ತುಳು ಭಾಷೆ, ಲಿಪಿ ಹಾಗೂ ಸಂಸ್ಕೃತಿಯ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಜೈ ತುಳುನಾಡ್ (ರಿ.) ಸಂಘಟನೆಯ ಕಾರ್ಲ ಘಟಕದ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ತೆಳ್ಳಾರು ಶ್ರೀ ಗುರು ರಾಘವೇಂದ್ರ ಮಠದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಮುಂದಿನ ಅವಧಿಯ ಸಾರಥಿಯಾಗಿ ಯುವ ಸಂಘಟಕ ಮಹೇಶ್ ಕುಲಾಲ್ ಬೇಲಾಡಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಹಾಲಿ ಅಧ್ಯಕ್ಷರಾದ ರವಿಚಂದ್ರ ಕಾರ್ಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘಟನೆಯ ಕಳೆದ ವರ್ಷದ ಚಟುವಟಿಕೆಗಳ ಬಗ್ಗೆ ಪರಾಮರ್ಶೆ ನಡೆಸಲಾಯಿತು. ಬಳಿಕ ಕೇಂದ್ರ ಸಮಿತಿಯ ಪದಾಧಿಕಾರಿಗಳ ನೇತೃತ್ವದಲ್ಲಿ ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಯಿತು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಹೇಶ್ ಕುಲಾಲ್ ಬೇಲಾಡಿ , ಉಪಾಧ್ಯಕ್ಷರಾಗಿ ನಿತಿನ್ ನಲ್ಲೂರು, ಮುಖ್ಯ ಕಾರ್ಯದರ್ಶಿಯಾಗಿ ಅಕ್ಷತಾ ಸಾಲ್ಯನ್,ಉಪ ಕಾರ್ಯದರ್ಶಿಯಾಗಿ ಶಶಿಕಲಾ,ಕೋಶಧಿಕಾರಿಯಾಗಿ ಮಹೇಶ್ ಮೊಯ್ಲಿ, ಉಪಕೋಶಾಧಿಕಾರಿಯಾಗಿ ಗೌತಮಿ ಶೆಟ್ಟಿಗಾರ್,ಸಂಘಟನಾ ಕಾರ್ಯದರ್ಶಿಯಾಗಿ ಅಶ್ವಿತ್ ಸಮಾನಿ ಬೇಲಾಡಿ, ಉಪಸಂಘಟನಾ ಕಾರ್ಯದರ್ಶಿಯಾಗಿ ದೀಪಕ್ ಶೆಟ್ಟಿ ಬೇಲಾಡಿ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸಂತೋಷ್ ಕೆದಿಂಜೆ, ಪ್ರವೀಣ್ ಮುಂಡ್ಲಿ ಹಾಗು ರಶ್ಮಿತಾ ಶೆಟ್ಟಿ ಇವರು ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರಾದ ಮಹೇಶ್ ಕುಲಾಲ್ ಬೇಲಾಡಿ ಮಾತನಾಡುತ್ತಾ, “ಕಾರ್ಲ ಘಟಕದ ಮೂಲಕ ತುಳು ಭಾಷೆಯ ಉಳಿವಿಗಾಗಿ ಮತ್ತು ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಶ್ರಮಿಸುವುದಾಗಿ” ಭರವಸೆ ನೀಡಿದರು. ಸಭೆಯಲ್ಲಿ ಜೈ ತುಲುನಾಡ್ (ರಿ.) ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಸುಕೇಶ್ ಕೆಮ್ಮಾಯಿ, ಜೊತೆ ಕಾರ್ಯದರ್ಶಿ ಚಿತ್ರಾಕ್ಷಿ ಮೊಗೆರ ತೆಗ್ಗು,ಕೇಂದ್ರ ಸಮಿತಿ ಕೋಶಾಧಿಕಾರಿ ನಿಶಿಲ್ ಶೆಟ್ಟಿ ಬೇಲಾಡಿ, ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಉದಯ್ ಪೂಂಜ, ಸ್ಥಾಪಕ ಸಮಿತಿಯ ಸದಸ್ಯರಾದ ಕಿರಣ್ ತುಲುವೆ, ಸದಾಶಿವ ಮುದ್ರಾಡಿ, ಕುಡ್ಲ ಘಟಕದ ಕಾರ್ಯದರ್ಶಿ ಶರತ್ ರಾಜ್ ಆಲಂಕಾರ್ ಮತ್ತಪ ಘಟಕದ ಹಿರಿಯ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ರಸ್ತೆ ಸುರಕ್ಷತೆಗಾಗಿ ಪೀನ ದರ್ಪಣಗಳ (Blind Mirrors) ಆಳವಡಿಕೆ:
ಜೈ ತುಲುನಾಡ್ (ರಿ.) ಕಾರ್ಲ ಘಟಕದ ವತಿಯಿಂದ ಕಾರ್ಕಳ ಮಾರ್ಕೆಟ್ ರಸ್ತೆಯ ದಾರಿಯಲ್ಲಿ ರಾಧಿಕಾ ಚಿತ್ರಮಂದಿರದಿಂದ ಕಟೀಲ್ ಅಂತಾರಾಷ್ಟ್ರೀಯ ಹೋಟೆಲ್ ಹೋಗುವ ತಿರುವಿನ ಬಳಿ ವಾಹನ ಸವಾರರ ಸುರಕ್ಷತೆಗಾಗಿ ಪೀನ ದರ್ಪಣಗಳನ್ನು (Convex Mirrors/Blind Mirrors) ಅಳವಡಿಸಲಾಯಿತು. ಇದರಿಂದ ಎದುರಿನಿಂದ ಬರುವ ವಾಹನಗಳು ಸ್ಪಷ್ಟವಾಗಿ ಗೋಚರಿಸಲಿದ್ದು, ಸಂಭವನೀಯ ಅಪಘಾತಗಳನ್ನು ತಡೆಯಬಹುದಾಗಿದೆ. ಪೀನ ದರ್ಪಣವನ್ನು ಕಾರ್ಕಳ ಶ್ರೀಮಾರಿಯಮ್ಮ ಹೂವಿನ ಅಂಗಡಿ ಮಾಲೀಕರಾದ ಶ್ರೀಭಾಸ್ಕರ್ ಕುಲಾಲ್ ಇವರು ಲೋಕಾರ್ಪಣೆಗೈದರು. ಈ ಸಂಧರ್ಭದಲ್ಲಿ ಸಂಘದ ಸದಸ್ಯರು ಉಪಸ್ಥಿತರಿದ್ದರು.



