ಮಂಗಳೂರು (ದಕ್ಷಿಣ ಕನ್ನಡ) : ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಮಂಗಳೂರಿನ ನ್ಯಾಯಾಲಯವು ಸೆ.30ಕ್ಕೆ ಮುಂದೂಡಿದೆ.
ಇಂದು ಶನಿವಾರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ವೇಳೆ ಜಾಮೀನು ಅರ್ಜಿಗೆ ಆಕ್ಷೇಪ ಸಲ್ಲಿಸಲು ಸಕಾರಿ ವಕೀಲರು ಸಮಯಾವಕಾಶ ಕೋರಿದ್ದಾರೆ ಅದನ್ನು ಪುರಸ್ಕರಿಸಿದ ನ್ಯಾಯಾಧೀಶರು ಸೆ.30ಕ್ಕೆ ವಿಚಾರಣೆಯ ನ್ನು ಮುಂದೂಡಿದ್ದಾರೆ.