Friday, September 19, 2025
Google search engine

Homeರಾಜ್ಯಕ್ರಿಶ್ಚಿಯನ್ ಜಾತಿ ಕಾಲಂನಲ್ಲಿ ಹಿಂದೂ ಜಾತಿಗಳ ಜೋಡಣೆ ಕುರಿತು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ

ಕ್ರಿಶ್ಚಿಯನ್ ಜಾತಿ ಕಾಲಂನಲ್ಲಿ ಹಿಂದೂ ಜಾತಿಗಳ ಜೋಡಣೆ ಕುರಿತು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ

ಬೆಂಗಳೂರು : ಕ್ರಿಶ್ಚಿಯನ್ ಜಾತಿ ಕಾಲಂನಲ್ಲಿ ಹಿಂದೂ ಜಾತಿಗಳ ಜೋಡಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರ ಸಭೆಯಲ್ಲಿ ಕ್ರಿಶ್ಚಿಯನ್ ಜಾತಿಗಳ ವಿವರ ಸಲ್ಲಿಕೆಯಾಯಿತು. ಕಾಂತರಾಜ್ ಹಾಗು ಜಯಪ್ರಕಾಶ್ ಹೆಗಡೆ ವರದಿಯಲ್ಲಿನ ಅಂಶಗಳನ್ನು ಈ ವೇಳೆ ಪ್ರಸ್ತಾಪಿಸಲಾಯಿತು.

ವರದಿಯಲ್ಲಿ ನಮೂದಾಗಿರುವ ಕ್ರಿಶ್ಚಿಯನ್ ಉಪಜಾತಿಗಳ ಮಾಹಿತಿ ನೀಡಿದರು. ಸಿಎಂ ಸಭೆಯಲ್ಲಿ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು ಈ ಕುರಿತು ಮಾಹಿತಿಯನ್ನು ಹಂಚಿಕೊಂಡರು. ಆದಿ ಆಂಧ್ರ ಕ್ರಿಶ್ಚಿಯನ್ 15739, ಆದಿ ದ್ರಾವಿಡ ಕ್ರಿಶ್ಚಿಯನ್ 52,179, ಬಣಜಿಗ ಕ್ರಿಶ್ಚಿಯನ್ 1,674, ಬೆಸ್ತ ಕ್ರಿಶ್ಚಿಯನ್ 1518, ಬ್ರಾಹ್ಮಣ ಕ್ರಿಶ್ಚಿಯನ್ 1541, ಕುರುಬ ಕ್ರಿಶ್ಚಿಯನ್ 2467, ಗೊಲ್ಲ ಕ್ರಿಶ್ಚಿಯನ್ 1606, ನೇಕಾರ ಕ್ರಿಶ್ಚಿಯನ್ 321, ರೆಡ್ಡಿ ಕ್ರಿಶ್ಚಿಯನ್ 3457, ಮಡಿವಾಳ ಕ್ರಿಶ್ಚಿಯನ್ 880, ಮಾದಿಗ ಕ್ರಿಶ್ಚಿಯನ್ 10,028, ಬಂಜಾರ ಕ್ರಿಶ್ಚಿಯನ್ 782, ಅಕ್ಕಸಾಲಿಗ ಕ್ರಿಶ್ಚಿಯನ್ 867, ಬಿಲ್ಲವ ಕ್ರಿಶ್ಚಿಯನ್ 913, ಆದಿ ಕರ್ನಾಟಕ ಕ್ರಿಶ್ಚಿಯನ್ ಜನಸಂಖ್ಯೆ 11,339 ಇರುವ ಬಗ್ಗೆ ಮಾಹಿತಿ ನೀಡಿದರು.  ಹೀಗೆ ನಮೂದಾದ ಕ್ರಿಶ್ಚಿಯನ್ ಜಾತಿಗಳನ್ನೇ ಮುಂದುವರಿಸಿದ್ದೇವೆ ಇಷ್ಟು ಸಂಖ್ಯೆಯಲ್ಲಿ ಕ್ರಿಶ್ಚಿಯನ್ ಧರ್ಮದಲ್ಲಿ ಹಿಂದೂ ಜಾತಿಗಳ ಜೋಡಣೆಯಾಗಿದ್ದು ಸಭೆಯಲ್ಲಿ ಹಿಂದೂ ಜಾತಿಗಳು ಜೋಡಣೆಯಾಗಿ ನಮೂದಾಗಿರುವ ಮಾಹಿತಿ ನೀಡಲಾಯಿತು.

RELATED ARTICLES
- Advertisment -
Google search engine

Most Popular