Tuesday, May 20, 2025
Google search engine

Homeಅಪರಾಧಪತ್ನಿ ಕೊಂದು ಟ್ರ್ಯಾಲಿ ಬ್ಯಾಗ್‌ಗೆ ತುಂಬಿದ್ದ ಗಂಡನಿಗೆ 14 ದಿನ ನ್ಯಾಯಾಂಗ ಬಂಧನ

ಪತ್ನಿ ಕೊಂದು ಟ್ರ್ಯಾಲಿ ಬ್ಯಾಗ್‌ಗೆ ತುಂಬಿದ್ದ ಗಂಡನಿಗೆ 14 ದಿನ ನ್ಯಾಯಾಂಗ ಬಂಧನ

ಬೆಂಗಳೂರು: ಪತ್ನಿಕೊಂದು ಶವವನ್ನು ಸೂಟ್​ಕೇಸ್​ನಲ್ಲಿ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಕೇಶ್ ಕಡೇಕರ್​ಗೆ 14 ದಿನ ನ್ಯಾಯಾಂಗ ಬಂಧನ ನೀಡಿ ಆದೇಶಿಸಲಾಗಿದೆ. ನಿನ್ನೆ ರಾತ್ರಿ ಆರೋಪಿಯನ್ನು ಬೆಂಗಳೂರಿಗೆ ಕರೆತಂದಿದ್ದ ಪೊಲೀಸರು ಇಂದು ಕೋರಮಂಗಲ ಎನ್​​ಜಿವಿ ಮ್ಯಾಜಿಸ್ಟ್ರೇಟ್ ಕೋರ್ಟ್ ಜಡ್ಜ್ ನಿವಾಸಕ್ಕೆ ಹಾಜರುಪಡಿಸಿದ್ದರು. ಬಳಿಕ ರಾಕೇಶ್​ನನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದರು. ಸದ್ಯ ಆರೋಪಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ.

ಪತ್ನಿಯ ಕೊಲೆ ಮಾಡಿದ ರಾಕೇಶ್‌, ಶವದ ಕಾಲುಗಳನ್ನ ಮುರಿದು ಶವವನ್ನ ಟ್ರ್ಯಾಲಿ ಬ್ಯಾಗ್‌ಗೆ ತುಂಬಿದ್ದ. ಅದೇ ಬ್ಯಾಗ್‌ನನ್ನ ಎಳೆಯುವಾಗ ಹ್ಯಾಂಡಲ್‌ ಕಟ್ ಆಗಿದೆ. ಹೀಗಾಗಿ ಶವವನ್ನ ಅಲ್ಲೇ ಬಿಟ್ಟು ಕಾರ್‌ನಲ್ಲಿ ಎಸ್ಕೇಪ್ ಆಗಿದ್ದ. ಮಾರ್ಚ್‌ 27ರಂದು ಮಧ್ಯಾಹ್ನ ಗೌರಿ ಅಣ್ಣ ಗಣೇಶ್‌ಗೆ ಕರೆ ಮಾಡಿ, ನಿನ್ನ ತಂಗಿಯನ್ನು ಕೊಂದಿದ್ದೇನೆ, ನಾನು ಸಾಯುತ್ತಿದ್ದೇನೆಂದು ಹೇಳಿದ್ದ. ಅಷ್ಟೇ ಅಲ್ಲದೆ ತನ್ನ ತಂದೆಗೂ ಕರೆಮಾಡಿದ್ದ. ಅವಳು ನನ್ನ ಜೊತೆ ಜಗಳ ಮಾಡುತ್ತಿದ್ದಳು ಅದಕ್ಕೆ ಕೊಲೆ ಮಾಡಿದೆ. ಯುವತಿಯ ತಾಯಿಗೂ ಹೆಂಡತಿ ಕಾಟ ಕೊಡುತ್ತಿದ್ದಾಳೆ ಎಂದು ಹೇಳಿದ್ದ. ಕೊಲೆ ಮಾಡಿ ಮೊದಲನೇ ದಿನ ಏನು ಹೇಳಿದ್ದಿಲ್ಲ. ಕೊಲೆ ಮಾಡಿ ಎರಡನೇ ದಿನ ತಂದೆಗೆ ಕಾಲ್​ಮಾಡಿ ಹತ್ಯೆಯ ವಿಷಯ ತಿಳಿಸಿದ್ದ. ನಂತರ ನಾನು ಸೂಸೈಡ್​ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದ.

ಇನ್ನು ಪ್ರಕರಣ ಸಂಬಂಧ ಆರೋಪಿ ರಾಕೇಶ್ ತಂದೆ ರಾಜೇಂದ್ರ ಕೆಡೇಕರ್ ಪ್ರತಿಕ್ರಿಯಿಸಿದ್ದು, ಮೃತ ಗೌರಿ ನನ್ನ ಸಹೋದರಿಯ ಮಗಳು. ರಾಕೇಶ್ -ಗೌರಿ ಮದುವೆಗೆ ನಮ್ಮ ಕುಟುಂಬದ ಒಪ್ಪಿಗೆ ಇರಲಿಲ್ಲ. ಮದುವೆ ವಿಚಾರಕ್ಕೆ ಕುಟುಂಬದ ಜೊತೆ ಗೌರಿ ಜಗಳ ಮಾಡ್ಕೊಂಡಿದ್ದರು. ಎರಡು ವರ್ಷದ ಹಿಂದೆ ಪರಿವಾರದ ವಿರೋಧದ ನಡುವೆಯೂ ಮದುವೆ ಆಗಿದ್ದರು. ಗೌರಿ ಯಾವಾಗಲೂ ನನ್ನ ಮಗ ಮತ್ತು ಕುಟುಂಬಸ್ಥರ ಜೊತೆ ಹಲವು ಬಾರಿ ಜಗಳ ಆಡಿದ್ದಳು. ಗಂಡ-ಹಂಡತಿ ಮತ್ತು ಕುಟುಂಬದ ಜಗಳ ಪೊಲೀಸ್ ಠಾಣೆ ಮೇಟ್ಟಿಲೇರಿತ್ತು ಎಂದಿದ್ದಾರೆ.

ರಾಕೇಶ್ ಕೊಲೆ‌ ಮಾಡಿದೀನಿ ಅಂತಾ ಗುರುವಾರ ಮಧ್ಯಾಹ್ನ ನನಗೆ ಕಾಲ್ ಮಾಡಿ ಹೇಳಿದ್ದ. ಅಲ್ಲದೇ ತಾನೂ ಕೂಡ ಆತ್ಮಹತ್ಯೆ ಮಾಡ್ಕೊಳ್ತಿದೀನಿ ಅಂತಾ ಹೇಳಿದ್ದ. ನಿನ್ನ ನಿರ್ಧಾರ ತುಂಬಾ ತೀವ್ರವಾಗಿದೆ ಅಂತಾ ನಾನು ಹೇಳಿದ್ದೆ. ಗೌರಿ ತಾಯಿ ಮತ್ತು ಮುಂಬೈನ ಮೆಗವಾಡಿ ಪೊಲೀಸರಿಗೆ ಘಟನೆ ಬಗ್ಗೆ ಕೂಡಲೇ ತಿಳಿಸಿದ್ದೆ. ನಂತರ ಶಿರವಾಲಾ ಪೊಲೀಸರು ಆತನನ್ನ ಪತ್ತೆ ಹಚ್ಚಿದರು ಎಂದರು.

ಕರ್ನಾಟಕ ಮಹಾರಾಷ್ಟ್ರ ಬಾರ್ಡರ್​ನಲ್ಲಿ ಜಿರಳೆ ಔಷಧಿ ಕೊಂಡು ಮುಂಬೈ ಕೇಗಲ್ ಸಮೀಪ ಸೇವನೆ ಮಾಡಿದ್ದು, ಬೈಕ್ ಸವಾರನೋರ್ವ ಅಸ್ವಸ್ಥನಾಗಿದ್ದವನ ಕಂಡು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular