Wednesday, May 20, 2026
Google search engine

Homeಸ್ಥಳೀಯಔಷಧಿ ಅಂಗಡಿಗಳ ಬಂದ್‌ ಗೆ ಮಿಶ್ರ ಪ್ರತಿಕ್ರಿಯೆ

ಔಷಧಿ ಅಂಗಡಿಗಳ ಬಂದ್‌ ಗೆ ಮಿಶ್ರ ಪ್ರತಿಕ್ರಿಯೆ

ಮೈಸೂರು: ಆನ್‌‌ ಲೈನ್ ನಲ್ಲಿ ಔಷಧ ಮಾರಾಟ ಹಾಗೂ ಅಸಹಜ ರಿಯಾಯಿತಿಗಳ ವಿರುದ್ಧ ಅಖಿಲ ಭಾರತ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಸಂಸ್ಥೆ ರಾಷ್ಟ್ರವ್ಯಾಪಿ ಕರೆ ನೀಡಿರುವ ಬಂದ್ ಗೆ ಮೈಸೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಕೆಲವೆಡೆ ಮೆಡಿಕಲ್‌ ಸ್ಟೋರ್‌ ಬಂದ್‌ ಮಾಡಿ ಬೆಂಬಲ ಸೂಚಿಸಿದರೆ, ಹಲವೆಡೆ ಎಂದಿನಂತೆ ಕಾರ್ಯ ನಿರ್ವಹಿಸಿದವು. ಆದರೆ, ಮೈಸೂರು ನಗರ ಮತ್ತು ಜಿಲ್ಲಾ ಚಿಲ್ಲರೆ ಔಷಧ ವ್ಯಾಪಾರಿಗಳ ಸಂಘದ ವ್ಯಾಪ್ತಿಯಲ್ಲಿರುವ ಮೆಡಿಕಲ್ ಶಾಪ್‌ನವರು ಗ್ರಾಹಕರಿಗೆ ಸೇವೆ ಒದಗಿಸುವ ಜೊತೆಯಲ್ಲಿ ಬಂದ್‌ಗೆ ನೈತಿಕ ಬೆಂಬಲ ನೀಡಿದವು. ಸಾರ್ವಜನಿಕರು ಹಾಗೂ ರೋಗಿಗಳ ಆರೋಗ್ಯದ ಹಿತದೃಷ್ಟಿಯಿಂದ ಅಂಗಡಿಗಳನ್ನು ಮುಚ್ಚದೆ ಎಂದಿನಂತೆ ಕಾರ್ಯ ನಿರ್ವಹಿಸಿ, ಕೈಗಳಿಗೆ ಕಪ್ಪು ಧರಿಸಿ, ಬೆಂಬಲ ವ್ಯಕ್ತಪಡಿಸಿದರು. ಆನ್‌ಲೈನ್ ಔಷಧ ಮಾರಾಟ ಪದ್ಧತಿಯಿಂದ ಔಷಧ ಮಾರಾಟ ಕ್ಷೇತ್ರವು, ವೃತ್ತಿಪರತೆಯನ್ನು ಕಳೆದುಕೊಳ್ಳುವ ಸಂಭವವಿದೆ. ಅಲ್ಲದೇ, ಈ ವ್ಯವಸ್ಥೆಯನ್ನು ಯುವ ಪೀಳಿಗೆ ಹಾಗೂ ವಿದ್ಯಾರ್ಥಿಗಳು ದುರುಪಯೋಗ ಪಡಿಸಿಕೊಂಡು, ಮಾದಕ ವ್ಯಸನಿಗಳಾಗುವ ಸಂಭವವಿದೆ. ಡ್ರಗ್ ಮಾಫಿಯಾವು ಮತ್ತಷ್ಟು ಗಟ್ಟಿಕೊಳ್ಳುವ ಸಾಧ್ಯತೆಯು ಇದೆ. ಕೆಲವೊಮ್ಮೆ ರೋಗಿಗಳು ತಮ್ಮ ರೋಗದ ಗೌಪತ್ಯೆಯನ್ನು ಕಾಪಾಡುವಲ್ಲಿ ವಿಲತೆ ಹಾಗೂ ಅಸುರಕ್ಷತೆ ಹೊಂದುತ್ತಾರೆ ಎಂದು ಪ್ರತಿಭಟನಕಾರರು ಹೇಳಿದರು.


ಸಂಘದ ಅಧ್ಯಕ್ಷ ಎಂ.ರಾಜು, ಕಾರ್ಯಾಧ್ಯಕ್ಷ ಎಸ್.ದೇವರಾಜ್, ಕಾರ್ಯದರ್ಶಿ ಸಿ.ಕೆ.ಅರುಣ್, ಖಜಾಂಚಿ ಮನ್ಸೂರ್ ಅಹಮದ್‌ಖಾನ್, ಉಪಾಧ್ಯಕ್ಷ ಎಸ್.ಉಮೇಶ್, ಜಂಟಿ ಕಾರ್ಯದರ್ಶಿ ಎಚ್.ವಿ.ಚಂದ್ರಶೇಖರ್ ಸೇರಿ ಔಷಧಿ ವ್ಯಾಪಾರಿಗಳು ಉಪ ಔಷಧ ನಿಯಂತ್ರಣಾಧಿಕಾರಿ ಡಾ.ವಾಸೀಂ ಷರ್ ರನ್ನು ಅವರ ಕಚೇರಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.


ಆನ್‌ಲೈನ್‌ನಲ್ಲಿ ಅನಧಿಕೃತ ಔಷಧ ಮಾರಾಟ ಹಾಗೂ ಕ್ವಿಕ್ ಕಾಮರ್ಸ್ ಡೆಲಿವರಿ ಆಪ್‌ಗಳಿಂದ, ಮೆಡಿಕಲ್ ಶಾಪ್ ನಡೆಸುತ್ತಿರುವ ಔಷಧ ವ್ಯಾಪಾರಿಗಳಿಗೆ ಬಹಳಷ್ಟು ತೊಂದರೆಯಾಗಲಿದೆ. ಇದಕ್ಕೆ ಸರಕಾರ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು. ಈ ವೇಳೆಯಲ್ಲಿ ಸಂಘದ ಅಧ್ಯಕ್ಷ ಕುಮಾರಸ್ವಾಮಿ, ಕಾರ್ಯದರ್ಶಿ ಅಮನ್‌ಉಲ್ಲಾ ಖಾನ್, ಖಜಾಂಚಿ ಕೆ.ಎನ್.ನವೀನ್ ಕುಮಾರ್, ಔಷಧ ವ್ಯಾಪಾರಿಗಳು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು

RELATED ARTICLES
- Advertisment -
Google search engine

Most Popular