ವರದೆ ಎಡತೊರೆ ಮಹೇಶ್
ಹೆಚ್.ಡಿ.ಕೋಟೆ: ಎಚ್ ಡಿ ಕೋಟೆ ಪಟ್ಟಣದ ಗದ್ದಿಗೆ ಸರ್ಕಲ್ ಬಳಿ ಅಕ್ರಮವಾಗಿ ಒಣ ಗಾಂಜಾ ಸೊಪ್ಪು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ವ್ಯಕ್ತಿಯನ್ನು ಎಚ್ ಡಿ ಕೋಟೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಸೊಪ್ಪು ಮತ್ತು ಮಾರಟ ಮಾಡಲು ಬಳಸುತ್ತಿದ್ದ ಪ್ಯಾಸೆಂಜರ್ ಆಟೋ ವನ್ನು ವಶಕ್ಕೆ ಪಡೆದ ಘಟನೆ ಶನಿವಾರ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ನಿವಾಸಿ ದೇವರಾಜು ಕುಮಾರ್ @ ಅಪ್ಪು ಕುಮಾರ್ 175 ಗ್ರಾಮ್ ಗಾಂಜಾ ಸೊಪ್ಪನ್ನು ಬಿಡಿಬಿಡಿಯಾಗಿ ಪ್ಯಾಕ್ ಮಾಡಿ ಮಾರಟ ಮಾಡುತ್ತಿದ್ದಾಗ ಸಿಕ್ಕಿ ಬಿದ್ದ ಆರೋಪಿ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ವಿಷ್ಣುವರ್ಧನ್ ಐಪಿಎಸ್ ರವರು ಹಾಗೂ ಪೊಲೀಸ್ ಅಪರಾಧಿಕ್ಷಕರುಗಳಾದ ಶ್ರೀ ಮಲ್ಲಿಕ್ ರವರು ಮತ್ತು ಶ್ರೀ ನಾಗೇಶ್ ರವರು ಹಾಗೂ ಹುಣಸೂರು ಉಪ ವಿಭಾಗದ ಡಿವೈಎಸ್ಪಿ ಗೋಪಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ ಹೆಚ್.ಡಿ.ಕೋಟೆ ಪೊಲೀಸ್ ಇನ್ಸ್ಪೆಕ್ಟರ್ ಗಂಗಾಧರ್ ಅವರ ನೇತೃತ್ವದಲ್ಲಿ ಸಬ್ ಇನ್ಸ್ಪೆಕ್ಟರ್ ಚಿಕ್ಕನಾಯಕ. ಸಿಬ್ಬಂದಿಗಳಾದ ಗುಪ್ತ ಮಾಹಿತಿ ಸಿಬ್ಬಂದಿ ಸೈಯದ್ ಕಬೀರುದ್ದಿನ್, ಯೋಗೇಶ್ ಮೋಹನ್ ಮಹೇಶ್ ಮಹದೇವ ಡ್ರೈವರ್ ನಾಗರಾಜುರವರುಗಳು ದಾಳಿ ಮಾಡಿ ಆರೋಪಿ ಮತ್ತು ಮಾಲನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿದ್ದಾರೆ, ಆರೋಪಿಯನ್ನು ಘನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.