ಮದ್ದೂರು: ತಾಲೂಕಿನ ಚಾಮನಹಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಮಾಜಿ ಸಚಿವಾ ಡಿಸಿ ತಮ್ಮಣ್ಣ ಅಧ್ಯಕ್ಷತೆಯಲ್ಲಿ ಬಿಜೆಪಿ ಮುಖಂಡ ಎಸ್ಪಿ ಸ್ವಾಮಿ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್ ಗುರು ಚರಣ್ ನೇತ್ರತ್ವದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ ಪರ ಮತಯಾಚನೆ ಮಾಡಲಾಯಿತು.
ಇಂದು ದೇವೇಗೌಡರ ಕುಟುಂಬ ಹಾಗೂ ಯಡಿಯೂರಪ್ಪ ಅವರ ಕುಟುಂಬ ಒಗ್ಗಟ್ಟಿನಿಂದ ರಾಜ್ಯದಲ್ಲಿ ಚುನಾವಣೆಯನ್ನು ಎದುರಿಸುತ್ತಿದ್ದು. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಕುಮಾರಸ್ವಾಮಿರವರು ಸ್ಪರ್ಧಿಸಿದ್ದು ಹೃದಯವಂತ ಕುಮಾರಸ್ವಾಮಿ ಒಂದೆಡೆ ಮತ್ತೊಬ್ಬ ಹಣವಂತ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದು ನಮ್ಮೆಲ್ಲ ಕಾರ್ಯಕರ್ತ ಬಂಧುಗಳು ಹಣಕ್ಕಾಗಿ ನಮ್ಮನ್ನ ನಾವು ಮಾರಿಕೊಳ್ಳದೆ.

ಶಾಶ್ವತವಾದ ನೆಲೆಯನ್ನ ಕಂಡಿಕೊಳ್ಳುವ ಹಾಗೂ ರೈತರ ಬಾಳನ್ನ ಬೆಳಗುವ ನಾಯಕರನ್ನು ನಾವು ಆರಿಸಬೇಕಾಗಿದೆ ಕುಮಾರಸ್ವಾಮಿ ರವರನ್ನು ನಾವು ಗೆಲ್ಲಿಸಿದರೆ ಕೇಂದ್ರದಲ್ಲಿ ಮಂತ್ರಿ ಆಗುವುದು ಖಚಿತ ಕಳೆದ ಚುನಾವಣೆಯಲ್ಲಿ ಮಾಡಿದ ತಪ್ಪನ್ನು ಯಾರೂ ಕೂಡ ಈ ಚುನಾವಣೆಯಲ್ಲಿ ಮಾಡದೆ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿ ಎಂದರು.
ರಾಜ್ಯದಲ್ಲಿ ಉತ್ತಮ ರಾಜ್ಯವಾಳುವ ನಾಯಕನಿದ್ದರೆ ಕಾಲಕಾಲಕ್ಕೆ ಮಳೆ ,ಬೆಳೆ, ಶಾಂತಿ ನೆಮ್ಮದಿ ಇರುತ್ತದೆ ಆದರೆ ಇವತ್ತಿನ ನಾಯಕ ಸಮರ್ಥನಿಲ್ಲದ ಹಿನ್ನೆಲೆ ಮಳೆ ಬೆಳೆ ಇಲ್ಲ ಪ್ರಾಣಿ ಪಕ್ಷಿಗಳಿಗೂ ಕುಡಿಯಲು ನೀರು ಇಲ್ಲದಂತಾಗಿದೆ ಎಂದರು.
ಈ ವೇಳೆ ತಾಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷ ದಿವ್ಯ, ಬಿಜೆಪಿ ಮುಖಂಡರಾದ ರೂಪ, ಎಂ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಡೀಎಪಿಎಂಎಸ್ ಅಧ್ಯಕ್ಷ ಮಹಾದೇವ್, ಬಿಜೆಪಿ ತಾಲೂಕು ಅಧ್ಯಕ್ಷ ಸತೀಶ್, ಸೇರಿದಂತೆ ಇತರರು ಹಾಜರಿದ್ದರು.