Thursday, July 17, 2025
Google search engine

Homeರಾಜ್ಯಸುದ್ದಿಜಾಲಮಂಗಳೂರು: ಧರ್ಮಸ್ಥಳದ ಸುತ್ತ ಮೃತದೇಹಗಳನ್ನು ಹೂತಿಟ್ಟ ಪ್ರಕರಣ – ತನಿಖೆಗೆ ತೀವ್ರತೆ

ಮಂಗಳೂರು: ಧರ್ಮಸ್ಥಳದ ಸುತ್ತ ಮೃತದೇಹಗಳನ್ನು ಹೂತಿಟ್ಟ ಪ್ರಕರಣ – ತನಿಖೆಗೆ ತೀವ್ರತೆ

ಮಂಗಳೂರು(ದಕ್ಷಿಣ ಕನ್ನಡ): ಧರ್ಮಸ್ಥಳದ ಸುತ್ತಲು ಮೃತದೇಹಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಈ ಬಗ್ಗೆ ಇತ್ತೀಚೆಗೆ ತನಿಖಾಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ. ಆದರೆ ಈ ಮಾಹಿತಿ ಸಾಕ್ಷಿ ದೂರುದಾರರು ಅಥವಾ ಅವರ ವಕೀಲರು ತನಿಖಾಧಿಕಾರಿಗಳ ಗಮನಕ್ಕೆ ತರಲಿಲ್ಲ ಎಂಬ ಆರೋಪ ಕೇಳಿಬಂದಿದೆ.

ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿಯಾಗಿರುವ ಡಾ. ಅರುಣ್ ಪ್ರಕಟಣೆಯಲ್ಲಿ, “ಸಮಾಧಿ ಅಗೆಯುವ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಸಾಕ್ಷಿ ದೂರುದಾರನು ತಲೆಮರೆಸಿಕೊಳ್ಳುವ ಸಾಧ್ಯತೆ ಇದೆ. ಸ್ಥಳೀಯರಿಂದ ಗುಪ್ತ ಮಾಹಿತಿ ದೊರೆತಿದ್ದು, ನಿಖರ ತನಿಖೆ ಅಗತ್ಯವಾಗಿದೆ,” ಎಂದು ತಿಳಿಸಿದ್ದಾರೆ.

ಈ ಬಗ್ಗೆ ಸಾಕ್ಷಿದಾರರ ಪರ ವಕೀಲರಿಗೆ ಕೂಡ ಮಾಹಿತಿ ನೀಡಲಾಗಿದ್ದು, ಪರೀಕ್ಷೆಗಳು – ಬ್ರೈನ್ ಮ್ಯಾಪಿಂಗ್, ನಾರ್ಕೋ ಟೆಸ್ಟ್ ಮತ್ತು ಫಿಂಗರ್‌ಪ್ರಿಂಟ್ – ನಡೆಸಲು ದೂರುದಾರರ ಸಮ್ಮತಿಯೊಂದಿಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ. ತನಿಖೆಯ ಯಾವ ಹಂತದಲ್ಲಿ ಸಮಾಧಿ ಅಗೆಯಬೇಕು ಎಂಬ ನಿರ್ಧಾರವನ್ನು ತನಿಖಾಧಿಕಾರಿಯೇ ತೆಗೆದುಕೊಳ್ಳಲಿದ್ದಾರೆ. ಎಲ್ಲಾ ಕಾನೂನು ಪ್ರಕ್ರಿಯೆ ಅನುಸರಿಸಿ ಮುಂದಿನ ಹಂತಗಳನ್ನು ಕೈಗೊಳ್ಳಲಾಗುವುದು ಎಂದು ಎಸ್‌ಪಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular