ರಾಮನಗರ:ಕೇಂದ್ರ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ ಎಂದು ಕೇಂದ್ರ ಸರ್ಕಾರದ ರಾಜ್ಯ ಖಾತೆ ಇಂಧನ ಹಾಗೂ ಬಾರಿಕೈಗಾರಿಕ ಸಚಿವ ಕೃಷ್ಣ ಪಾಲ್‌ಗುರ್ಜರ್‌ಅವರು ತಿಳಿಸಿದರು.
ಅವರು ಇಂದು ಚನ್ನಪಟ್ಟಣ ತಾಲ್ಲೂಕಿನ ಸುಳ್ಳೇರಿ ಗ್ರಾಮದಲ್ಲಿ ವಿಕಸಿತ ಭಾರತ್ ಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮೊದಲು ಭಾರತವು ಆರ್ಥಿಕತೆಯಲ್ಲಿ ಹಿಂದುಳಿದಿರುವುದನ್ನು ಮನಗಂಡು ಕೇಂದ್ರ ಸರ್ಕಾರವು ಜನರಿಗೆ ಹಲವಾರು ಯೋಜನೆಗಳನ್ನು ರೂಪಿಸಿತು ಜನರು ಈ ಯೋಜನೆಯ ಸೌಲಭ್ಯಗಳ ಸದುಪಯೋಗ ಪಡೆದು ಕೊಂಡಿದ್ದಾರೆ.ಮೊದಲಿಗಿಂತ ಈಗ ಭಾರತವು ಆರ್ಥಿಕತೆಯಲ್ಲಿ ಬಲಿಷ್ಠವಾಗಿದೆ ಎಂದು ತಿಳಿಸಿದರು. ಮಹಿಳೆಯರ ಸಬಲೀಕರಣವನ್ನುಖಾತ್ರಿಪಡಿಸಲುಪ್ರಧಾನ ಮಂತ್ರಿಉಜ್ವಲ ಯೋಜನೆಯಡಿಬಿಪಿಎಲ್ ಕುಟುಂಬಗಳ ಮಹಿಳೆಯರಿಗೆ ೩೭.೫ ಲಕ್ಷಉಚಿತಎಲ್ಪಿಜಿ ಅನಿಲ ಸಂಪರ್ಕಗಳನ್ನು ಅಳವಡಿಸಲಾಗಿದೆ.ಕರ್ನಾಟಕದಲ್ಲಿ ೪೬೦೮ ಕಿಮೀ ರಾಷ್ಟ್ರೀಯಹೆದ್ದಾರಿಗಳನ್ನು ನಿರ್ಮಿಸಲಾಗಿದೆಎಂದರು. ಅಮೃತ ಭಾರತ ನಿಲ್ದಾಣಗಳ ಅಡಿಯಲ್ಲಿ ೫೬ ರೈಲು ನಿಲ್ದಾಣಗಳನ್ನು ಆಧುನೀಕರಿಸಲಾಗಿದೆ ಮತ್ತುರಾಜ್ಯದಲ್ಲಿ ೪ ವಂದೇ ಭಾರತ್ ರೈಲುಗಳು ಈಗಾಗಲೇ ಸಂಚರಿಸುತ್ತಿದೆ.ಬುಡಕಟ್ಟು ಸಮುದಾಯಗಳಿಗೆ ಗೌರವಗಳು, ಹಕ್ಕುಗಳು ಹಾಗೂ ಅವಕಾಶಗಳನ್ನು ಕಲ್ಪಿಸಲಾಗಿದೆಎಂದು ತಿಳಿಸಿದರು.
ಪ್ರಧಾನಮಂತ್ರಿವಿಶ್ವಕರ್ಮಯೋಜನೆಗೆಕೇಂದ್ರ ಸರ್ಕಾರದಿಂದ೧೩ ಸಾವಿರಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ ಹಾಗೂ ೧೫ ಸಾವಿರ ರೂ.ಗಳವರೆಗೆ ಟೂಲ್‌ಕಿಟ್ ಪ್ರೋತ್ಸಾಹ, ಕೌಶಲ್ಯಉನ್ನತೀಕರಣ, ಡಿಜಿಟಲ್ ವಹಿವಾಟಿಗೆ ಪ್ರೋತ್ಸಾಹ ಮತ್ತು ಮಾರುಕಟ್ಟೆ ಬೆಂಬಲ ನೀಡಲಾಗಿದೆ.೩,೯೫೮ ವನ್‌ಧನ್ ವಿಕಾಸ ಕೇಂದ್ರಗಳನ್ನು ಮಂಜೂರು ಮಾಡಲಾಗಿದೆ.೧೧.೮೩ ಲಕ್ಷ ಬುಡಕಟ್ಟುಜನರು ಇವುಗಳೊಂದಿಗೆ ಸಂಪರ್ಕ ಹೊಂದಿದ್ದಾರೆಎಂದರು. ಮಾತೃವಂದನಾಯೋಜನೆಯಡಿಗರ್ಭಿಣಿ ಮಹಿಳೆಯರಿಗೆ ೫೦೦೦ ರೂ.ಗಳನ್ನು ನೀಡಲಾಗುತ್ತಿದೆ.ಪಿಎಂ ಕಿಸಾನ್‌ಯೋಜನೆಯಡಿರೈತರುಪಂಪ್‌ಸೆಟ್‌ಗಳನ್ನು ಖರೀದಿಸಿದರೆ ೬೦ ರಷ್ಟು ಸಬ್ಸಿಡಿ ನೀಡಲಾಗುವುದು.ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈ ಕೇಂದ್ರಗಳಲ್ಲಿ ಕಡಿಮೆ ಬೆಲೆಯಲ್ಲಿ ಔಷಧಿಗಳನ್ನು ನೀಡಲಾಗುತ್ತಿದ್ದು, ಅಪಾರಜನರುಇದರ ಸದುಪಯೋಗ ಪಡೆದುಕೊಂಡಿದ್ದಾರೆಎಂದು ತಿಳಿಸಿದರು.

ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕಗಳನ್ನು ಅಳವಿಡಿಸಲಾಗಿದ್ದು, ಇದರಿಂದ೧೮ ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ವಿದ್ಯುತ್ ಪೂರೈಸಲಾಗುತ್ತಿದೆಎಂದು ಹೇಳಿದರು. ಇದೇ ಸಂದರ್ಭದಲ್ಲಿಪ್ರಧಾನ ಮಂತ್ರಿಉಜ್ವಲ ಯೋಜನೆಯಡಿಫಲಾನುಭವಿಗಳಿಗೆ ಎಲ್‌ಪಿಜಿಕನೆಕ್ಷನ್‌ನೀಡಲಾಯಿತು ಹಾಗೂ ಬೆಳೆ ಸಾಲ ಯೋಜನೆಯಡಿರೈತರಿಗೆಸಾಲ ಮಂಜೂರಾತಿ ಪತ್ರ ವಿತರಿಸಿದರು.
ಕಾರ್ಯಕ್ರಮದಲ್ಲಿವಿಧಾನ ಪರಿಷತ್ ಶಾಸಕರಾದಸಿ.ಪಿ ಯೋಗೇಶ್ವರ್, ಚನ್ನಪಟ್ಟಣತಾಲ್ಲೂಕುಕಾರ್ಯನಿರ್ವಾಹಕಅಧಿಕಾರಿಶಿವಕುಮಾರ್ ಸೇರಿದಂತೆಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.