Monday, December 8, 2025
Google search engine

HomeUncategorizedಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ವಿಚಾರಣೆ

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ವಿಚಾರಣೆ

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ವಿಚಾರಣೆ ಪುತ್ತೂರಲ್ಲಿಂದು ಮುಕ್ತಾಯಗೊಂಡಿದೆ. ಡಿಸೆಂಬರ್ 11 ಕ್ಕೆ ಆಕ್ಷೇಪಣೆ ಸಲ್ಲಿಸಲು ತಿಮರೋಡಿಯವರಿಗೆ ಸಹಾಯಕ ಆಯುಕ್ತರು ಸೂಚಿಸಿದ್ದಾರೆ ಎಂದು
ಮಾಧ್ಯಮಗಳಿಗೆ ತಿಮರೋಡಿ ಪರ ವಕೀಲ ವಿಜಯವಾಸು ಹೇಳಿಕೆ ನೀಡಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿಯನ್ನು ಗಡಿಪಾರು ಆದೇಶ ಊರ್ಜಿತ ಮಾಡಲು ಸಹಾಯಕ ಆಯುಕ್ತರು
ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ. ಇದೇ ವೇಳೆ ಸುಪ್ರೀಂಕೋರ್ಟ್ ಮತ್ತು‌ ಇತರ ನ್ಯಾಯಾಲಯಗಳ ತೀರ್ಪುಗಳ ದಾಖಲೆಗಳನ್ನು ತಿಮರೋಡಿ ವಕೀಲರು ಕೊಟ್ಟಿದ್ದಾರೆ. ತಿಮರೋಡಿ ಭಾಷಣದಿಂದ ಸಮಾಜದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಮೊದಲ ಗಡಿಪಾರು ಆದೇಶಕ್ಕೆ ಹೈಕೋರ್ಟ್ ತಡೆ ನೀಡಿತ್ತು.
ಈ ಸಂದರ್ಭದಲ್ಲಿ ತಿಮರೋಡಿ ವಿರುದ್ಧ ಸೆಕ್ಷನ್ 55 a ಅಥವಾ 55 b ಪ್ತಕಾರ ಆದೇಶ ಹೊರಡಿಸಲಾಗಿದೆಯೋ ಅನ್ನೋದನ್ನ ಕೋರ್ಟ್ ಸಹಾಯಕ ಆಯುಕ್ತರಿಂದ ಸ್ಪಷ್ಟನೆ ಕೇಳಿತ್ತು. ಡಿಸೆಂಬರ್ 15 ಒಳಗೆ ವರದಿ ನೀಡುವಂತೆ ಸಹಾಯಕ ಆಯುಕ್ತರಿಗೆ ನ್ಯಾಯಾಲಯ ಸೂಚಿಸಿತ್ತು. ಅಲ್ಲಿ ತನಕ ಗಡಿಪಾರು ಆದೇಶಕ್ಕೆ ತಡೆ ನೀಡಿತ್ತು. 55 a ಯಲ್ಲಿ ಅಥವಾ 55b ಯಲ್ಲಿ ಆದೇಶ ನೀಡಲಾಗಿದೆಯೋ ಎನ್ನುವ ವಿಚಾರದಲ್ಲಿ ಸಹಾಯಕ ಆಯುಕ್ತರು ನಮ್ಮಲ್ಲಿ ಸ್ಪಷ್ಟನೆ ಕೇಳಿದ್ದರು. ಅದಕ್ಕೆ ನಾವು ಅವರಲ್ಲಿ ಸಮಯಾವಕಾಶ ಕೊಡಬೇಕು ಎಂದು ಕೇಳಿದ್ದೇವೆ. ಸಾಮಾಜಿಕ ನ್ಯಾಯದ ಪ್ರಕಾರ ಈ ಅವಕಾಶ ನೀಡಬೇಕು. ಪೊಲೀಸರು ತಮ್ಮ ವರದಿಯಲ್ಲಿ 1997 ಹಳೆ ಪ್ರಕರಣಗಳನ್ನು ಉಲ್ಲೇಖಿಸಿದ್ದಾರೆ. ಆ ಎಲ್ಲಾ ಪ್ರಕರಣಗಳು ದೋಷಮುಕ್ತವಾಗಿದೆ. 2 ಪ್ರಕರಣಗಳಲ್ಲಿ ಬಿ ರಿಪೋರ್ಟ್ ಸಲ್ಲಿಕೆಯಾಗಿದೆ. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ಮೇಲ್ಮನವಿಯನ್ನೂ ಸಲ್ಲಿಸಿಲ್ಲ. ಅಲ್ಲದೇ ತಿಮರೋಡಿ ಮಾಡಿದ ಭಾಷಣದಿಂದ ಯಾವುದೇ ಕೋಮುಗಲಭೆ, ಅಶಾಂತಿಯಂತಹ ದೊಡ್ಡ ಘಟನೆಗಳು ನಡೆದಿಲ್ಲ. ಈ ಕಾರಣಕ್ಕೆ ನಮಗೆ ಸಮಯಾವಕಾಶವನ್ನು ನೀಡಬೇಕೆಂದು ಆಯುಕ್ತರ ಮುಂದೆ ವಾದಿಸಿದ್ದೇವೆ. ಡಿಸೆಂಬರ್ 11 ರಂದು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದ್ದಾರೆ. ಅಂದು ಆಕ್ಷೇಪಣೆಯನ್ನು ಸಲ್ಲಿಸುತ್ತೇವೆ. ತೀರ್ಪು‌ ನಮ್ಮ ಪರವಾಗಿ ಬರದಿದ್ದಲ್ಲಿ ಮತ್ತೆ ನ್ಯಾಯಾಲಯದ ಮುಂದೆ ಹೋಗುತ್ತೇವೆ ಎಂದು ವಕೀಲರು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular