ಮಂಗಳೂರು : ಮಂಗಳೂರಿನಲ್ಲಿ ಬೃಹತ್ ಡ್ರಗ್ಸ್ ಮಾರಾಟದ ಜಾಲವನ್ನು ಪೊಲೀಸರು ಇದೀಗ ಭೇದಿಸಿದ್ದಾರೆ. ತಮ್ಮ ಮಕ್ಕಳ ಡ್ರಗ್ಸ್ ಅಡಿಕ್ಟ್ ಬಗ್ಗೆ ಇಬ್ಬರು ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೋಷಕರ ದೂರಿನ ಮೇರೆಗೆ ಪೊಲೀಸರು ಡ್ರಗ್ಸ್ ಜಾಲವನ್ನು ಇದೀಗ ಭೇದಿಸಿದ್ದಾರೆ. ಮಂಗಳೂರಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.
ಮಂಗಳೂರು ಸೆನ್ ಕ್ರೈಂ ಠಾಣೆ ಪೋಲಿಸರಿಂದ ಈ ಒಂದು ಕಾರ್ಯಾಚರಣೆ ನಡೆದಿದೆ. ಮಂಗಳೂರಿನ ತುಷಾರ್ (21) ಧನ್ವಿಶೆಟ್ಟಿ (20) ಸಾಗರ್ ಕರ್ಕೆರ (19) ವಿಕಾಸ (23) ವಿಘ್ನೇಶ್ ಕಾಮತ್ (24) ಎನ್ನುವ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಮಂಗಳೂರಿನ ಹಾಲಾಡಿ ಬಳಿ ಇವರನ್ನು ಅರೆಸ್ಟ್ ಮಾಡಲಾಗಿದೆ.
ಮಾದಕ ವಸ್ತುಗಳನ್ನು ಮಾಡಲು ತಯಾರಿ ಮಾಡುತ್ತಿದ್ದಾಗ ಪೊಲೀಸರು ರೇಡ್ ಮಾಡಿದ್ದಾರೆ. ಬಂಧಿತರಿಂದ 5 ಲಕ್ಷ 20 ಸಾವಿರ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಈ ಒಂದು ಗ್ಯಾಂಗ್ ಡ್ರಗ್ಸ್ ಪೂರೈಸುತ್ತಿತ್ತು ಗಾಂಜಾವನ್ನು ಚಿಕ್ಕ ಚಿಕ್ಕ ಪ್ಯಾಕೆಟ್ ಮಾಡಿ ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.