Monday, March 30, 2026
Google search engine

Homeಸ್ಥಳೀಯಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಹಾವೀರರ ಚಿಂತನೆ : ಅಹಿಂಸಾ ತತ್ವದ ಮಹತ್ವ ಸಾರಿದ ಋಗ್ವೇದಿ

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಹಾವೀರರ ಚಿಂತನೆ : ಅಹಿಂಸಾ ತತ್ವದ ಮಹತ್ವ ಸಾರಿದ ಋಗ್ವೇದಿ

ಚಾಮರಾಜನಗರ : ಜಗತ್ತಿಗೆ ಶಾಂತಿಯ ಶಕ್ತಿ ರೂಪವಾಗಿರುವ ಭಾರತ ವಿಶ್ವಗುರುವಾಗಿದೆ . ಜಗತ್ತಿಗೆ ಶಾಂತಿಯ ತತ್ವವನ್ನು ಬೋಧಿಸಿದ ಮಹಾವೀರರ ಸಂದೇಶಗಳು ವರ್ತಮಾನದಲ್ಲಿ ತುಂಬಾ ಅಗತ್ಯವಿದೆ. ಇಡೀ ಜಗತ್ತು ಶಕ್ತಿಯ ಸ್ವರೂಪದಲ್ಲಿ ,ಸ್ವಾರ್ಥದ ರೂಪವನ್ನು ತಾಳಿ ಯುದ್ಧದ ಕಾರ್ಮೋಡದಲ್ಲಿ ಬದುಕುತ್ತಿರುವ ಸಂದರ್ಭದಲ್ಲಿ ವರ್ಧಮಾನ ಮಹಾವೀರರ ದಿವ್ಯ ಶಾಂತಿಮಂತ್ರ ತುಂಬಾ ಅನಿವಾರ್ಯವಾಗಿದೆ ಎಂದು ಸಂಸ್ಕೃತಿ ಚಿಂತಕ ,ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಉಪನ್ಯಾಸಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ವರ್ಧಮಾನ ಮಹಾವೀರರ ಕೊಡುಗೆಗಳ ಕುರಿತು ಮಾತನಾಡುತ್ತ ಸಕಲ ಜೀವಿಗಳ ಮೇಲು ದಯೆ, ಕರುಣೆ ಪ್ರೀತಿ,ನೀಡಬೇಕು. ಎಲ್ಲಾ ಜೀವಿಗಳಿಗೂ ಬದುಕುವ ಹಕ್ಕಿದೆ ಎಂದು ಜಗತ್ತಿಗೆ ಸಾರಿದ ಜೈನ ಧರ್ಮದ 24ನೇ ತೀರ್ಥಂಕರರಾದ ಮಹಾವೀರರು ತಾವು ಕಂಡ ಸತ್ಯವನ್ನು ಜನಸಾಮಾನ್ಯರಿಗೆ ತಿಳಿಸುವ ಮೂಲಕ ಶಾಂತಿದೂತಕರಾಗಿ ಜಗತ್ತಿಗೆ ಕಲ್ಯಾಣವನ್ನು ಬಯಸಿದವರು.

ಎಲ್ಲ ವೈಭವವನ್ನು ತ್ಯಜಿಸಿ ಜ್ಞಾನವನ್ನು ಕಟ್ಟಿಕೊಳ್ಳುವ ದಿಕ್ಕಿನಲ್ಲಿ 12 ವರ್ಷಗಳ ಕಾಲ ಸುಧೀರ್ಘ ತಪಸ್ಸನ್ನು ಮಾಡಿ ಸತ್ಯವನ್ನು ಅರಿತು ದಾನದ ಮಹತ್ವವನ್ನು ಸರಳತೆಯ ಬೋಧನೆಯನ್ನು ಆತ್ಮಕಲ್ಯಾಣದ ಜೊತೆಗೆ ಜಗತ್ತಿನ ಕಲ್ಯಾಣ ನಮ್ಮ ಕರ್ತವ್ಯವಾಗಬೇಕು. ನಂಬಿದ ಸತ್ಯದ ದರ್ಶನವನ್ನು ಸರ್ವರಿಗೂ ತಿಳಿಸಿದ ಮಹಾನ್ ವ್ಯಕ್ತಿ. ವರ್ಧಮಾನ ಮಹಾವೀರರ ಮತ್ತು ಜೈನ ಧರ್ಮದ ತತ್ವಗಳು ತಾತ್ವಿಕ ಚಿಂತನೆಗಳಿಗೆ ವಿಶ್ವಧರ್ಮವಾಗಿದೆ. ಭಾರತದ ಧರ್ಮ ಪ್ರವರ್ತಕರಾಗಿ ಭಗವಾನ್ ಮಹಾವೀರರ ಹೆಸರು ಅಜರಾಮರವಾಗಿದೆ .ಅವರ ಸಾಹಿತ್ಯ ದರ್ಶನವನ್ನು ಜೀವನ ಮೌಲ್ಯಗಳು, ದಿವ್ಯ ಸಂದೇಶಗಳನ್ನು ತಿಳಿಯುವ ಪ್ರಯತ್ನ ನಮ್ಮದಾಗಬೇಕು .ಪ್ರಸ್ತುತ ಸಂದರ್ಭದಲ್ಲಿ ಜಗತ್ತು ಅಟ್ಟ ಹಾಸದಿಂದ ,ಯುದ್ಧಗಳಿಂದ ಅಹಂಕಾರದಿಂದ ತುಂಬಿದೆ. ಮಹಾವೀರರ ಸಂದೇಶಗಳು ತುಂಬಾ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಋಗ್ವೇದಿ ತಿಳಿಸಿದರು.

ಕಾರ್ಯಕ್ರಮವನ್ನು ಕಸ್ತೂರಿ ಕನ್ನಡ ಸಂಘದ ಮುಖಂಡರು ಹಾಗೂ ಉಪ್ಪಾರ ಸಮಾಜದ ಮುಖಂಡರಾದ ಬೋಧಿ ಚೀಟು ಲಿಂಗರಾಜು ಮಾತನಾಡಿ ಮಹಾವೀರರ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಮ್ಮಿಕೊಳ್ಳುವ ಮೂಲಕ ಉತ್ತಮ ಕಾರ್ಯವನ್ನು ಮಾಡಿದೆ ಸರ್ವ ಜನಾಂಗದ ಸರ್ವ ಮಹನೀಯರ ಮಹಾತ್ಮರ ಚಿಂತನೆಗಳ ಸಂಸ್ಕೃತಿ ಮೌಲ್ಯಗಳನ್ನು ತಿಳಿಯುವ ಕಾರ್ಯವನ್ನು ನಿರಂತರವಾಗಿ ಋಗ್ವೇದಿ ರವರು ನೆರವೇರಿಸಿಕೊಂಡು ಬರುತ್ತಿದ್ದಾರೆ. ಸರಳ ಜೀವನ ಮತ್ತು ಅಹಿಂಸೆಯ ಸಂದೇಶವನ್ನು ಜಗತ್ತಿಗೆ ನೀಡಿದ ಮಹಾವೀರರು ಸತ್ಯ ಸರಳ ಚಿಂತನೆಗೆ ಹೆಸರಾದವರು .ನಾವು ಕೂಡ ಸರಳವಾಗಿ ಬದುಕುವ ಕಾಯಕವನ್ನು ಪ್ರೀತಿಸುವ ಕೆಲಸವನ್ನು ಮಾಡೋಣ ಎಂದರು.

ದೊಡ್ಡರಾಯ ಪೇಟೆ ದೊರೆಸ್ವಾಮಿ ಹಾಗೂ ನಗರಸಭಾ ಮಾಜಿ ಸದಸ್ಯರಾದ ಪದ್ಮ ಪುರುಷೋತ್ತಮ್ ಮಹಾವೀರರ ಪ್ರತಿಮೆಗೆ ಪುಷ್ಪವನ್ನು ಅರ್ಪಿಸುವ ಮೂಲಕ ಉದ್ಘಾಟಿಸಿ ಶುಭ ಕೋರಿದರು. ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಬಹಳ ಸಂತೋಷವೆಂದರು. ಮನುಷ್ಯ ಎಲ್ಲ ಜನರನ್ನ ಪ್ರೀತಿಸುವ ಗುಣವನ್ನು ಬೆಳೆಸಿಕೊಳ್ಳೋಣ .ಅಹಿಂಸಾ ತತ್ವ ನಮ್ಮ ತತ್ವವಾಗಲಿ ಎಂದರು .

ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ಬಿಕೆ ಆರಾಧ್ಯರವರು ಏಕಾಗ್ರತೆ ಧ್ಯಾನ ಮತ್ತು ಪ್ರಾರ್ಥನೆಯ ಮೂಲಕ ಜೀವನದ ಸತ್ಯವನ್ನು ತಿಳಿಯಬೇಕು ಮೌನದ ಮೂಲಕ ಶಾಂತಿ ಸಂದೇಶವನ್ನು ಸಾರೋಣ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ರವಿಚಂದ್ರಪ್ರಸಾದ್, ಎಲ್ ಶಿವಲಿಂಗ ಮೂರ್ತಿ, ಗೀತಾ ಸುರೇಶ್ ಗೌಡ, ಮಂಜುನಾಥ್, ಮಹೇಶ್ ಮುಂತಾದವರು ಇದ್ದರು.

RELATED ARTICLES
- Advertisment -
Google search engine

Most Popular