Sunday, October 12, 2025
Google search engine

Homeರಾಜ್ಯಸುದ್ದಿಜಾಲಶ್ರೀ ಹಾಸನಾಂಬ ದೇವಿ ದರ್ಶನ ಪಡೆದ ಸಚಿವ ಶಿವರಾಜ ಎಸ್. ತಂಗಡಗಿ

ಶ್ರೀ ಹಾಸನಾಂಬ ದೇವಿ ದರ್ಶನ ಪಡೆದ ಸಚಿವ ಶಿವರಾಜ ಎಸ್. ತಂಗಡಗಿ

ಹಾಸನ : ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ಎಸ್. ತಂಗಡಗಿ ಅವರು ಶ್ರೀ ಹಾಸನಾಂಬ ದೇವಿ ದರ್ಶನ ಪಡೆದು ನಂತರ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಹಾಸನಾಂಬದೇವಿ ಜಾತ್ರಾ ಮಹೋತ್ಸವ ಬಹಳ ವಿಶಿಷ್ಟವಾಗಿ ಹಾಸನಾಂಬೆಯ ದರ್ಶನ ಮಾಡಿದ್ದೇವೆ. ಕಳೆದ ಬಾರಿಗಿಂತ ಇಂದು ವಿಶೇಷವಾಗಿದೆ. ಈ ಬಾರಿ ನಮ್ಮ ಜಿಲ್ಲಾಡಳಿತ ಜನರಿಗೆ ಯಾವುದೇ ತೊಂದರೆಯಾಗದoತೆ ಬಹಳ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದೆ ಎಂದು ತಿಳಿಸಿದರು.

ಅ.15 ನೇ ತಾರೀಖಿನಂದು ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಮೊಟ್ಟ ಮೊದಲ ಸಭೆಯನ್ನು ದೇವರಾಜು ಅರಸು ಭವನದಲ್ಲಿ ಆಯೋಜಿಸಲಾಗಿದೆ. ಇನ್ನೂ ಮೂರು ಸಭೆಗಳು ಆಗುತ್ತವೆ. ಅದರಲ್ಲಿ ಎರಡು ಸಭೆ ನನ್ನ ನೇತೃದಲ್ಲಿ ಹಾಗೂ ಇನ್ನೊಂದು ಉನ್ನತ ಮಟ್ಟದ ಸಭೆಯನ್ನು ಮುಖ್ಯ ಮಂತ್ರಿಗಳು ಹಾಗೂ ಉಪ ಮುಖ್ಯ ಮಂತ್ರಿಗಳು, ಸಚಿವರು ಸೇರಿ ಮಾಡುವ ಸಭೆಯಲ್ಲಿ ಅಂತಿಮವಾಗಿ ತೀರ್ಮಾನಿಸಲಾಗುತ್ತದೆ ಎಂದರು.

RELATED ARTICLES
- Advertisment -
Google search engine

Most Popular