Friday, May 23, 2025
Google search engine

Homeರಾಜ್ಯಮಂಗಳೂರು: ರಬ್ಬರ್ ತೋಟದಲ್ಲಿ ಆಕಸ್ಮಿಕ ಅಗ್ನಿ ಅವಘಡ

ಮಂಗಳೂರು: ರಬ್ಬರ್ ತೋಟದಲ್ಲಿ ಆಕಸ್ಮಿಕ ಅಗ್ನಿ ಅವಘಡ

ಮಂಗಳೂರು(ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಲಾಯಿಲ ಗ್ರಾಮದ ಸ್ಥಾನಿಕ ಬ್ರಾಹ್ಮಣ ಸಂಘದ ಸಭಾವನದ ಪಕ್ಕದ ರಾಜೇಶ್ ಪ್ರಭು ಎಂಬವರ ರಬ್ಬರ್ ತೋಟದಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ.

ರಸ್ತೆಯ ಪಾರ್ಶ್ವದಲ್ಲಿರುವ  ವಿದ್ಯುತ್ ಪರಿವರ್ತಕದಿಂದ ಬೆಂಕಿ ಉಗುಳಲ್ಪಟ್ಟು ತರಗೆಲೆಗೆ ಹತ್ತಿಕೊಂಡು ಬೆಂಕಿ ರಬ್ಬರ್ ತೋಟಕ್ಕೆ ಆವರಿಸಿದೆ.

ಗ್ರಾ.ಪಂ ಪಿಡಿಒ‌ ಅವರು ತಕ್ಷಣ ಬೆಳ್ತಂಗಡಿ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದಂತೆ ಧಾವಿಸಿ ಬಂದು ಬೆಂಕಿ ವ್ಯಾಪಿಸುವುದನ್ನು ತಡೆದಿದ್ದಾರೆ.

ಅಗ್ನಿಶಾಮಕ ಠಾಣಾಧಿಕಾರಿ ವೆಂಕಟೇಶ್, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ನೀಲಯ್ಯ ಗೌಡ, ಸಿಬ್ಬಂದಿಗಳಾದ ರತನ್, ಶ್ರವಣ್, ಮುಹಮ್ಮದ್ ಸಾಬ್, ಆದಿಲ್ ಮತ್ತು ವೆಂಕಣ್ಣ ಇವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಗ್ರಾ.ಪಂ ಪಿಡಿಒ, ಕಾರ್ಯದರ್ಶಿ ಹಾಗೂ ಸದಸ್ಯರುಗಳು ಸೇರಿದಂತೆ ಸ್ಥಳೀಯರು ಸ್ಥಳದಲ್ಲಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular