Sunday, October 12, 2025
Google search engine

Homeಅಪರಾಧಮಂಗಳೂರು: ಗುಜರಿ ಅಂಗಡಿಯಲ್ಲಿ ಬೆಂಕಿ ಅವಘಡ, ಭಾರಿ ಅನಾಹುತ

ಮಂಗಳೂರು: ಗುಜರಿ ಅಂಗಡಿಯಲ್ಲಿ ಬೆಂಕಿ ಅವಘಡ, ಭಾರಿ ಅನಾಹುತ

ಮಂಗಳೂರು (ದಕ್ಷಿಣ ಕನ್ನಡ): ಗುಜರಿ ಅಂಗಡಿಯಲ್ಲಿ ಭಾನುವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡ ಘಟನೆ ಮಂಗಳೂರು ನಗರದ ಹೊರವಲಯದ ಕೆ.ಸಿ.ರೋಡ್‌ನಲ್ಲಿ ನಡೆದಿದೆ.

ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದೆ. ಅಂಗಡಿಯ ಸಮೀಪದಲ್ಲೇ ಪೆಟ್ರೋಲ್ ಬಂಕ್ ಹಾಗೂ ಮನೆಗಳಿವೆ. ಬೆಂಕಿ ವ್ಯಾಪಿಸದಂತೆ ತಡೆಯಲು ಅಗ್ನಿಶಾಮಕ ಮತ್ತು ತುರ್ತು ಸೇವೆ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಅಂಗಡಿಯಲ್ಲಿ ಭಾರಿ ಪ್ರಮಾಣದಲ್ಲಿ ಗುಜರಿ ದಾಸ್ತಾನು ಇರುವುದರಿಂದ‌ ಬೆಂಕಿಯನ್ನು ಹತೋಟಿಗೆ ತರುವುದು ಕಷ್ಟವಾಗಿದೆ. ಬೆಂಕಿ ತಗುಲಿದ್ದು ಹೇಗೆ ಎಂಬುದು ಖಚಿತವಾಗಿಲ್ಲ.

RELATED ARTICLES
- Advertisment -
Google search engine

Most Popular