Tuesday, November 4, 2025
Google search engine

Homeರಾಜ್ಯಸುದ್ದಿಜಾಲಹುಣಸೂರು ರೋಟರಿ ತಂಡಕ್ಕೆ ಮಡಿಕೇರಿ ‘ಕಲಾ ಕಲರವ’ ಸಮಗ್ರ ಪ್ರಶಸ್ತಿ ಕಿರೀಟ

ಹುಣಸೂರು ರೋಟರಿ ತಂಡಕ್ಕೆ ಮಡಿಕೇರಿ ‘ಕಲಾ ಕಲರವ’ ಸಮಗ್ರ ಪ್ರಶಸ್ತಿ ಕಿರೀಟ

ಹುಣಸೂರು : ಮಡಿಕೇರಿ ಮಿಸ್ಟರಿ ಹಿಲ್ಸ್ ನಲ್ಲಿ ನಡೆದ ಕಲಾ ಕಲರವ ಸಾಂಸ್ಕೃತಿಕ ಸ್ಪರ್ಧಾಕೂಟದಲ್ಲಿ ನಮ್ಮ ಹುಣಸೂರು ರೋಟರಿ ಸದಸ್ಯರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ  ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ 12 ಬಹುಮಾನಗಳನ್ನು ಪಡೆದಿರುತ್ತಾರೆ.

ಭಾನುವಾರ ಮಡಿಕೇರಿ ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಕಲಾ ಕಲರವದಲ್ಲಿ ಪ್ರಥಮ ಬಹುಮಾನ 3,

ಸೋಲೊ ಡಾನ್ಸ್ ಮೃದಂಗ್ 1, ಗ್ರೂಪ್ ಸಾಂಗ್ ಕುವೆಂಪು ಅವರ ಓ ನನ್ನ ಚೇತನ ಗೀತೆಗೆ ಪ್ರಥಮ,

ಕಿರು ನಾಟಕ  “ವಾಸನೆಯ ಭೂತ ” ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.

ಸೋಲೊ ಡ್ಯಾನ್ಸ್ ಮೃದಂಗ್ ಪ್ರಥಮ, ದ್ವಿತೀಯ ಬಹುಮಾನ 7,ಸ್ಟ್ಯಾಂಡಪ್ ಕಾಮಿಡಿ 1,ಡಾ. ಬಸವರಾಜು. ಕೆ,

ಡುಯಟ್ ಸಾಂಗ್ 2, ಡಾ. ಸಂಗೀತ ಮತ್ತು ಶ್ರೀ ಚಿಲ್ಕುಂದ ಮಹೇಶ್, ಡುಯಟ್ ಡ್ಯಾನ್ಸ್  2,

ಡಾ. ಸಂಗೀತ ಮತ್ತು ಕು.ಮೃದಂಗ್, ಸೋಲೋ ಸಾಂಗ್ 1,ಡಾ. ಸಂಗೀತ,ಗ್ರೂಪ್ ಡ್ಯಾನ್ಸ್ 1

ತೃತೀಯ  ಬಹುಮಾನ, ಸೋಲೋ ಡ್ಯಾನ್ಸ್ ಸೃಜನ್ 1,ಮೃದಂಗ್ 1,ಒಟ್ಟು 12 ಪ್ರಶಸ್ತಿಗಳನ್ನು ಗೆದ್ದಿದ್ದು ಸಮಗ್ರ ಪ್ರಶಸ್ತಿ ಬಹುಮಾನಕ್ಕೆ ಭಾಜನರಾಗಿದ್ದಾರೆ.

ರೋಟರಿ 3181 ಜಿಲ್ಲಾ  ವಲಯ 6  ರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  ಏಳು ರೋಟರಿ ತಂಡಗಳು ಭಾಗವಹಿಸಿ ಕಲಾರವದಲ್ಲಿ ಉತ್ತಮ ಪ್ರದರ್ಶನ ನೀಡಿದ ಹುಣಸೂರು ರೋಟರಿ ಕ್ಲಬ್  ನ ಸದಸ್ಯರಿಗೆ ರೋಟರಿ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್ ಅಭಿನಂದನೆ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮುಂದಿನ ಗವರ್ನರ್ ಯಶಸ್ವಿನಿ ಸೋಮಶೇಖರ್, ಮಾಜಿ ಗವರ್ನರ್ ಚಂಗಪ್ಪ,  ವಲಯ  ಸಹಾಯಕ ಗೌರ್ನರ್ಗಳಾದ ದಿಲ್ಲನ್ ಚಂಗಪ್ಪ, ತಿಮಲಾಪುರ ರಾಜೇಗೌಡ, ಮಡಿಕೇರಿ ಮಿಸ್ಟಿ ಹಿಲ್ಸ್ ಆಧ್ಯಕ್ಷ ರತ್ನಾಕರ ರೈ, ಕಾರ್ಯದರ್ಶಿ ಬಿ.ಕೆ.ಕರಿಯಪ್ಪ , ಹಾಗೂ ರೊ.ಅನಿಲ್   ಇದ್ದರು.

RELATED ARTICLES
- Advertisment -
Google search engine

Most Popular