ಮಂಗಳೂರು (ದಕ್ಷಿಣ ಕನ್ನಡ): 55 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ Cr NO 32/1970 u/s 154,155 (2)MF Rules 1969 sec 86 of MF Act ( LPC :2/1972)
ಪ್ರಕರಣದಲ್ಲಿ LPC ವಾರಂಟ್ ಆಸಾಮಿ ಯಾಗಿರುವ ಕೇರಳ ರಾಜ್ಯದ ಮಲ್ಲಪುರಂ ಜಿಲ್ಲೆಯ
ಸಿಆರ್.ಚಂದ್ರನ್ (78 ವರ್ಷ) ಎಂಬುವವರು 55 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದರು. ಇವರನ್ನು ಕೇರಳ ರಾಜ್ಯದ ಕ್ಯಾಲಿಕಟ್ ನ ಪುಲ್ಲಿಕಲ್ ಎಂಬಲ್ಲಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ದಿನಾಂಕ 26.07.1970 ರಂದು ಗಂಧದ ಮರಗಳ ತುಂಡುಗಳನ್ನು ಯಾವುದೇ ಪರವಾನಿಗೆ ಇಲ್ಲದೆ ಕಾರಿನಲ್ಲಿ ಕಳ್ಳಸಾಗಾಟ ಮಾಡುತ್ತಿರುವ ಸಮಯ ಬುಲೆರಿಕಟ್ಟೆ ಚೆಕಪೋಸ್ಟ್ ನಲ್ಲಿ ತಡೆದು ನಿಲ್ಲಿಸಿ ದಾಖಲಿಸಿರುವ ಪ್ರಕರಣವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಪತ್ತೆಯಾದ ಪ್ರಕರಣಗಳಲ್ಲಿ ಅತ್ಯಂತ ಹಳೆಯ ಪ್ರಕರಣವಾಗಿದೆ.