ವರದಿ: ರವಿಚಂದ್ರ ಬೂದಿತಿಟ್ಟು
ಪಿರಿಯಾಪಟ್ಟಣ : ಮಹಿಳಾ ಸಬಲೀಕರಣವಾಗಲು ಹೈನುಗಾರಿಕೆಯಲ್ಲಿ ಮಹಿಳೆಯರು ತೊಡಗಿಸಿಕೊಳ್ಳಲು ಹಾಲು ಒಕ್ಕೂಟವು ಉತ್ತೇಜನ ನೀಡುತ್ತಿದೆ ಎಂದು ಮೈಮುಲ್ ವಿಸ್ತರಣಾಧಿಕಾರಿ ಸಚ್ಚಿನ್ ತಿಳಿಸಿದರು.

ತಾಲೂಕಿನ ಬೂದಿತಿಟ್ಟು ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಆಯವ್ಯಯ ಮಂಡಿಸಿ ಮಾತನಾಡಿದರು.
ಪುರುಷರಂತ್ತೆ ಮಹಿಳೆಯರು ಸಬಲೀಕರಣ ಗೊಳ್ಳಬೇಕು ಎನ್ನುವ ಧ್ಯಯೋದ್ದೇಶದಿಂದ ಹಾಲು ಉತ್ಪಾದಕ ಸಹಕಾರ ಕ್ಷೇತ್ರದಲ್ಲಿ ಮಹಿಳೆಯರಿಗೆ ಹಾಲು ಉತ್ಪಾದಕ ಸಹಕಾರ ಸಂಘಗಳನ್ನು ನಿರ್ಮಾಣ ಮಾಡಿಕೊಡಲಾಗಿದೆ. ಈ ಮೂಲಕ ಮಹಿಳೆಯರು ಆರ್ಥಿಕ ಸಬಲೀಕರಣಗೊಂಡು ಸಾಮಾಜಿಕ ಜಾಗೃತಿ ಹೊಂದಲು ಸಾಧ್ಯವಾಗುತ್ತಿದೆ. ಇಂದು ಮಹಿಳೆಯರು ಅನೇಕ ಕ್ಷೇತ್ರಗಳಲ್ಲಿ ಸಾಧನೆಗೈದು ಪುರುಷರಿಗೆ ಸರಿ ಸಮಾನವಾಗಿ ಜೀವನ ನಡೆಸುತ್ತಿದ್ದಾರೆ.ಈ ಸಹಕಾರ ಸಂಘದಲ್ಲಿ 1 ಕೋಟಿ 47 ಲಕ್ಷ ಹಾಲು ಖರೀದಿಯಾಗಿದ್ದು ಇದರಲ್ಲಿ 1ಕೋಟಿ 48 ಲಕ್ಷ ಒಕ್ಕೂಟದ ಖರೀದಿಯಾಗಿದೆ ಅಂತೆಯೇ 7 ಲಕ್ಷ 72 ಸಾವಿರ ಲಾಭ ಹೊಂದಿದ್ದು,5 ಲಕ್ಷ 44 ಸಾವಿರ ಖರ್ಚಾಗಿದ್ದು ಪ್ರಸ್ತುತ 1 ಲಕ್ಷ 61 ಸಾವಿರದಷ್ಟು ಲಾಭವನ್ನು ಹೊಂದಿದೆ ಎಂದರು.
ಸಂಘದ ಅಧ್ಯಕ್ಷೆ ಸರಸ್ವತಿ ಮಾತನಾಡಿ ಈ ಹಿಂದೆ ಇದ್ದ ಕಾರ್ಯದರ್ಶಿ ಹಣಕಾಸು ಲೋಪ ಮಾಡಿರುವ ಬಗ್ಗೆ ಪ್ರಕರಣ ದಾಖಳಿಸಲಾಗಿದೆ.ಅತೀ ಶೀಘ್ರದಲ್ಲಿ ಈ ಹಣವನ್ನು ಪಾವತಿಸಲು ಕ್ರಮ ತೆಗೆದುಕೊಳ್ಳಲಾಗುವುದು ಆದರಿಂದ್ದ ಸಂಘದಲ್ಲಿ ಸಾಲ ಪಡೆದಿರುವವರು ಸಕಾಲಕ್ಕೆ ಸಾಲ ಪಾವತಿಸಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಪ್ರಭಾವತಿ, ನಿರ್ದೇಶಕರಾದ ಸರೋಜಮ್ಮ, ನಿಂಗಾಜಮ್ಮ,
ಭಾಗ್ಯಮ್ಮ, ಜಯಲಕ್ಷ್ಮಿ, ಸಣ್ಣಮ್ಮ, ಲಲಿತಾ, ಆಶಾ, ಕವಿತಾ, ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಪವಿತ್ರ ಪ್ರಕಾಶ್, ಸಿಬ್ಬಂದಿ ರೇಖಾ, ಗ್ರಾ ಪಂ ಸದಸ್ಯ ರವಿಚಂದ್ರ, ಶಾರದ ಕಾಂತರಾಜು, ಗ್ರಾಮದ ಯಜಮಾನರು ಮಹದೇಶ್ವರ ಮುಖಂಡರಾದ ಕುಮಾರ್, ಕೃಷ್ಣಪ್ಪ, ರಾಜು, ನರಸಿಂಹ ಗೌಡ, ಪ್ರಕಾಶ್, ಅಣ್ಣೇಗೌಡ, ಬೋರೇಗೌಡ, ಮೋಹನ ಸೇರಿದಂತ್ತೆ ಇತರರಿದ್ದರು.