Wednesday, October 8, 2025
Google search engine

Homeರಾಜ್ಯಸುದ್ದಿಜಾಲಬೇರ್ಯದಲ್ಲಿ ಅಕ್ರಮವಾಗಿ ಗಾಂಜಾ ಮಾರುತ್ತಿದ್ದ ವ್ಯಕ್ತಿ ಬಂಧನ

ಬೇರ್ಯದಲ್ಲಿ ಅಕ್ರಮವಾಗಿ ಗಾಂಜಾ ಮಾರುತ್ತಿದ್ದ ವ್ಯಕ್ತಿ ಬಂಧನ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನ ಸಾಲಿಗ್ರಾಮ ಪೊಲೀಸರು ಮಾಲು ಸಮೇತ ಬಂಧಿಸಿರುವ ಘಟನೆ ನಡೆದಿದೆ. ಬೇರ್ಯ ಗ್ರಾಮದ ವಾಸಿಂ ಅಕ್ರಂ (48) ಎಂಬಾತನನ್ನು ಬಂಧಿಸಿರುವ ಪೊಲೀಸರು ಈತ ನಿಂದ 130 ಗ್ರಾಂ ಗಾಂಜಾವನ್ನು ವಶಪಡಿಸಿದ್ದಾರೆ
ಬೇರ್ಯ ಗ್ರಾಮದ ಕೆ.ಆರ.ಪೇಟೆ ಮುಖ್ಯ ರಸ್ತೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಈತನ ವಿರುದ್ದ NDPS ಅಕ್ಟ್ ರೀತ್ಯ ಪ್ರಕರಣ ದಾಖಲಿದ್ದಾರೆ.

ಸಾಲಿಗ್ರಾಮ ಪೊಲೀಸ್ ಠಾಣೆಯ ವೃತ್ತ ನೀರಿಕ್ಷಕ ಶಶಿಕುಮಾರ್ ಅವರ ಮಾರ್ಗದರ್ಶನದಲ್ಲಿ ಸಾಲಿಗ್ರಾಮ ಠಾಣೆಯ ASI ಆರ್.ಸಿದ್ದರಾಜು , ಮುಖ್ಯಪೇದೆ ಆನಂದ್, ಸಿಬ್ಬಂದಿಗಳಾದ ಕೆಂಪರಾಜು, ಗೋವಿಂದು,ಯಶವಂತ್,ಮಂಜು, ರಘು, ಬಸವರಾಜು, ಚಾಲಕ ದಿನೇಶ್ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು

RELATED ARTICLES
- Advertisment -
Google search engine

Most Popular