Monday, May 19, 2025
Google search engine

Homeರಾಜ್ಯಸುದ್ದಿಜಾಲಮಾಧ್ಯಮಗಳು ಪಕ್ಷ ಅಥವಾ ಜಾತಿಗೆ ಸೀಮಿತವಾಗದೆ ಸಮಾಜದ ಹಿತಕ್ಕಾಗಿ ದುಡಿಯಲಿ: ಶಾಸಕ ಡಿ. ರವಿಶಂಕರ್

ಮಾಧ್ಯಮಗಳು ಪಕ್ಷ ಅಥವಾ ಜಾತಿಗೆ ಸೀಮಿತವಾಗದೆ ಸಮಾಜದ ಹಿತಕ್ಕಾಗಿ ದುಡಿಯಲಿ: ಶಾಸಕ ಡಿ. ರವಿಶಂಕರ್

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಪತ್ರಿಕೆಗಳು ಮತ್ತು ದೃಶ್ಯ ಮಾಧ್ಯಮಗಳು ಒಂದು ಜಾತಿಗೆ ಅಥವಾ ಪಕ್ಷಕ್ಕೆ ಸೀಮಿತಗೊಳ್ಳದೆ ಸಾಮಾಜದ ಒಳಿತಿಗಾಗಿ ದುಡಿಯಬೇಕು ಈ ನಿಟ್ಟಿನಲ್ಲಿ ಟಿವಿ1 ಚಾನೆಲ್ ಶ್ರಮಿಸುತ್ತಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು. ಕೆ.ಆರ್.ನಗರ ಪಟ್ಟಣದ ಬಯಲು ರಂಗ ಮಂದಿರದಲ್ಲಿ ನಡೆದ ಟಿವಿ1 ಚಾನೆಲ್ ನ ಒಂದನೆ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಾಧ್ಯಮಗಳು ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ಮುನ್ನಡೆ ಬೇಕು ಎಂದರು.

ಪ್ರಸ್ತುತ ದೃಶ್ಯ ಮಾಧ್ಯಮಗಳನ್ನು ನಡೆಸುವುದು ಕಷ್ಟಕರವಾಗಿದರು ಸಹ ಟಿವಿ 1 ಚಾನೆಲ್ ನವರು ಯಾವುದೇ ಫಲಾಪೇಷೆ ಇಲ್ಲದೆ ಸ್ಥಳಿಯ ಸಮಸ್ಯೆಗಳನ್ನು ಎತ್ತಿಹಿಡಿದು ಚುನಾಯಿತ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ವಿನೂತನವಾಗಿ ಸ್ಥಳಿಯ ಮಟ್ಟದಲ್ಲಿ ಮೂಡಿ ಬರುತ್ತಿರುವ ಈ ಚಾನೆಲ್ ಮುಂದಿನ ದಿನಗಳಲ್ಲಿ ರಾಜ್ಯ ವ್ಯಾಪಿ ಪ್ರಕಟಿಸುವಂತಾಗಲಿ ಎಂದು ಆಶಿಸಿದ ಶಾಸಕರು ಮಾಧ್ಯಮಗಳು ಜನತೆಗೆ ಉಪಯುಕ್ತವಾದ ಮತ್ತು ಅನುಕೂಲವಾಗುವಂತಾ ಕಾರ್ಯಕ್ರಮಗಳನ್ನು ರೂಪಿಸಿ ಜನರ ವಿಶ್ವಾಸ ಗಳಿಸಬೇಕು ಅದನ್ನ ಬಿಟ್ಟು ಹಣ ಗಳಿಕೆಗೆ ಹೋಗಬಾರದು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಅಂತರ್ ರಾಷ್ಟೀಯ ಖೋ ಖೋ ಚಿನ್ನದ ಪದಕ ವಿಜೇತೆ ಚೈತ್ರಕುರುಬೂರು ಸೇರಿದಂತೆ ವಿವಿದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಿದರು. ಇದಕ್ಕೂ ಮೊದಲು ಹಾಸ್ಯ ನಟರಾದ ಚಂದ್ರಪ್ರಭ, ವಿನೋದ್ ಗೊಬ್ಬರಗಾಲ, ಮಿಮಿಕಿ ಗೋಪಿ ನಡೆಸಿಕೊಟ್ಟ ಹಾಸ್ಯ ಚಟಾಕಿಗೆ ನೆನೆದಿದ್ದ ಸಾರ್ವಜನಿಕರು ಮನಸೋರೆಗೊಂಡು ಸಂಭ್ರಮಿಸಿದರಲ್ಲದೆ ಹಿನ್ನಲೆ ಗಾಯಕರಾದ ಮಹದೇವಸ್ವಾಮಿ, ಕಾವ್ಯ, ಮಹೇಂದ್ರ ಅವರುಗಳ ಗಾಯನ ಮತ್ತು ಸ್ಥಳಿಯ ಸನ್ ಮೂನ್ ಡ್ಯಾಂಸ್ ಅಕಾಡೆಮಿಯ ತಂಡದವರು ನಡೆಸಿಕೊಟ್ಟ ಕಾರ್ಯಕ್ರಮವನ್ನು ಮಳೆಯ ನಡುವೆಯೂ ಪಟ್ಟಣದ ಜನತೆ ಆನಂದಿಸಿದರು.

ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ, ಪುರಸಭೆ ಅಧ್ಯಕ್ಷ ಶಿವುನಾಯಕ್, ಸದಸ್ಯರಾದ ನಟರಾಜು, ಶಂಕರ್, ಮಾಜಿ ಸದಸ್ಯ ಕೆ.ವಿನಯ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಡಿ.ನಟರಾಜು, ಜೆಡಿಎಸ್ ಮುಖಂಡ ಹೆಚ್.ಕೆ.ಮಧುಚಂದ್ರ, ಬಿಜೆಪಿ ಅಧ್ಯಕ್ಷ ಧರ್ಮ, ಅರ್ಕೇಶ್ವರ ಕೇಬಲ್ ನೆಟ್ ವರ್ಕ್ ನ ಅಧ್ಯಕ್ಷ ಸಾಕರಾಜು, ಎನ್ ಎಸ್ ಟಿ ಡಿಜಿಟಲ್ ಕೇಬಲ್ ನೆಟ್ ವರ್ಕ್ ನ ವ್ಯವಸ್ಥಾಪಕರಾದ ವಿಜಯ್ ಕುಮಾರ್ ಗೌಡ, ಮತ್ತು ಮಧುಸೂಧನ್, ಶಿಕ್ಷಕ ಸೈಯದ್ ರಿಜ್ವಾನ್, ನಿವೃತ್ತ ಶಿಕ್ಷಕ ರಾಜಯ್ಯ, ಟಿವಿ1 ಚಾನೆಲ್ ಸಂಸ್ಥಾಪಕರು ಮತ್ತು ಸಂಪಾದಕರಾದ ಡಿ.ವಿ.ಸಂತೋಷ್ ಗೌಡ, ಹಿರಿಯ ವರದಿಗಾರ ಕೃಷ್ಣಕುಮಾರ್, ಸಿಬ್ಬಂದಿಗಳಾದ ಶಿಲ್ಪಮಹದೇವಸ್ವಾಮಿ, ಮೈತ್ರಿಸಂದೀಪ್, ಚಂದ್ರು ಸೇರಿದಂತೆ ಇನ್ನಿತರರು ಇದ್ದರು.

RELATED ARTICLES
- Advertisment -
Google search engine

Most Popular