Friday, September 12, 2025
Google search engine

Homeಅಪರಾಧಕಾನೂನುಮದ್ದೂರು ಗಣೇಶ ವಿಸರ್ಜನೆ ಗಲಾಟೆ: ಇನ್ಸ್‌ಪೆಕ್ಟರ್ ಶಿವಕುಮಾರ್ ಅಮಾನತು

ಮದ್ದೂರು ಗಣೇಶ ವಿಸರ್ಜನೆ ಗಲಾಟೆ: ಇನ್ಸ್‌ಪೆಕ್ಟರ್ ಶಿವಕುಮಾರ್ ಅಮಾನತು

ಮಂಡ್ಯ: ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯ ವೇಳೆ ನಡೆದ ಕಲ್ಲು ತೂರಾಟ ಮತ್ತು ಗಲಾಟೆಯ ಕುರಿತು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಕರ್ತವ್ಯ ಲೋಪದ ಆರೋಪದ ಮೇಲೆ ಮದ್ದೂರು ಟೌನ್ ಪೋಲೀಸ್ ಇನ್ಸ್‌ಪೆಕ್ಟರ್ ಶಿವಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ.

ಘಟನೆ ಹಿನ್ನೆಲೆ: ಮದ್ದೂರು ಪಟ್ಟಣದಲ್ಲಿ ಕಳೆದ ವಾರ ನಡೆದ ಗಣೇಶ ವಿಸರ್ಜನಾ ಮೆರವಣಿಗೆಯ ವೇಳೆ ಎರಡು ಸಮುದಾಯಗಳ ನಡುವೆ ತೀವ್ರ ಉದ್ವಿಗ್ನತೆ ಉಂಟಾಗಿ, ಕಲ್ಲು ತೂರಾಟ, ಗಲಾಟೆ ಮತ್ತು ಚಲಾವಣೆಗಳು ನಡೆದವು. ಈ ಸಂದರ್ಭದಲ್ಲಿ ಪೋಲೀಸರು ಸ್ಥಳದಲ್ಲಿಲ್ಲದಿದ್ದ ಕಾರಣ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಶಾಂತಿ ಭಂಗ ಮತ್ತು ಸಾಮಾಜಿಕ ಒಗ್ಗಟ್ಟಿಗೆ ಧಕ್ಕೆಯಾದ ಈ ಘಟನೆ ನಂತರ, ಸಾರ್ವಜನಿಕರು ಹಾಗೂ ರಾಜಕೀಯ ವಲಯದಿಂದ ಪೊಲೀಸ್ ಇಲಾಖೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಯಿತು.

ಇನ್ಸ್‌ಪೆಕ್ಟರ್ ಅಮಾನತು

ಘಟನೆಯ ಸಂದರ್ಭದಲ್ಲಿ ಸ್ಥಳದಲ್ಲಿರದೆ ಕರ್ತವ್ಯ ಲೋಪವೊಡ್ಡಿದ ಕಾರಣವನ್ನು ಆಧಾರಮಾಡಿಕೊಂಡು, ಮದ್ದೂರು ಟೌನ್ ಇನ್ಸ್‌ಪೆಕ್ಟರ್ ಶಿವಕುಮಾರ್ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಸರ್ಕಾರ ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ.

ಈ ಕುರಿತು ಮಾತನಾಡಿದ ಸಕ್ಕರೆ ಸಚಿವ ಎನ್. ಚಲುವರಾಯಸ್ವಾಮಿ, ಶಾಂತಿಯ ಸಭೆಯಲ್ಲಿಯೇ ನಾನು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದೆ. ಈಗಾಗಲೇ ಇನ್ಸ್‌ಪೆಕ್ಟರ್ ಅಮಾನತು ಆಗಿದ್ದಾರೆ. ವರದಿ ಬಂದ ನಂತರ ಇತರ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಈ ಘಟನೆಯು ಪೊಲೀಸರ ವೈಫಲ್ಯದಿಂದ ಉಂಟಾದದ್ದು ಎನ್ನುವುದನ್ನು ನಾನೀಗ ಹೇಳಲ್ಲ. ಸಮಗ್ರ ವರದಿ ಬಂದು ಬಳಿಕ ಸ್ಪಷ್ಟತೆ ಬರಲಿದೆ ಎಂದರು.

ಎಎಸ್ಪಿ ವರ್ಗಾವಣೆ, ಗಲಾಟೆಗೆ ಸಂಬಂಧವಿಲ್ಲ:

ಮದ್ದೂರು ಗಲಾಟೆಯ ಬಳಿಕ ಮೈಸೂರಿನ ಎಎಸ್ಪಿ ತಿಮ್ಮಯ್ಯ ಅವರ ವರ್ಗಾವಣೆ ವಿಚಾರವೂ ಚರ್ಚೆಗೆ ಬಂದಿದ್ದು, ಈ ಕುರಿತು ಸ್ಪಷ್ಟನೆ ನೀಡಿದ ಚಲುವರಾಯಸ್ವಾಮಿ, ವರ್ಗಾವಣೆ ಪ್ರಕ್ರಿಯೆ ಸಾಮಾನ್ಯವಾಗಿದೆ. ಇವು ಗಲಾಟೆಗೆ ಸಂಬಂಧಿಸಿದಿಲ್ಲ. ತಿಮ್ಮಯ್ಯ ಒಳ್ಳೆಯ ಕೆಲಸ ಮಾಡಿದ್ದರು, ಎಂದು ಹೇಳಿದ್ದಾರೆ.

೨೨ ಮಂದಿ ಬಂಧನ: ಗಲಾಟೆಗೆ ಸಂಬಂಧಿಸಿದಂತೆ ೨೨ ಜನರನ್ನು ಬಂಧಿಸಲಾಗಿದೆ. ಆದರೆ, ಈ ಗಲಾಟೆಗೆ ನಿಖರ ಕಾರಣ ಯಾವುದು, ಹಿಂದೆ ಸಂಚು ಇದೆಯೇ ಎಂಬ ಬಗ್ಗೆ ಪೂರ್ಣ ವರದಿ ಇನ್ನೂ ಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular