Friday, May 1, 2026
Google search engine

Homeರಾಜ್ಯಬಾಲಗರ್ಭಿಣಿಯರ ಸ್ಕ್ಯಾನಿಂಗ್ ದಂಧೆ: ವರದಿಯಲ್ಲಿ ಬಯಲಾಯ್ತು ಆಘಾತಕಾರಿ ಅಂಕಿಅಂಶ

ಬಾಲಗರ್ಭಿಣಿಯರ ಸ್ಕ್ಯಾನಿಂಗ್ ದಂಧೆ: ವರದಿಯಲ್ಲಿ ಬಯಲಾಯ್ತು ಆಘಾತಕಾರಿ ಅಂಕಿಅಂಶ

ಮಂಡ್ಯ: ಬಾಲಗರ್ಭಿಣಿಯರ ಸ್ಕ್ಯಾನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯು ವರದಿ ಬಿಡುಗಡೆ ಮಾಡಿದೆ. ಈ ವರದಿ ರಾಜ್ಯವನ್ನೇ ಬೆಚ್ಚಿಬೀಳಿಸುವಂತಿದೆ.

ಆರೋಗ್ಯ ಇಲಾಖೆಯ ಆರ್‌ಸಿಎಚ್ ಪೋರ್ಟಲ್ ನೀಡಿರುವ ಮಾಹಿತಿಯ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ಬರೋಬ್ಬರಿ 1,354 ಅಪ್ರಾಪ್ತ ಗರ್ಭಿಣಿಯರ ಪ್ರಕರಣಗಳು ವರದಿಯಾಗಿವೆ. ವರದಿಯಾಗಿರುವ 1,354 ಪ್ರಕರಣಗಳ ಪೈಕಿ ಪೋಕ್ಸೋ ಕೇಸ್​ಗಳ ಸಂಖ್ಯೆ ಕೇವಲ 674 ಅಂದರೆ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗಿಲ್ಲ ಎಂಬ ಆಘಾತಕಾರಿ ಸತ್ಯ ಬಯಲಾಗಿದೆ.

ಬಾಲ್ಯ ವಿವಾಹ, ಪ್ರೀತಿ ಮತ್ತು ಲೈಂಗಿಕ ದೌರ್ಜನ್ಯದಂತಹ ಕಾರಣಗಳಿಂದಾಗಿ 14 ರಿಂದ 18 ವರ್ಷದೊಳಗಿನ ಬಾಲಕಿಯರು ಗರ್ಭಿಣಿಯರಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಇತ್ತೀಚೆಗೆ ಕೆಆರ್ ಪೇಟೆಯ ಎರಡು ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದಾಗ ಆಘಾತಕಾರಿ ವಿಷಯಗಳು ಬಯಲಾಗಿತ್ತು. ಈ ಕೇಂದ್ರಗಳಲ್ಲಿ ನಿಯಮ ಬಾಹಿರವಾಗಿ 31 ಬಾಲಗರ್ಭಿಣಿಯರಿಗೆ ಸ್ಕ್ಯಾನಿಂಗ್ ನಡೆಸಿರುವುದು ತನಿಖೆ ವೇಳೆ ಪತ್ತೆಯಾಗಿದೆ.

ಈ ಹಿಂದೆ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣದಲ್ಲಿ ಮಂಡ್ಯ ಜಿಲ್ಲೆ ಬೆಚ್ಚಿಬೀಳಿಸಿತ್ತು. ಮಂಡ್ಯದ ಆಲೆಮನೆ, ಹೆಲ್ತ್ ಕ್ವಾರ್ಟರ್ಸ್​, ತೋಟದ ಮನೆಗಳಲ್ಲಿ ಅವ್ಯಾಹತವಾಗಿ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ನಡೆದಿರುವುದು ತೀವ್ರ ಸಂಚಲಕ್ಕೆ ಕಾರಣವಾಗಿತ್ತು. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸಿದ ಪೊಲೀಸರಿಗೆ, ಹೆಣ್ಣು ಭ್ರೂಣ ಹತ್ಯೆಯು ಮೈಸೂರಿನ ವರೆಗೆ ವಿಸ್ತರಿಸುವುರುವುದು ಗೊತ್ತಾಗಿತ್ತು. ಘಟನೆಯ ಕಿಂಗ್​ಪಿನ್​ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಇದೀಗ ಮಂಡ್ಯದಲ್ಲಿ ಬಾಲಗರ್ಭಿಣಿಯರ ಸಂಖ್ಯೆ ಹೆಚ್ಚುತ್ತಿರುವುದು ಸಮಾಜದಲ್ಲಿ ಆತಂಕ ಮೂಡಿಸಿದೆ.

RELATED ARTICLES
- Advertisment -
Google search engine

Most Popular