ಬೆಟ್ಟದಪುರ : ಹೈನುಗಾರಿಕೆ ಕೇವಲ ಹಾಲು ಉತ್ಪಾದನೆಗೆ ಮಾತ್ರ ಸೀಮಿತವಾಗಿಲ್ಲ, ಇದು ಒಂದು ಸಮಗ್ರ ವ್ಯವಸ್ಥೆಯಾಗಿದೆ ಎಂದು ಸಂಘದ ಅಧ್ಯಕ್ಷ ಶಿವಕುಮಾರ್ ತಿಳಿಸಿದರು.
ಗ್ರಾಮದ ಬಸವೇಶ್ವರ ಕಾಲೋನಿ ಹಾಲು ಉತ್ಪಾದಕ ಸಹಕಾರ ಸಂಘದ ಆವರಣದಲ್ಲಿ ಬುಧವಾರ ನಡೆದ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು ಸಂಘಕ್ಕೆ ಶುದ್ಧ, ತಾಜಾ, ಮತ್ತು ಉತ್ತಮ ಗುಣಮಟ್ಟದ ಹಾಲನ್ನು ಸರಬರಾಜು ಮಾಡುವುದರಿಂದ, ಉತ್ಪಾದಕರಿಗೆ ಉತ್ತಮ ಬೆಲೆ ಮತ್ತು ಪ್ರೋತ್ಸಾಹ ಧನವನ್ನು ಸಿಗುತ್ತದೆ, ಸಂಘದ ಕಾರ್ಯಚಟುವಟಿಕೆಗಳಿಲ್ಲಿ ಸದಸ್ಯರು ಕೂಡ ಕೆಲವೊಂದು ಕರ್ತವ್ಯಗಳನ್ನು ಪಾಲಿಸಿ ಸಂಘವು ಆರ್ಥಿಕವಾಗಿ ಪ್ರಬಲಗೊಳ್ಳಲು ಸಹಾಯ ನೀಡಬೇಕು, ಎಂದರು.

ವಿಸ್ತರಣಾಧಿಕಾರಿ ಸತೀಶ್ ಮಾತನಾಡಿ ಒಕ್ಕೂಟ ಮತ್ತು ಸರ್ಕಾರಗಳ ಸಹಯೋಗದೊಂದಿಗೆ, ರೈತರಿಗೆ ಪಶು ಖರೀದಿಗೆ ಸಬ್ಸಿಡಿ, ವಿಮೆ ಯೋಜನೆಗಳು ಮತ್ತು ಇತರ ಆರ್ಥಿಕ ಸಹಾಯಗಳು ಲಭ್ಯವಿರುತ್ತದೆ, ಹಾಲು ಉತ್ಪಾದನೆಯಲ್ಲಿ ಇತ್ತೀಚಿನ ತಂತ್ರಜ್ಞಾನಗಳು, ನೈರ್ಮಲ್ಯ ಮತ್ತು ದನದ ಸಾಕಣೆಯ ಬಗ್ಗೆ ರೈತರಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಇದನ್ನು ಉತ್ಪಾದಕರು ಹಾಗೂ ನಿರ್ದೇಶಕರು, ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಸಂಘಕ್ಕೆ ಗುಣಮಟ್ಟದ ಹಾಲು ಸರಬರಾಜು ಮಾಡಿದ 3 ಮಂದಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷೆ ಸುಕನ್ಯಾಪಾಪಣ್ಣ, ನಿರ್ದೇಶಕರಾದ ಲಲಿತಾ ಉದಯ್, ಸಂತೋಷ್ ಬಿ.ಆರ್, ಭಾಸ್ಕರ್, ಸ್ವಾಮಿಗೌಡ, ಚಂದ್ರು, ಆನಂದ್, ಮಂಜುನಾಥ್ ಬಿ.ಎಸ್, ರಾಜಶೇಖರ್,ಮಲ್ಲೇಶ್ ನಾಯಕ್, ಕಾರ್ಯದರ್ಶಿ ಪದ್ಮ, ಸಿಬ್ಬಂದಿ ರಾಜೇಶ್ ಮುಖಂಡರಾದ ಉದಯ್, ನಂದೀಶ್ ಉತ್ಪಾದಕರು, ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.