ಕೆ.ಆರ್.ಪೇಟೆ: ಗಡಿಯಲ್ಲಿ ಭಾರತ ಮಾತೆಯ ಸೇವೆ ಮಾಡುತ್ತಾ ಅಕಾಲಿಕ ಮರಣಕ್ಕೆ ತುತ್ತಾದ ತಾಲ್ಲೂಕಿನ ಸುಪುತ್ರ ಹಾಗೂ ವೀರಯೋಧ ಜನಾರ್ಧನಗೌಡ ಮತ್ತೊಮ್ಮೆ ಹುಟ್ಟಿಬರಲಿ ಎಂದು ಶಾಸಕ ಹೆಚ್.ಟಿ.ಮಂಜು ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಕಿಕ್ಕೇರಿ ಗ್ರಾಮದ ಸುಪುತ್ರ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಅಕಾಲಿಕ ಮರಣಕ್ಕೆ ತುತ್ತಾದ ವೀರಯೋಧ ಜನಾರ್ಧನ್‌ಗೌಡರವರ ಹನ್ನೊಂದನೇ ದಿನದ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಎ? ಸಮರ್ಥರಿದ್ದರೂ ಭಾರತೀಯ ಸೇನೆಯಲ್ಲಿ ಯೋಧನಾಗಿ ಕೆಲಸ ನಿರ್ವಹಿಸಲು ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಆದರೆ ನಮ್ಮ ತಾಲ್ಲೂಕಿನ ಸುಪುತ್ರ ಜನಾರ್ಧನಗೌಡರಿಗೆ ಆ ಅವಕಾಶ ಸಿಕ್ಕಿತ್ತು. ತಮಗೆ ದೊರೆತ ಅವಕಾಶದಲ್ಲಿ ಅಚ್ಚುಕಟ್ಟಾಗಿ ದೇಶಸೇವೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಏಳು ವರ್ಷಗಳಿಂದ ಪ್ರಾಮಾಣಿಕವಾಗಿ ಚಳಿ, ಮಳೆ, ಬಿಸಿಲು ಎನ್ನದೇ ಶತೃಗಳಿಂದ ನಮ್ಮನ್ನು ರಕ್ಷಿಸುವ ಸಾಹಸ ಕೆಲಸ ಮಾಡಿಕೊಂಡು ಬಂದಿದ್ದ ಜನಾರ್ಧನ್‌ಗೌಡ ಆಕಸ್ಮಿಕ ಅನಾರೋಗ್ಯಕ್ಕೆ ತುತ್ತಾಗಿ ಅವರು ನಮ್ಮನ್ನೆಲ್ಲಾ ಅಗಲಿದ್ದಾರೆ. ಆದರೆ ಭಾರತೀಯ ಸೇನೆಯಲ್ಲಿದ್ದು ಹಲವಾರು ವ?ಗಳ ಕಾಲ ದೇಶವನ್ನು ಹಾಗೂ ಭಾರತೀಯರನ್ನು ರಕ್ಷಣೆ ಮಾಡಿದ ಕೀರ್ತಿ, ಭಾರತ ಮಾತೆಯ ಸೇವೆ ಮಾಡಿದ ಯಶಸ್ಸು ಅವರಿಗೆ ಸಲ್ಲುತ್ತದೆ. ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವುದು ಭಾರತೀಯರಾದ ನಮಗೆ ಹೆಮ್ಮೆಯ ಪ್ರತೀಕ. ಜನಾರ್ಧನ್‌ಗೌಡರು ಮತ್ತೆ ಹುಟ್ಟಿ ಬರಲಿ. ಅವರ ಹೆಸರು ತಾಲ್ಲೂಕಿನ ಇತಿಹಾಸದ ಪುಟಗಳಲ್ಲಿ ದಾಖಲಾಗಲಿ ಎಂದು ಆಶಿಸಿದರು. ಇದೇ ವೇಳೆ ವೀರ ಯೋಧ ಜನಾರ್ಧನ್‌ಗೌಡ ಕುಟುಂಬಕ್ಕೆ ವೈಯಕ್ತಿಕವಾಗಿ ಪರಿಹಾರ ನೀಡಿದರು.
ಇದೇ ವೇಳೆ ರಾಜ್ಯ ಮಾರಾಟ ಮಹಾಮಂಡಳಿ ನಿರ್ದೇಶಕ ಚೋಳೇನಹಳ್ಳಿಪುಟ್ಟಸ್ವಾಮಿಗೌಡ, ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ಎಂ.ಕಿರಣ್, ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ತಾಪಂ ಮಾಜಿ ಸದಸ್ಯ ಕೃ?ಗೌಡ, ಕಿಕ್ಕೇರಿ ಹೋಬಳಿಯ ಜೆಡಿಎಸ್ ಅಧ್ಯಕ್ಷ ಕಾಯಿಮಂಜೇಗೌಡ, ವಿಎಸ್.ಎಸ್.ಎನ್ ಮಾಜಿ ಅಧ್ಯಕ್ಷ ಶೇಖರ್ ಸೇರಿದಂತೆ ಹಲವರಿದ್ದರು.