Friday, May 23, 2025
Google search engine

Homeರಾಜ್ಯಸುದ್ದಿಜಾಲಶ್ರೀ ರಾಮ ನಾಮ ಜಪದ ಮೂಲಕ ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬಹುದು: ಸುರೇಶ್ ಎನ್ ಋಗ್ವೇದಿ

ಶ್ರೀ ರಾಮ ನಾಮ ಜಪದ ಮೂಲಕ ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬಹುದು: ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ: ಶ್ರೀ ರಾಮ ನಾಮ ಜಪದ ಮೂಲಕ ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬಹುದು. ರಾಮ ನಾಮ ಜಪವು ಮನಸ್ಸನ್ನು ಶುದ್ಧೀಕರಿಸಿ ಆಧ್ಯಾತ್ಮಿಕ ಮತ್ತು ದೈಹಿಕ ಶಕ್ತಿಯನ್ನು ವೃದ್ಧಿಸಿ ಆರೋಗ್ಯವಂತರಾಗಿ ಬಾಳಲು ಸಹಕಾರಿಯಾಗುವುದು. ಶ್ರೀರಾಮ ಭಾರತೀಯರ ಆದರ್ಶ ಪುರುಷರು ಹಾಗೂ ಸಂಸ್ಕೃತಿ ಪರಂಪರೆಯ ದಿವ್ಯ ರಕ್ಷಕರು ಎಂದು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ಜೈ ಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂತ್ ಕ್ಲಬ್ ಜೈ ಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಶ್ರೀ ರಾಮನವಮಿ ಹಾಗೂ ಶ್ರೀ ರಾಮ ನಾಮ ಜಪ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡುತ್ತಾ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಶ್ರೀರಾಮ ಹಾಗೂ ಶ್ರೀ ಕೃಷ್ಣ ರು ಆಧಾರ ಸ್ಥಂಭಗಳು. ಭಾರತೀಯರ ನರುನಾಡಿಗಳಲ್ಲೂ ರಾಮ ಮತ್ತು ಕೃಷ್ಣ ರು ಇದ್ದಾರೆ. ಧರ್ಮ ರಕ್ಷಣೆ, ಮಾನವ ಕಲ್ಯಾಣ, ಲೋಕದ ಹಿತ ನಮ್ಮ ಸಂಸ್ಕೃತಿಯ ದಿವ್ಯ ಚೇತನವಾಗಿದೆ. ಭಾರತೀಯ ಧರ್ಮ ವಿಶ್ವಖ್ಯಾತಿಗೊಳ್ಳಲು ಶ್ರೀರಾಮ ಮತ್ತು ಶ್ರೀ ಕೃಷ್ಣರ ಆದರ್ಶ ಚಿಂತನೆಗಳೇ ಕಾರಣವಾಗಿದೆ. ಶ್ರೀ ರಾಮನವಮಿಯ ಸಂದರ್ಭದಲ್ಲಿ ಇಡಿ ಜಗತ್ತಿನಲ್ಲಿ ಶ್ರೀ ರಾಮನ ಆದರ್ಶಗಳು ಹಾಗೂ ರಾಮಾಯಣದ ಕುರಿತು ವಿಶೇಷವಾದ ಜಾಗೃತಿಯ ಕಾರ್ಯ ನಡೆಯಬೇಕು .ಆ ಮೂಲಕ ಯುವಶಕ್ತಿಯ ಜಾಗೃತಿ ಹಾಗೂ ಆಧ್ಯಾತ್ಮಿಕ ಚಿಂತನೆ,ಮಾನವೀಯ ಮೌಲ್ಯಗಳು ,ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ದಿವ್ಯತೆಯ ಅರಿವನ್ನು ಪರಿಚಯಿಸಬಹುದು. ಮನೆಮನೆಗಳಲ್ಲೂ ಆಧ್ಯಾತ್ಮಿಕ, ಸಾಹಿತ್ಯ, ಪುರಾಣ ಪ್ರಸಿದ್ಧ ಕಥೆಗಳು ಹಾಗೂ ಪುಣ್ಯಕ್ಷೇತ್ರಗಳ ಇತಿಹಾಸವನ್ನು ತಿಳಿಸುವ ಕಾರ್ಯ ಮಾಡಬೇಕಾಗಿದೆ ಎಂದರು.

ಶ್ರೀ ಶಾರದಾ ಭಜನಾ ಮಂಡಳಿಯ ಮಾಲ ರವಿ ಮಾತನಾಡಿ ಶ್ರೀ ರಾಮನವಮಿ ಪ್ರತಿಯೊಬ್ಬರ ಹಬ್ಬವಾಗಿದೆ. ರಾಮನವಮಿಯ ಸಂದರ್ಭದಲ್ಲಿ ಸೀತಾರಾಮರ ಆದರ್ಶಗಳನ್ನು ತಿಳಿಯುವ ಸಂದರ್ಭ ಹಾಗೂ ಕಲೆ, ಸಾಹಿತ್ಯ, ಸಂಗೀತ, ನೃತ್ಯ ಮತ್ತು ಶ್ರೀರಾಮ ಪಟ್ಟಾಭಿಷೇಕದ ಮೂಲಕ ಸಾಮಾಜಿಕ ಏಕತೆಯನ್ನು ಮತ್ತು ಸಾಮರಸ್ಯವನ್ನು ಬೆಳೆಸುವ ವಿಶೇಷ ಉತ್ಸವವಾಗಿದೆ ಎಂದರು.
ಶ್ರೀರಾಮ ನಾಮ ಜಪ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮ . ಜೈಹಿಂದ್ ಪ್ರತಿಷ್ಠಾನದ ಮುರುಗೇಶ್, ರವಿ, ರಘುನಾಥ್, ಶ್ರೀ ಶಾರದಾ ಭಜನಾ ಮಂಡಳಿಯ ನಾಗಶ್ರೀ, ಋಗ್ವೇದಿ.ಯೂತ್ ಕ್ಲಬ್ ನ ಸಾನಿಕಾ, ಶ್ರಾವ್ಯ ಎಸ್ ಋಗ್ವೇದಿ,ಸುಮನ್ ಇದ್ದರು.

RELATED ARTICLES
- Advertisment -
Google search engine

Most Popular