ಮಂಗಳೂರು (ದಕ್ಷಿಣ ಕನ್ನಡ): ಸಾಮಾಗ್ರಿಗಳನ್ನು ಖರೀದಿಸಿ ಬಾಕಿ ಇರಿಸಿದ್ದ ಹಣವನ್ನು ಅಂಗಡಿ ಮಾಲೀಕ ಕೇಳಿದ್ದಕ್ಕೆ ಕೋಪಗೊಂಡ ವ್ಯಕ್ತಿ ಫ್ಲೆಕ್ಸ್ ಗೆ ಬೆಂಕಿ ಇಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಗುರುವಾಯನಕೆರೆಯಲ್ಲಿ ನಡೆದಿದೆ. ಬೆಳ್ತಂಗಡಿ ಬಳಂಜ ಗ್ರಾಮದ ನಿವಾಸಿ ಉಮೇಶ್ ಬಂಗೇರ, ಬೆಂಕಿ ಇಟ್ಟ ವ್ಯಕ್ತಿ.
ದೂರುದಾರರಾದ ಬೆಳ್ತಂಗಡಿಯ ಕುವೆಟ್ಟು ಗ್ರಾಮದ ನಿವಾಸಿ ಸದಕುತುಲ್ಲ ಎಂಬುವವರು ಗುರುವಾಯನಕೆರೆ ಎಂಬಲ್ಲಿ ದಿನಸಿ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದಾರೆ. ದಿನಾಂಕ: 09-07-2025 ರಂದು ರಾತ್ರಿ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದಾರೆ. ದಿನಾಂಕ:10-07 2025 ರಂದು ಬೆಳಿಗ್ಗಿನ ಸಮಯ ದೂರುದಾರರ ಅಂಗಡಿಗೆ ಆರೋಪಿತ ಬೆಳ್ತಂಗಡಿ ಬಳಂಜ ಗ್ರಾಮದ ನಿವಾಸಿ ಉಮೇಶ್ ಬಂಗೇರ ಎಂಬಾತನು ಬೆಂಕಿ ಹಚ್ಚಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಕೂಡಲೇ ದೂರುದಾರರು ಸ್ಥಳಕ್ಕೆ ಬಂದು ಸ್ಥಳಿಯರೊಂದಿಗೆ ಸೇರಿ ಬೆಂಕಿಯನ್ನು ನಂದಿಸಿದ್ದಾರೆ.
ಪಿರ್ಯಾದಿದಾರರ ಅಂಗಡಿಗೆ ಆಳವಡಿಸಿದ 2 ಫ್ಲೆಕ್ಸ್ ಸುಟ್ಟು ಹೋಗಿ, 10 ಪ್ಲಾಸ್ಟಿಕ್ ಉಪ್ಪಿನ ಚೀಲಗಳಿಗೆ ಹಾನಿಯಾಗಿದೆ. ಅರೋಪಿತನು ಸಾಮಾನು ಖರೀದಿಯ ದುಡ್ಡನ್ನು ಅಂಗಡಿ ಮಾಲೀಕನಿಗೆ ಬಾಕಿ ಇರಿಸಿದ್ದು, ಅದನ್ನು ಕೇಳಿದ್ದಕ್ಕಾಗಿ ಕೋಪಗೊಂಡು ಈ ಕೃತ್ಯವನ್ನು ಎಸಗಿದ್ದಾನೆ. ಇದರಿಂದ ತನಗೆ 3000 ರೂ ನಷ್ಟ ಉಂಟು ಮಾಡಿರುವುದಾಗಿ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ ಕ್ರ: 56/2025 ಕಲಂ: 326(f), 324(2) ಬಿಎನ್ ಎಸ್ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.