ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೇಟ್ ಜೆಡಿಎಸ್ ಪಾಲಾದ ಹಿನ್ನಲೆ ಕಾಂಗ್ರೆಸ್ ಪಕ್ಷದತ್ತ ಮತ್ತೋರ್ವ ಬಿಜೆಪಿ ನಾಯಕ ಮುಖ ಮಾಡಿದ್ದಾರೆ. ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಪಕ್ಷ ತೊರೆಯಲು ಮುಂದಾಗಿದ್ದಾರೆ.
ಜೆಡಿಎಸ್ ಗೆ ಕ್ಷೇತ್ರ ಬಿಟ್ಟುಕೊಡದಂತೆ ವರಿಷ್ಟರಲ್ಲಿ ನಾರಾಯಣ ಗೌಡ ಮನವಿ ಮಾಡಿದ್ದರು. ಬಿಜೆಪಿಯಿಂದ ಸುಮಲತಾ ಇಲ್ಲವೇ ಬೇರೆಯವರಿಗೆ ಟಿಕೇಟ್ ನೀಡಿ ಎಂದು ಒತ್ತಾಯಿಸಿದ್ದರು.
ಆದರೆ ಬಿಜೆಪಿ ಜೆಡಿಎಸ್ ಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದಕ್ಕೆ ನಾರಾಯಣಗೌಡ ಅಸಮಧಾನ ವ್ಯಕ್ತಪಡಿಸಿದ್ದು, ಇದೇ ನೆಪ ಹೇಳಿ ಕಾಂಗ್ರೆಸ್ ಪಕ್ಷ ಸೇರಲು ನಾರಾಯಣ ಗೌಡ ಸಿದ್ದತೆ ಮಾಡಿಕೊಂಡಿದ್ದಾರೆ..

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ನಾರಾಯಣಗೌಡ ಸೋಲನ್ನು ಅನುಭವಿಸಿದ್ದರು.
ಆಪರೇಷನ್ ಕಮಲಕ್ಕೆ ಒಳಗಾಗಿ ನಾರಾಯಣಗೌಡ ಅವರು ಜೆಡಿಎಸ್ ಗೆ ಕೈಕೊಟ್ಟು ಬಿಜೆಪಿ ಸೇರಿದ್ದರು. ಇದೀಗ ಅದೇ ಪಕ್ಷದವರ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಶೀಘ್ರದಲ್ಲೆ ಬೆಂಬಗಲಿಗರ ಜೊತೆ ಕಾಂಗ್ರೆಸ್ ಪಕ್ಷ ಸೇರಲಿದ್ದದ್ದಾರೆ.
ಮೈತ್ರಿಗೆ ಮಾಜಿ ಸಚಿವ ನಾರಾಯಣಗೌಡ ಹಾಗೂ ಸಂಸದೆ ಸುಮಲತಾರ ಮುಂದಿನ ನಡೆ ಅಡ್ಡಿ ಆಗಲಿದೆ ಎನ್ನಲಾಗಿದೆ.
ಮೈತ್ರಿ ಮಾಡಿಕೊಂಡು ಜೆಡಿಎಸ್ ಪಕ್ಷ ಅಡ್ಡ ಕತ್ತರಿಗೆ ಸಿಲುಕಿದೆ.