ಮೈಸೂರು: ಬನ್ನೂರಿನ ಸಮೀಪದ ನವಕೀಸ್ ಶಿಕ್ಷಣ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾದ ವಾರ್ಷಿಕ ಕ್ರೀಡಾ ಕೂಟವನ್ನು ಮಹೇಂದ್ರ ಸಿಂಗ್ ಕಾಳಪ್ಪ ಚಾಲನೆ ನೀಡಿದರು.
ಶಾಲಾ ಮೈದಾನದಲ್ಲಿ ನೆಡೆದ ಕ್ರೀಡಾ ದಿನಾಚಾರಣೆಗೆ ಪರಿಸರ ಜಾಗೃತಿವೇದಿಕೆ ಅಧ್ಯಕ್ಷ ಹಾಗೂ ಸಮಾಜ ಸೇವೆಕ ಡಾ. ಮಹೇಂದ್ರ ಸಿಂಗ್ ಕಾಳಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕ್ರೀಡಾಜ್ಯೋತಿ ಬೆಳಗಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಈ ವೇಳೆ ಮಹೇಂದ್ರ ಸಿಂಗ್ ಕಾಳಪ್ಪರವರಿಗೆ ವಿದ್ಯಾರ್ಥಿಗಳು ಗೌರವವಂದನೆ ಸಲ್ಲಿಸಿದರು ಬಳಿಕ ಮಾತನಾಡಿದ ಮಹೇಂದ್ರ ಸಿಂಗ್ ಕಾಳಪ್ಪ ನವಕೀಸ್ ಶಿಕ್ಷಣಸಂಸ್ಥೆ ಅತ್ಯುತ್ತಮ ಶಿಕ್ಷಣದ ಜೊತೆಗೆ ಕ್ರೀಡೆ ಹಾಗೂ ಇನ್ನಿತರ ಚಟುವಟಿಕೆಗಳಲ್ಲೂ ಮುಂದಿದೆ ಎಂದು ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಬಳಿಕ ಪಂದ್ಯಾವಳಿಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿದರು.
ಇನ್ನು ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣ ಇಲಾಖೆಯ ಮೈಸೂರು ಜಿಲ್ಲಾ ನಿರ್ದೇಶಕ ಹೆಚ್.ಕೆ.ಪಾಂಡು,ನವಕೀಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಿ. ಎಸ್.ತರಕೇಶ್ವರಿ, ಎಚ್ ಆರ್ ವರ್ಧನ್ ಮೂರ್ತಿ ಕೆ ಎಸ್, ಸಂತೋಷ್ ಕನ್ವರ್ (ಚಂದು)ಕಾಳಪ್ಪ,ರಾಜ್ಯ ಭಾರತ್ ಸ್ಕೌಟ್ ಅಂಡ್ ಗೈಡ್ ನ ಜಿಲ್ಲಾ ಸಂಘದ ಜಿಲ್ಲಾ ಸಂಘಟಕ ಡಾ.ರಾಮ್ ಪ್ರಸಾದ್,ಡಾ. ಸೌಮ್ಯ,ವ್ಯವಸ್ಥಾಪಕರುಗಳಾದ ಮಹೇಶ್,ಅನೂಪ್, ನವಕೀಸ್ ಶಿಕ್ಷಣ ಸಂಸ್ಥೆಯ ಅಧ್ಯಾಪಕ ವೃಂದದವರು ಹಾಜರಿದ್ದರು.