Saturday, November 22, 2025
Google search engine

Homeರಾಜ್ಯಸುದ್ದಿಜಾಲಹಸಿದವರಿಗೆ ಅನ್ನ ನೀಡುವ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ಜನ್ಮದಿನ ಆಚರಣೆ

ಹಸಿದವರಿಗೆ ಅನ್ನ ನೀಡುವ ಮೂಲಕ ಸಚಿವ ಪ್ರಿಯಾಂಕ್ ಖರ್ಗೆ ಜನ್ಮದಿನ ಆಚರಣೆ

ಮೈಸೂರು : ನಾಡಿನ ಯುವ ನೇತಾರ, ದೀನ ದಲಿತರ ಪರ ಕೆಲಸಮಾಡುತ್ತಿರುವ ಪ್ರಿಯಾಂಕ್ ಖರ್ಗೆ ಹುಟ್ಟುಹಬ್ಬವನ್ನು ಹಸಿದವರಿಗೆ ಅನ್ನ ನೀಡುವ ಮೂಲಕ ಆಚರಿಸಲಾಗಿದೆ ಎಂದು ರಾಜ್ಯ ಕೆಪಿಸಿಸಿ ಕಾರ್ಯದರ್ಶಿ ಸಿ.ನರೇಂದ್ರ ತಿಳಿಸಿದರು.

ನಗರದಲ್ಲಿ, ಗ್ರಾಮೀಣ ಪಂಚಾಯತ್ ಸಚಿವ ಪ್ರಿಯಾಂಕ ಖರ್ಗೆಯ 47ನೇ ಹುಟ್ಟು ಹಬ್ಬದ ಹಂಗವಾಗಿ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲ ವಿತರಿಸಲಾಯಿತು, ನಂತರ ಆಸ್ಪತ್ರೆ ಮುಂಭಾಗ ಸಾರ್ವಜನಿಕರಿಗೆ, ಉಪಹಾರ ನೀಡಲಾಯಿತು. ಬಳಿಕ ಮಾತನಾಡಿದ ಸಿ.ನರೇಂದ್ರ , ರಾಜ್ಯದಲ್ಲಿ ತಂದೆಯಂತೆ ಜನಪರ ಕೆಲಸದಲ್ಲಿ ನಿರತರಾಗಿರುವ ಅವರು ಮುಂದಿನ ದಿನಗಳಲ್ಲಿ ಉನ್ನತ ಸ್ಥಾನಕ್ಕೇರಲಿ ಎಂದು ಶುಭಹಾರೈಸಿದರು.

ರಾಜ್ಯ ಕಾಂಗ್ರೆಸ್ ಪಕ್ಷದ ಯೂಥ್ ಉಪಾಧ್ಯಕ್ಷ ನಾಗರಾಜ್ ಮಾತನಾಡಿ, ಪ್ರಿಯಾಂಕ ಖರ್ಗೆ ಅವರಿಗೆ ಕಾಂಗ್ರೆಸ್ ಪಕ್ಷ ನೀಡಿರುವ ಖಾತೆಯನ್ನು ದಕ್ಷತೆಯಿಂದ ನಿರ್ವಸುತ್ತಿದ್ದಾರೆ, ನಾಡಿನ ಬಡ ಜನತೆಯ ಕಣ್ಮಣಿಯಾಗಿ ಯುವಕರ ಶೈಕ್ಷಣಿಕತೆಗೆ ಒತ್ತು ನೀಡುವ ಮೂಲಕ ಆಶಾಕಿರಣವಾಗಿ ಹೊರಹೊಮ್ಮಿರುವ ಅವರಿಗೆ ಉತ್ತಮ ಭವಿಷ್ಯವಿದೆ. ಮುಂದಿ ದಿನಗಳಲ್ಲಿ ಮುಖ್ಯ ಮಂತ್ರಿಯಾಗುವ ಅವಕಾಶವಿದೆ ಎಂದರು.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ನವರಷ್ಟೇ ಡಿ.ಕೆ.ಶಿವಕುಮಾರ್ ಅವರು ನಿಷ್ಠಾವಂತರಾಗಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಇಡೀ ರಾಜ್ಯಕ್ಕೆ ಅವರ ಪರಿಶ್ರಮ ಗೊತ್ತಿದೆ. ಆದ್ದರಿಂದ ಡಿ.ಕೆ.ಶಿವಕುಮಾರ್ ಅವರು ಇನ್ನುಳಿದ ಎರಡೂವರೆ ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕೆಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಸಂಯೋಜಕ ಬಂಡಿಪಾಳ್ಯ ವಿಜಯ್ ಕುಮಾರ್, ಎಸ್ಟಿ ಜಿಲ್ಲಾಧ್ಯಕ್ಷ ಮಹೇಶ್, ಜಿಲ್ಲಾ ಪ್ರಧಾನಕಾರ್ಯದರ್ಶಿ ಕಂಬ್ರಹಳ್ಳಿ ಸಂತೋಷ್ ಇದ್ದರು.

RELATED ARTICLES
- Advertisment -
Google search engine

Most Popular