Tuesday, February 17, 2026
Google search engine

Homeರಾಜ್ಯಬೆಂ-ಮೈ ಹೆದ್ದಾರಿಯಲ್ಲಿ ತಪ್ಪಿದ ಬಾರಿ ದುರಂತ: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಹೈಟೆನ್ಷನ್ ಕಬ್ಬಿಣದ ವಿದ್ಯುತ್...

ಬೆಂ-ಮೈ ಹೆದ್ದಾರಿಯಲ್ಲಿ ತಪ್ಪಿದ ಬಾರಿ ದುರಂತ: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಹೈಟೆನ್ಷನ್ ಕಬ್ಬಿಣದ ವಿದ್ಯುತ್ ಕಂಬ- ಸವಾರ ಪಾರು

ಮಂಡ್ಯ: ಬೆಂ-ಮೈ ಹೆದ್ದಾರಿಯಲ್ಲಿ ಮತ್ತೊಂದು ಅವಘಡ  ಸಂಭವಿಸಿದ್ದು, ಬಾರಿ ದುರಂತ ತಪ್ಪಿದೆ.

ಚಲಿಸುತ್ತಿದ್ದ ಬೈಕ್ ಮೇಲೆ ಹೈಟೆನ್ಷನ್ ಕಬ್ಬಿಣದ ವಿದ್ಯುತ್ ಕಂಬ ಉರುಳಿ ಬಿದ್ದಿದ್ದು, ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಂಡ್ಯ ತಾಲ್ಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ಬೆಂ-ಮೈ ಹೆದ್ದಾರಿಯಲ್ಲಿ ನಡೆದಿದೆ.

ಶ್ರೀರಂಗಪಟ್ಟಣದ ಗಂಜಾಂ ಸುರೇಶ್ ಪ್ರಾಣಾಪಯದಿಂದ ಪಾರಾದ ಬೈಕ್ ಚಾಲಕ.

ಮಂಡ್ಯದಿಂದ ಸ್ವಗ್ರಾಮಕ್ಕೆ ಸುರೇಶ್ ಬೈಕ್ ನಲ್ಲಿ ಹೆದ್ದಾರಿ ಮೂಲಕ ತೆರಳುತ್ತಿದ್ದಾಗ ಗಾಳಿಗೆ ಹೈಟೆನ್ಷನ್ ವಿದ್ಯುತ್ ಕಂಬ ಮುರಿದು ರಸ್ತೆ ಮೇಲೆ ಬೀಳುವಾಗ ಸುರೇಶ್ ಅವರ ದ್ವಿಚಕ್ರ ವಾಹನದ ಹೆಡ್ ಲೈಟ್ ಮೇಲೆ ಬಿದ್ದಿದೆ.

ವಿದ್ಯುತ್ ಕಂಬ ಬಿದ್ದ ರಭಸಕ್ಕೆ ಬೈಕ್ ಸವಾರ ಕೆಳಗೆ ಬಿದ್ದು ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಪಾಯ ಸಂಭವಿಸಿಲ್ಲ. ಗ್ರಾಮಸ್ಥರು ಗಾಯಾಳುವನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಮತ್ತು ಸರ್ವೀಸ್ ರಸ್ತೆಯ ಮೇಲೆ ವಿದ್ಯುತ್ ತಂತಿ ಬಿದ್ದ ಹಿನ್ನಲೆ ಟ್ರಾಫಿಕ್ ಜಾಮ್ ಉಂಟಾಗಿದೆ.

RELATED ARTICLES
- Advertisment -
Google search engine

Most Popular