Saturday, December 20, 2025
Google search engine

Homeಅಪರಾಧಎಪಿಕೆ ಫೈಲ್ ಡೌನ್ ಲೋಡ್ ಮಾಡಿ ಲಕ್ಷ ಹಣ ಕಳೆದುಕೊಂಡ ವ್ಯಕ್ತಿ

ಎಪಿಕೆ ಫೈಲ್ ಡೌನ್ ಲೋಡ್ ಮಾಡಿ ಲಕ್ಷ ಹಣ ಕಳೆದುಕೊಂಡ ವ್ಯಕ್ತಿ

ಎಪಿಕೆ ಫೈಲ್ ಡೌನ್ ಲೋಡ್ ಮಾಡಿ ವ್ಯಕ್ತಿಯೊಬ್ಬರು ಹಣ ಕಳೆದುಕೊಂಡ ಘಟನೆ ಮಂಗಳೂರಲ್ಲಿ ನಡೆದಿದೆ. ದೂರುದಾರರು ಸುಮಾರು 54 ವರ್ಷದವರಾಗಿದ್ದು ಯೂನಿಯನ್ ಬ್ಯಾಂಕ್ ಯಲ್ಲಿ ಉಳಿತಾಯ ಖಾತೆ ಹೊಂದಿದ್ದು ಮೊನ್ನೆ ಆರ್ ಟಿ ಓ ಎಪಿಕೆ ಪೈಲ್ ಡೌನ್ ಲೋಡ್ ಮಾಡಿ ಅದೇ ದಿನ ಡಿಲೀಟ್ ಮಾಡಿದ್ದಾರೆ. ಅದ್ರೆ ದಿನಾಂಕ:16-12-2025 ರಂದು ಖಾತೆಯಿಂದ 99,000 ಹಾಗೂ 44,000 ರೂ ಡೆಬಿಟ್ ಆಗಿದೆ. ಈ ಬಗ್ಗೆ ಬ್ಯಾಂಕ್ ಗೆ ತೆರಳಿ ವಿಚಾರಿಸಿದ್ದು ಅರವಿಂದ್ ಕೆ ಮತ್ತು ಶ್ರೀರಾಮ್ ಎಂಬುವವರ ಯುಪಿಐ ಐಡಿಗೆ ಹಣ ವರ್ಗಾವಣೆಯಾಗಿದೆ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ. ವಂಚಕರು ಹಣವನ್ನು ಪಿರ್ಯಾದಿದಾರರ ಅನುಮತಿ ಇಲ್ಲದೇ ವಂಚನೆ ಮಾಡುವ ಉದ್ದೇಶದಿಂದಲೆ ಉಳಿತಾಯ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular