Friday, December 5, 2025
Google search engine

HomeUncategorizedಹುದ್ದೆಗಳ ಭರ್ತಿಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ಚಳಿಗಾಲದ ಅಧಿವೇಶನದಲ್ಲೂ ಪರಿಣಾಮ ಸಾಧ್ಯತೆ...

ಹುದ್ದೆಗಳ ಭರ್ತಿಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ಚಳಿಗಾಲದ ಅಧಿವೇಶನದಲ್ಲೂ ಪರಿಣಾಮ ಸಾಧ್ಯತೆ…

ವರದಿ :ಸ್ಟೀಫನ್ ಜೇಮ್ಸ್.

ರಾಯಭಾಗ, ಡಿ.04: ರಾಜ್ಯ ಸರ್ಕಾರದಲ್ಲಿ ಮಾಹಿತಿಯ ಪ್ರಕಾರ ಸರ್ಕಾರದ 43 ಇಲಾಖೆಗಳಲ್ಲಿ ಒಟ್ಟು 2,76,386 ಹುದ್ದೆಗಳು ಖಾಲಿಯಾಗಿವೆ ಎಂದು ಅಧಿಕೃತ ಮಾಹಿತಿಗಳಿಂದ ಹೊರ ಬರುತ್ತಿವೆ ಪ್ರಮುಖವಾಗಿ ಬೋಧನೆ ಮಾಡುವ ಶಿಕ್ಷಣ ಇಲಾಖೆಯಲ್ಲಿ ಸುಮಾರು 59,772 ಶಿಕ್ಷಕರ ಹುದ್ದೆಗಳು ಭರ್ತಿಯಾಗದೇ ಖಾಲಿ ಇದೆ. ಇತ್ತೀಚೆಗೆ, ಸರ್ಕಾರ 2025 ರಲ್ಲಿ ಅಪೇಕ್ಷಿತ ಹುದ್ದೆಗಳ ಭರ್ತಿಗಾಗಿ ಘೋಷಿಸಿದ್ದು, 43 ಇಲಾಖೆಗಳೊಳಗೆ ಸುಮಾರು 2.7 ಲಕ್ಷ ಹುದ್ದೆಗಳನ್ನೂ ಹಂತ-ಹಂತವಾಗಿ ಭರ್ತಿ ಮಾಡುವ ಗುರಿ ಹೊಂದಿದೆ. ಎನ್ನುವ ಮಾಹಿತಿಗಳು ಹರಿದಾಡುತ್ತಿವೆ
ಪ್ರಮುಖವಾಗಿ రేల ಸಂಸ್ಥೆಗಳಲ್ಲಿ ಉದಾಹರಣೆಗೆ ಕೆಪಿಟಿಸಿಎಲ್ ಒಂದರಲ್ಲಿ ಅಧಿಕೃತವಾಗಿ 35 ಸಾವಿರ ಹುದ್ದೆಗಳು ಭರ್ತಿ ಮಾಡುವ ನಿರ್ಧಾರ ಮಾಡಿಕೊಂಡಿದೆ. ಎನ್ನುವ ಮಾಹಿತಿ ಹೊರ ಬರುತ್ತಿದೆ ಈ ವಿಷಯ ಮಹತ್ವ ಪಡೆದುಕೊಂಡಿದ್ದು ಖಾಲಿ ಹುದ್ದೆಗಳು ಭರ್ತಿಯಾಗದೇ ಇರುವುದರಿಂದ ವಿದ್ಯಾರ್ಥಿ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯ ಮತ್ತು ದೇಶದ ಸಮಗ್ರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ಶಾಲಾ ಕಾಲೇಜು ವಿದ್ಯುತ್, ಸಾವಿರಾರು ಸರ್ಕಾರದಲ್ಲಿ ಪೊಲೀಸ್, ಆರೋಗ್ಯ ಇಲಾಖೆ ಸೇರಿದಂತೆ ಹಲವಾರು ಪ್ರಮುಖ ಇಲಾಖೆಗಳಲ್ಲಿನ ಕೆಲಸಗಳು ಸಿಬ್ಬಂದಿ ಕೊರತೆಯಿಂದ ಅಸ್ತವ್ಯಸ್ತವಾಗಿ ಕುಂಟುತ್ತಾ ಸಾಗುತ್ತಿವೆ ನೇಮಕಾತಿಯನ್ನು ಯುವ ಅಭ್ಯರ್ಥಿಗಳು ನಿರೀಕ್ಷಿಸುತ್ತಿದ್ದಾರೆ. ಸದ್ಯಕ್ಕೆ ಅವರೆಲ್ಲರ ಭವಿಷ್ಯ ಅಸ್ಪಷ್ಟವಾಗಿದೆ.ಇತ್ತೀಚಿನ ನಿರುದ್ಯೋಗಿ ಯುವಕರ ಹೋರಾಟಗಳು ಸರ್ಕಾರದ ಮೇಲೆ ಅಧಿಕ ಒತ್ತಡವನ್ನು ಹೆಚ್ಚಿಸಿದೆ. 2025ರಲ್ಲಿ, ಒಳಮೀಸಲಾತಿ ಬಗ್ಗೆ ಸರಕಾರ ನಿರ್ದಿಷ್ಟ ನಿಯಮಾವಳಿಗಳನ್ನು ಅಂತಿಮಗೊಳಿಸಿದ ಮೇಲೆ, ಭರ್ತಿಗಳನ್ನು ಮಾಡುವ ಗಟ್ಟಿ ನಿಲುವನ್ನು ಹೊಂದಿದಂತೆ ಕಾಣುತ್ತಿದೆ. ಈ ಎಲ್ಲ ಗೊಂದಲದ ನಡುವೆ ಸರಕಾರ ಇಕ್ಕಟ್ಟಿಗೆ ಸಿಕ್ಕಿಹಾಕಿಕೊಂಡಿರುವುದು ಸತ್ಯ ಆದರೆ, ಉದ್ಯೋಗ ಆಕಾಂಕ್ಷಿಗಳು ಮತ್ತು ಸಾರ್ವಜನಿಕರು ಉತ್ತರ ಕರ್ನಾಟಕದ ಭಾಗದಲ್ಲಿ ಒತ್ತಡವನ್ನು ಹೆಚ್ಚಿಸಿದ್ದಾರೆ ಕೆಲ ಹುದ್ದೆಗಳ ಭರ್ತಿಗೆ ಹಣಕಾಸು ಅನುಮೋದನೆ ದೊರೆತಿರುವುದಿಲ್ಲ ಜನಪ್ರತಿಕ್ರಿಯೆ, ಬೇಡಿಕೆ, ಮತ್ತು ಈಗಿನ ಸಾರ್ವಜನಿಕ ಒತ್ತಡ ಇವೆಲ್ಲದರ ಮಧ್ಯೆ ಪ್ರಸಕ್ತ ರಾಜ್ಯ ಸರ್ಕಾರ ಒತ್ತಡಕ್ಕೆ ಹಾಕಿಕೊಂಡಿದೆ ನಿರಂತರವಾಗಿ ಮೇಲಿಂದ ಮೇಲೆ ನಡೆಯುತ್ತಿರುವ ವಿದ್ಯಾರ್ಥಿಗಳ ಹೋರಾಟ ಪರಿಸ್ಥಿತಿಯನ್ನು ಬದಲಾಯಿಸುವ ಮಟ್ಟಕ್ಕೆ ತಲುಪಿದೆ.
ಇತ್ತೀಚೆಗೆ ಡಿಸೆಂಬರ್ ಜನಸಾಮಾನ್ಯರ ವೇದಿಕೆ ಮತ್ತು ಉದ್ಯೋಗ ಆಕಾಂಕ್ಷಿಗಳ ಹೋರಾಟ ಸಮಿತಿ 2.8 ಲಕ್ಷ ಹುದ್ದೆಗಳ ಭರ್ತಿಗೆ ಒತ್ತಾಯಿಸಿ ಬೃಹತ್ ಮಟ್ಟದ ಪ್ರತಿಭಟನೆ ಮಾಡಿ ಸರ್ಕಾರದ ಗಮನ ಸೆಳೆದಿದ್ದಾರೆ ಇಷ್ಟಕ್ಕೆ ನಿಲ್ಲದ ಅವರ ಹೋರಾಟ ಈಗ ಚಳಿಗಾಲದ ಅಧಿವೇಶನದ ಮೇಲೆ ಪರಿಣಾಮ ಬೀರುವ ಎಲ್ಲ ಲಕ್ಷಣಗಳು ಕಾಣುತ್ತಿದೆ.

ಕಳೆದ ಮೂರು ನಾಲ್ಕು ವರ್ಷಗಳಿಂದ ಸರ್ಕಾರದಲ್ಲಿ ನೇಮಕಾತಿ ಕರೆಯುತ್ತಿಲ್ಲ, ವಯಸ್ಸು ಮೀರುತ್ತಿದೆ ನೇಮಕಾತಿ ಇಲ್ಲದೆ ಧಾರವಾಡದಲ್ಲಿ ದಿನಾಲು ಕಾಲ ಕಳೆಯುತ್ತಿದ್ದೇವೆ ಇನ್ನು ಕೆಲ ದಿನಗಳಲ್ಲಿ ನಮ್ಮ ವಯೋಮಿತಿ ಮುಕ್ತಾಯಗೊಳ್ಳುತ್ತದೆಬೆಳಗಾವಿಯಲ್ಲಿ ಹೋರಾಟ ಮಾಡುವುದು ಖಚಿತ ವಯೋಮಿತಿ ಸಡಿಲಿಕೆ ಮಾಡಿ ಸರಕಾರ ಬೇಗನೆ ನೇಮಕಾತಿ ಮಾಡಬೇಕು ಮಂಜುನಾಥ ಹಾರೋಗೇರಿ (ನಿರುದ್ಯೋಗಿ ಯುವಕ)

RELATED ARTICLES
- Advertisment -
Google search engine

Most Popular