ್ಸಾಗಿತ್ತು. ಗೋಪಾಲ ರಾಜ್ ಅರಸ್ ನಿಧನದಿಂದ ಯದುವೀರ್ ಅವರ ಅಧಿಕೃತ ಕಾರ್ಯಕ್ರಮಗಳು ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿವೆ.

ವಯೋ ಸಹಜ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಲಕ್ಷ್ಮೀಪುರಂ ನಿವಾಸದಲ್ಲಿ ನಿಧನರಾಗಿದ್ದಾರೆ. ಇವರು ಯದುವೀರ್ ಅವರ ಪೂರ್ವಾಶ್ರಮದ ತಂದೆ ಸ್ವರೂಪ್ ಗೋಪಾಲ ರಾಜ್ ಅರಸ್ ಅವರ ತಂದೆ. ಚಾಮುಂಡಿ ಬೆಟ್ಟದ ತಪ್ಪಲಿನ ಅರಸು ರುದ್ರಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ನಡೆದಿದ್ದು, ಅಂತ್ಯಕ್ರಿಯೆಯಲ್ಲಿ ಕುಟುಂಬಸ್ಥರು, ಸ್ನೇಹಿತರು, ಹಿತೈಷಿಗಳು ಭಾಗಿಯಾಗಿದ್ದರು.

RELATED ARTICLES
- Advertisment -
Google search engine

Most Popular