Friday, January 23, 2026
Google search engine

Homeರಾಜ್ಯಮಂಡ್ಯ: ಕೈ ಕೊಯ್ದುಕೊಂಡು ರಕ್ತ ಕೊಟ್ಟು ಪ್ರತಿಭಟಿಸಿದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು

ಮಂಡ್ಯ: ಕೈ ಕೊಯ್ದುಕೊಂಡು ರಕ್ತ ಕೊಟ್ಟು ಪ್ರತಿಭಟಿಸಿದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು

ಮಂಡ್ಯ: ಅಖಂಡ ಕರ್ನಾಟಕ ಬಂದ್ ಹಿನ್ನೆಲೆ ಮಂಡ್ಯದಲ್ಲಿ ಪ್ರತಿಭಟನೆಗಳು ಪ್ರಾರಂಭಗೊಂಡಿದ್ದು, ಮಂಡ್ಯದ ಸಂಜಯ ಸರ್ಕಲ್ ನಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಹೆದ್ದಾರಿಯಲ್ಲಿ ಕುಳಿತು ಕೈ ಕೊಯ್ದು ರಕ್ತ ಕೊಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಪಾಲಿನ ರಕ್ತ ಬೀಜಾಸುರ ಸ್ಟಾಲಿನ್. ದುಷ್ಟ, ದುರುಳ, ದುರ್ಯೋಧನ, ಅಯೋಗ್ಯ ಸ್ಟಾಲಿನ್ ಎಂದು   ಘೋಷಣೆ ಕೂಗಿದ್ದಾರೆ. ಕಾವೇರಿ ಬಗ್ಗೆ ಧ್ವನಿ ಎತ್ತದ ಸಂಸದರು,  ಸರ್ಕಾರ, ಪ್ರಾಧಿಕಾರದ ವಿರುದ್ಧವೂ ಕಿಡಿ ಕಾರಿದ್ದಾರೆ.

ನ್ಯಾಯ ದೇವತೆ ಕಣ್ತೆರೆದು ನೋಡು ತಾಯೆ, ಕಾವೇರಿ ಕೊಳ್ಳದ ಜನ-ಜಾನುವಾರುಗಳ ಸ್ಥಿತಿಯ ಎಂದು ಆಕ್ರೋಶ ಹೊರಹಾಕಿದ್ದಾರೆ.

ಪ್ರತಿಭಟನಾಕಾರರು ತಮಿಳುನಾಡಿನ ಸಿಎಂ ಸ್ಟಾಲೀನ್ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿದ್ದು, ಚಪ್ಪಲಿ ಕಾಲಿನಲ್ಲಿ ಒದ್ದಿದ್ದಾರೆ.  ಈ ವೇಳೆ ಸ್ಟಾಲಿನ್ ಫೋಟೊವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

RELATED ARTICLES
- Advertisment -
Google search engine

Most Popular