Saturday, May 24, 2025
Google search engine

Homeಸಿನಿಮಾಗಂಡಸರಿಗೂ ಕೂಡ ಶೋಷಣೆ ಆಗಿದೆ : ಮೀಟೂ ವಿಚಾರವಾಗಿ ನಟ ಉಪೇಂದ್ರ

ಗಂಡಸರಿಗೂ ಕೂಡ ಶೋಷಣೆ ಆಗಿದೆ : ಮೀಟೂ ವಿಚಾರವಾಗಿ ನಟ ಉಪೇಂದ್ರ

ಬೆಂಗಳೂರು : ಸದ್ಯ ಕನ್ನಡ ಚಿತ್ರರಂಗದಲ್ಲಿ ಮೀಟೂ ವಿಚಾರಕ್ಕೆ ಸಂಬಂಧಪಟ್ಟಂತೆ ಈಗಾಗಲೇ, ಹಲವು ಬಾರಿ ಚರ್ಚೆಗಳು ನಡೆಯುತ್ತಿದ್ದು, ಕೇರಳ ಚಿತ್ರರಂಗದ ಹೇಮಾ ಸಮಿತಿ ಮಾದರಿಯಲ್ಲಿ ಕನ್ನಡ ಚಿತ್ರರಂಗದಲ್ಲೂ ಕೂಡ ಒಂದು ಸಮಿತಿ ರಚನೆ ಮಾಡುವಂತೆ ಕೆಲ ನಟ ನಟಿಯರು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ನಟ ಹಾಗೂ ನಿರ್ದೇಶಕ ಉಪೇಂದ್ರ ಅವರು ಕೂಡ ಚಿತ್ರರಂಗದಲ್ಲಿ ಗಂಡಸರಿಗೂ ಕೂಡ ಶೋಷಣೆ ಆಗಿದೆ ಎಂದು ಸ್ಪೋಟಕ ಹೇಳಿಕೆ ನೀಡಿದರು.

ಮಾಧ್ಯಮದ ಸಂದರ್ಶನ ಒಂದರಲ್ಲಿ ಮಾತನಾಡಿದ ಅವರು, ಗಂಡಸರಿಗೂ ಕೂಡ ಶೋಷಣೆ ಆಗಿದೆ.ಒಂದು ವೇಳೆ ನಾನು ಹುಡುಗಿಯಾಗಿದ್ದರೆ ಗೊತ್ತಾಗಿರುವುದೇನೋ. ಇದಕ್ಕೆಲ್ಲ ಒಂದು ವೇದಿಕೆ ರೆಡಿ ಆಗಬೇಕು. ಅದು ಒಳ್ಳೆಯದು ಚಿತ್ರರಂಗದಲ್ಲಿ ಕೆಲವು ಸಣ್ಣ ಪುಟ್ಟ ಘಟನೆಗಳು ನಡೆಯುತ್ತವೆ ಎಂದರು.

ನಮಗೂ ಶೋಷಣೆ ಆಗಿದೆ. ಕೆಲವರಿಗೆ ಚಿತ್ರರಂಗದಲ್ಲಿ ಸಣ್ಣಪುಟ್ಟ ಶೋಷಣೆ ಆಗಿದೆ. ಎಲ್ಲಾ ಸಿನೆಮಾ ಇಂಡಸ್ಟ್ರಿಯಲ್ಲೂ ಅದು ಇದ್ದಿದ್ದೆ. ಇದಕ್ಕೆ ಒಂದು ವೇದಿಕೆ ರೆಡಿ ಆಗಬೇಕು. ಇಂತಹ ವಿಷಯ ಬಂದಾಗ ಧ್ವನಿ ಎತ್ತಲು ದಾರಿಗಳು ಇರುವುದಿಲ್ಲ. ದಾರಿಗಳೇ ಇಲ್ಲದೆ ಇದ್ದಾಗ ಇತರ ಸಮಸ್ಯೆಗಳು ಸಹಜ. ಹಾಗಾಗಿ ಮುಂದೆ ಬಂದು ಸಮಸ್ಯೆ ಕುರಿತು ಧ್ವನಿ ಎತ್ತಲು ದಾರಿಗಳು ಇರಬೇಕು. ಹಾಗಾಗಿ ಇದಕ್ಕೆ ಒಂದು ವೇದಿಕೆ ರೆಡಿ ಆಗಬೇಕು ಎಂದು ಅವರು ತಿಳಿಸಿದರು.

RELATED ARTICLES
- Advertisment -
Google search engine

Most Popular