Thursday, February 19, 2026
Google search engine

Homeರಾಜಕೀಯಶಾಸಕ ಮಂಜುನಾಥ ಭಂಡಾರಿ ಆರೋಗ್ಯ ವಿಚಾರಿಸಿದ ಸಚಿವ ಮಧು ಬಂಗಾರಪ್ಪ

ಶಾಸಕ ಮಂಜುನಾಥ ಭಂಡಾರಿ ಆರೋಗ್ಯ ವಿಚಾರಿಸಿದ ಸಚಿವ ಮಧು ಬಂಗಾರಪ್ಪ

ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿರುವ ವಿಧಾನ ಪರಿಷತ್ ಶಾಸಕರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಂಜುನಾಥ್ ಭಂಡಾರಿ ಅವರ ಸದಾಶಿವನಗರದ ನಿವಾಸಕ್ಕೆ ಇಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಈ ವೇಳೆ ಭಂಡಾರಿ ಅವರ ಕುಟುಂಬ ಸದಸ್ಯರ ಬಳಿ ಸಮಾಲೋಚನೆ ನಡೆಸಿದ ಅವರು ಜನಸೇವೆಯಲ್ಲಿ ಗುರುತಿಸಿಕೊಂಡಿರುವ ನೀವು ಶೀಘ್ರ ಗುಣಮುಖರಾಗಿ, ಪೂರ್ಣ ಚೇತರಿಕೆಯೊಂದಿಗೆ ಸಾರ್ವಜನಿಕ ಜೀವನಕ್ಕೆ ಮರಳಿಬನ್ನಿ ಎಂದು ಶುಭ ಹಾರೈಸಿ ತೆರಳಿದರು.

ವರದಿ: ಶಂಶೀರ್ ಬುಡೋಳಿ

RELATED ARTICLES
- Advertisment -
Google search engine

Most Popular