ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕಿನ ಪ್ರತಿ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳು ಮತ್ತು ಅಹವಾಲುಗಳನ್ನು ಆಲಿಸಿ ಅವುಗಳ ನಿವಾರಣೆಗೆ ಆದ್ಯತೆ ನೀಡಿ ಕೆಲಸ ಮಾಡುವುದಾಗಿ ಎಂಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ದೊಡ್ಡಸ್ವಾಮೇಗೌಡ ಹೇಳಿದರು.
ಸಾಲಿಗ್ರಾಮ ತಾಲೂಕಿನ ಕುಪ್ಪೆ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಖಾಸಗಿ ರಸಗೊಬ್ಬರದ ಅಂಗಡಿಗಳಲ್ಲಿ ದುಬಾರಿ ದರ ತೆತ್ತು ರಸಗೊಬ್ಬರ ಪಡೆಯುವುದನ್ನ ತಪ್ಪಿಸಲು ಪ್ರತಿ ಸಂಘಗಳಲ್ಲಿ ರೈತರಿಗೆ ಎಲ್ಲಾ ಬಗೆಯ ರಸಗೊಬ್ಬರಗಳನ್ನ ನಿಗದಿತ ದರದಲ್ಲಿ ವಿತರಣೆಗೆ ಕ್ರಮ ಕೈಗೊಳ್ಳಲಾಗುದು ಎಂದರು.
ಕುಪ್ಪೆ ಮತ್ತು ತಂದ್ರೆ ಅಂಕನಹಳ್ಳಿ ಗ್ರಾಮದಲ್ಲಿ ಸಂಘಗಳಿಗೆ ಹೊಸ ಕಟ್ಟಡ ನಿರ್ಮಾಣ ಮಾಡಲು ಇವೆರಡು ಸಂಘದ ಆಡಳಿತ ಮಂಡಳಿಯವರು ನಿವೇಶನವನ್ನು ಒದಗಿಸಿ ಕೊಟ್ಟರೇ ತಕ್ಷಣವೇ ಅಪೆಕ್ಸ್ ಬ್ಯಾಂಕ್ ಮತ್ತು ಶಾಸಕರ ನಿಧಿಯಿಂದ ಅನುಧಾನ ಕೊಡಿಸಲು ತಾವು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸಿ.ಬಿ.ಸಂತೋಷ್, ಉಪಾಧ್ಯಕ್ಷೆ ಕಲ್ಯಾಣಮ್ಮ, ನಿರ್ದೇಶಕರಾದ ಪುನೀತಧರ್ಮಪಾಲ್, ರುಕ್ಮಿಣಮ್ಮ, ಕೆ.ಆರ್.ಮಂಜುನಾಥ್,ಕುಮಾರಸ್ವಾಮಿ, ಸೋಮಪ್ಪ,ದಾಸಯ್ಯ, ಸಿ.ಟಿ.ಸ್ವಾಮಿಗೌಡ, ಮಾಜಿ ಅಧ್ಯಕ್ಷ ಸಿ.ಟಿ.ಪಾರ್ಥ, ಜಿಲ್ಲಾ ಬ್ಯಾಂಕಿನ ಮೇಲ್ವಿಚಾರಕ ದಿನೇಶ್ ಮೂಡಲಕೊಪ್ಪಲು, ಸಂಘದ ಸಿ.ಇ.ಓ ಪುನೀತ್, ಗುಮಾಸ್ತ ಸಿ.ಜಿ.ಜಗನ್ನಾಥ್ ಇದ್ದರು.