ಮಂಡ್ಯ: ಕೃಷಿ ವಿಶ್ವವಿದ್ಯಾಲಯ, ಕೃಷಿ ಇಲಾಖೆ ವತಿಯಿಂದ ಆಯೋಜನೆ. ಸಿ ಫಾರಂ ಆವರಣದಲ್ಲಿ ಎರಡೂ ದಿನಗಳ ಕಾಲ ನಡೆಯಲಿರುವ ಕೃಷಿ ಮೇಳಕ್ಕೆ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡಿದರು.

ಬಳಿಕ ಸಿರಿದಾನ್ಯ ಮೇಳ ಉದ್ಘಾಟನೆ ಮಾಡಿ ಬಳಿ ನಮ್ಮ ನಾಡು ರೈತರ ನಾಡು, ನಮ್ಮ ರೈತ ದೇಶದ ಬೆನ್ನಲಿಬು. ಸರ್ಕಾರ ಅನೇಕಾ ತಪ್ಪುಗಳನ್ನ ಸಹ ಮಾಡಿರಬಹುದು. ಕೃಷಿಗೆ ಅಧುನಿಕ ತಂತ್ರಜ್ಞಾನ ಉಪಯೋಗಿಸಿಕೊಳ್ಳಬೇಕು. ಪ್ರಕೃತಿ ನಮ್ಮ ಮೇಲೆ ಕರುಣೆ ತೋರ್ತಿತ್ತು ಈಗಾ ಬದಲಾವಣೆಯಾಗಿದೆ. ಪ್ರಕೃತಿ ವ್ಯವಸ್ಥೆ ಗಮನಿಸದೆ ಯಾವುದೇ ಕಾಲದ ಪರಪಂರೆಯನ್ನ ಅಳವಡಿಸಿಕೊಂಡರೆ ನಾವು ಸಮಸ್ಯೆ ಎದುರಿಸುತ್ತೇವೆ.

ಬಹಳಷ್ಟು ರೈತರು ೧೨೦ ಟನ್ ಬೆಳೆಯುತ್ತೇವೆ ಅಂತಾರೆ. ಬೆಳಗಾಂ ನಲ್ಲಿ ಬೆಳೆಯುವ ರೈತರು ಇಳು ವರಿ ಕೊಡದಾದರೆ.
ನಾವು ಯಾಕೆ ಪ್ರಯತ್ನ ಮಾಡಬಾರದು. ಮಂಡ್ಯ ರೈತರು ಅಂದ್ರೆ ಹೆಚ್ಚು ಬಿರುದು ಇದೆ. ಕೃಷಿ ಪದ್ದತಿಯನ್ನು ಹೆಚ್ಚು ಅಳವಡಿಸಿಕೊಂಡಿದ್ದಾರೆ. ಬಿರುದ್ದನ್ನ ಬೇರೆಯವರು ತೆಗೆದುಕೊಳ್ಳುವ ಮುನ್ನ ಕೃಷಿಯಲ್ಲಿ ನಾವು ಮುಂದೆ ಸಾಗಬೇಕು. ಕಡಿಮೆ ನೀರು ಬಳಸಿ ಹೆಚ್ಚು ಇಳುವರಿ ಕೊಡಬೇಕು ಎಂದು ಹೇಳಿದರು.

ಕೃಷಿ ಇಲಾಖೆ ಇದೆ ಸಂಪೂರ್ಣ ಮಾಹಿತಿ ಕೊಡ್ತಾರೆ. ಸಂಶೋಧಕರು ರೈತರ ಜೊತೆ ಹೋಗಬೇಕು. ರೈತರರಿಗೆ ಮಾರ್ಗದಲ್ಲಿ ಕೊಡಬೇಕು. ಸರ್ಕಾರ ರೈತರ ಜೊತೆ ಇರುತ್ತೆ. ನಮ್ಮ ಜಿಲ್ಲೆಯ ವಾತಾವರಣ, ನೀರು, ಮಣ್ಣಿನ ಗುಣಮಟ್ಟದ ಅವಲೋಕನ ಮಾಡಿ. ರೈತರು ಬೆಳೆ ಬೆಳೆದು ನೆಮ್ಮದಿ ಜೀವನ ಮಾಡುವ ಸಲಹೆ ಕೊಡಬೇಕು. ನಮ್ಮಲ್ಲಿ ಏಳು ತಾಲ್ಲೂಕಿನ ಒಂದೊಂದು ಪದ್ದತಿ ಇದೆ. ಅಧ್ಯಯನ ಮಾಡಿ ಸಂಶೋಧಕರು ತಿಳಿಸಬೇಕು. ಕೃಷಿ ಸಚಿವರಾಗಿ ಸೇವೆ ಮಾಡಲು ಅವಕಾಶ ಸಿಕ್ಕಿದೆ. ರೈತರಿಗೆ ಉಪಯುಕ್ತವಾಗುವಂತ ಕಾರ್ಯಕ್ರಮ ತರಬೇಕು ನೀಡದಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆದಿ ಚುಂಚನಗಿರಿ ಮಠದ ನಿರ್ಮಾಲನಂದನಾಥ ಸ್ವಾಮೀಜಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಡಿಸಿ ಡಾ.ಕುಮಾರ್, ಸಿಇಓ ಶೇಕ್ ತನ್ವಿರ್ ಆಸೀಫ್ , ಎಸ್ಪಿ ಎನ್.ಯತೀಶ್, ಸೇರಿ ಕೃಷಿ ಅಧಿಕಾರಿಗಳು ಇತರರು ಇದ್ದರು.
