- ಶಂಶೀರ್ ಬುಡೋಳಿ, ಮಂಗಳೂರು
ಮಂಗಳೂರು (ದಕ್ಷಿಣ ಕನ್ನಡ): ಕತ್ತಲಲ್ಲಿ ಕಾಮದಾಟವಾಡಿ ಪ್ರೇಯಸಿಗೆ ಮಗು ಕೊಟ್ಟು ಎಸ್ಕೇಪ್ ಆಗಿದ್ದ ಬಿಜೆಪಿ ಮುಖಂಡನ ಪುತ್ರ ಕೊನೆಗೂ ಅರೆಸ್ಟ್ ಆಗಿದ್ದಾನೆ. ಅದು ಅಪ್ಪನ ಜೊತೆಗೆ ಅರೆಸ್ಟ್! ಅದ್ರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.
ಹೌದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸಂಘರ್ಷ ಆಗ್ತಾ ಇದ್ದಾಗ ಉಗ್ರ ಭಾಷಣ ಮಾಡಿ ಸದ್ದು ಮಾಡ್ತಾ ಇದ್ದ ಸಂಘಪರಿವಾರ ಹಾಗೂ ಬಿಜೆಪಿ ಸದ್ಯ ತೆಪ್ಪಗಾಗಿದೆ. ಅದಕ್ಕೆ ಕಾರಣ ಈ ಪ್ರಕರಣ. ಪುತ್ತೂರಿನಲ್ಲಿ ವಿದ್ಯಾರ್ಥಿನಿಯನ್ನು ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿಯಾಗಿಸಿ, ಬಳಿಕ ಮದುವೆ ಆಗಲ್ಲ ಎಂದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಪಿಜಿ ಜಗನ್ನಿವಾಸ ರಾವ್ ಪುತ್ರ ಆರೋಪಿ ಶ್ರೀಕೃಷ್ಣ ಜೆ ರಾವ್ ಕೊನೆಗೂ ಅರೆಸ್ಟ್ ಆಗಿದ್ದಾನೆ. ದಕ್ಷಿಣ ಕನ್ನಡದಲ್ಲಿ ಬಹಳ ವಿವಾದ, ಚರ್ಚೆಗೆ ಗ್ರಾಸವಾಗಿದ್ದ ಈ ಕೇಸಿನ ವಿಲನ್ ಕೃಷ್ಣನನ್ನು ಪೊಲೀಸರು ಜುಲೈ 4ರಂದು ರಾತ್ರಿ ಮೈಸೂರಿನಲ್ಲಿ ಬಂಧಿಸಿದ್ದಾರೆ. ಜುಲೈ 5ರಂದು ಸಂಜೆ ಪುತ್ತೂರು ನ್ಯಾಯಾಲಯಕ್ಕೆ ಹಾಜರು ಪಡಿಸಿ, ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಆರೋಪಿ ಪುತ್ರ ಪರಾರಿಯಾಗಲು ಸಹಕರಿಸಿದ ಹಿನ್ನಲೆಯಲ್ಲಿ ಆರೋಪಿಯ ತಂದೆ ಪಿಜಿ ಜಗನ್ನಿವಾಸ ರಾವ್ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ, ಬಂಧಿಸಿದ್ದರು. ಸಂಜೆ ಮಗನೊಂದಿಗೆ ತಂದೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯ ಪಿ ಜಿ ಜಗನ್ನಿವಾಸ ರಾವ್ ಗೆ ಜಾಮೀನು ಮಂಜೂರು ಮಾಡಿದೆ. ಕಳೆದ ಹತ್ತು ದಿನಗಳಿಂದ ನಾಪತ್ತೆಯಾಗಿದ್ದ ಆರೋಪಿ 21 ವರ್ಷದ ಕೃಷ್ಣ ಜೆ. ರಾವ್ ನನ್ನು ಪೊಲೀಸರು ಮೈಸೂರಿನ ಟಿ ನರಸೀಪುರದಲ್ಲಿ ಬಂಧಿಸಿದ್ದಾರೆ. ಇದೀಗ ತನ್ನ ಮಗನನ್ನು ಪರಾರಿಯಾಗಲು ಸಹಕರಿಸಿದ ಆರೋಪದಡಿ ಆರೋಪಿಯ ತಂದೆ ಬಿಜೆಪಿ ಮುಖಂಡ ಪಿ.ಜಿ.ಜಗನ್ನಿವಾಸ್ ರಾವ್ ನನ್ನು ಬಂಧಿಸಲಾಗಿದೆ. ಇದೀಗ ಅಪ್ಪ ಮತ್ತು ಮಗನಿಗೆ ವೈದ್ಯಕೀಯ ತಪಾಸಣೆ ನಡೆಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಎಸ್ಪಿ ಅರುಣ್ ತಿಳಿಸಿದ್ದಾರೆ. ಅಪ್ಪ ಮತ್ತು ಮಗನಿಗೆ ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಪೊಲೀಸರು ಪುತ್ತೂರಿನ ನ್ಯಾಯಾಲಯದ ಮುಂದೆ ಹಾಜರುಪಡಿಸಿದು ತಂದೆ ಜಗನ್ನಿವಾಸ ರಾವ್ ಗೆ ಜಾಮೀನು ನೀಡಿದ್ದರೆ, ಪುತ್ರನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದರಂತೆ, ಕೃಷ್ಣ ರಾವ್ ಜೈಲು ಸೇರಿದ್ದಾನೆ.
ಬಿಜೆಪಿ ಮುಖಂಡನ ಪುತ್ರನೇ ಈ ರೀತಿ ಗರ್ಭೀಣಿ ಮಾಡ್ಸಿ ಮಗು ಕೊಟ್ಟು ಪರಾರಿಯಾದ ಪ್ರಕರಣ ಬಿಜೆಪಿ ಹಾಗೂ ಸಂಘಪರಿವಾರಕ್ಕೆ ಇರಿಸುಮುರಿಸು ತಂದಿದೆ. ಹೀಗಾಗಿ ಸಂತ್ರಸ್ತೆ ಪರ ಎಸ್ ಡಿಪಿಐ, ಜಾತ್ಯತೀತ ಹಾಗೂ ಕೆಲ ಪ್ರಗತಿಪರ ಮಹಿಳಾ ಸಂಘಟನೆಗಳು ಬೆನ್ನಿಗೆ ನಿಂತು ಹೋರಾಟಕ್ಕಿಳಿದಿತ್ತು. ಆರೋಪಿಯ ಬಂಧನಕ್ಕೆ ಒತ್ತಡ ಹೆಚ್ಚಾಗ್ತಿತ್ತು. ಇದೀಗ ಕಾರ್ಯಾಚರಣೆ ನಡೆಸಿ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಸಂತ್ರಸ್ತೆ ತಾಯಿಯ ಬೇಡಿಕೆಯಂತೆ ಮಗು ಹೆತ್ತ ಯುವತಿ ಜತೆ ಈ ಯುವಕನ ಮದುವೆ ನಡೆಸಿಕೊಟ್ರೆ ಪ್ರಕರಣ ಸುಖಾಂತ್ಯವಾಗಲಿದೆ.