Saturday, December 6, 2025
Google search engine

Homeರಾಜ್ಯಸುದ್ದಿಜಾಲಚುಂಚನಕಟ್ಟೆ ಜಾನುವಾರು ಜಾತ್ರೆ ಮತ್ತು ಶ್ರೀರಾಮ ರಥೋತ್ಸವ ಯಶಸ್ವಿಗಾಗಿ ಅಧಿಕಾರಿಗಳಿಗೆ ಶಾಸಕ ಡಿ....

ಚುಂಚನಕಟ್ಟೆ ಜಾನುವಾರು ಜಾತ್ರೆ ಮತ್ತು ಶ್ರೀರಾಮ ರಥೋತ್ಸವ ಯಶಸ್ವಿಗಾಗಿ ಅಧಿಕಾರಿಗಳಿಗೆ ಶಾಸಕ ಡಿ. ರವಿಶಂಕರ್ ಸೂಚನೆ


ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಜನವರಿ 1 ರಿಂದ ಆರಂಭವಾಗುವ ಇತಿಹಾಸ ಪ್ರಸಿದ್ದ ಚುಂಚನಕಟ್ಟೆ ಜಾನುವಾರು ಜಾತ್ರೆ ಮತ್ತು ಜ.16 ರ ಶ್ರೀರಾಮ ರಥೋತ್ಸವದ ಯಶಸ್ವಿಗೆ ಅಧಿಕಾರಿಗಳು ಸಾರ್ವಜನಿಕರ ಸಹಕಾರದೊಂದಿಗೆ ಶ್ರಮಿಸುವಂತೆ ಶಾಸಕ ಡಿ.ರವಿಶಂಕರ್ ತಾಲೂಕು ಆಡಳಿತಕ್ಕೆ ಸೂಚನೆ ನೀಡಿದರು.

ಶನಿವಾರ ಚುಂಚನಕಟ್ಟೆ ಶ್ರೀರಾಮ ದೇವಾಲಯದ ಅವರಣದಲ್ಲಿ ನಡೆದ ಜಾನುವಾರು ಜಾತ್ರೆ ಮತ್ತು ಶ್ರೀರಾಮ ರಥೋತ್ಸವದ ಪೂರ್ವ ಭಾವಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಾತ್ರೆ ಆರಂಭಕ್ಕೆ ಮುನ್ನವೇ ಗ್ರಾಮವನ್ನು ಪೂರ್ಣ ಪ್ರಮಾಣದಲ್ಲಿ ಸ್ವಚ್ಚತೆಗೆ ಅಧ್ಯತೆ ನೀಡುವುದು ಜತಗೆ ಜಾತ್ರಾ ಮಾಳದಲ್ಲಿ ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಕುಪ್ಪೆ ಗ್ರಾ.ಪಂ.ಗೆ ಸೂಚಿದ ಅವರು ಕೆ.ಅರ್.ನಗರ ದಿಂದ ಹೊಸೂರು ತನಕ ರಸ್ತೆಗಳನ್ನು ಅಭಿವೃದ್ದಿ ಪಡಿಸುವಂತೆ ಲೋಕೋಪಯೋಗಿ ಇಲಾಖೆಯವರಿಗೆ ತಾಕೀತು ಮಾಡಿದರು.

ಜಾತ್ರಾ ಮಾಳಕ್ಕೆ ಬರುವ ರಾಸುಗಳಿಗೆ ಮತ್ತು ಸಾರ್ವಜನಿರಿಗೆ ಯಾವುದೇ ರೋಗ ರುಜಿನ ರೋಗಗಳು ಹರಡದಂತೆ ಪಶು ಜತಗೆ ತಾತ್ಕಲಿಕ ಸಾರ್ವಜನಿಕ ಚಿಕಿತ್ಸಾ ಕೇಂದ್ರವನ್ನು ತೆರೆದು ಚಿಕಿತ್ಸೆಗೆ ಬೇಕಾಗುವ ಔಷದಗಳು ಪರಿಕರಗಳು ದಾಸ್ತಾನು ಮಾಡಿ ತುರ್ತುವಾಹನವನ್ನು ಸುಸ್ಥತಿಯಲ್ಲಿ ಇಡಬೇಕೆಂದು ಪಶು ಮತ್ತು ಆರೋಗ್ಯ ಇಲಾಖೆಯವರಿಗೆ ಸೂಚಿಸಿದರು.

ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯ ಹೊರ ರಾಜ್ಯದಿಂದ ಜನರು ಅಗಮಿಸುವುದರಿಂದ ಹೆಚ್ಚಿನ ಸಂಖ್ಯೆನ ಬಸ್ ಸೌಲಭ್ಯ ಕಲ್ಪಿಸುವುದರ ಜತಗೆ ಜಾತ್ರಾ ಮಾಳಕ್ಕೆ ವಿದ್ಯುತ್ ಅಲಕಾಂರದ ಜತಗೆ ಬೀದಿ ದೀಪಗಳ ಅಳವಡಿಕೆ ಕ್ರಮ ಕೈಗೊಳ್ಳಬೇಕೆಂದು ಚೆಸ್ಕಾಂ ಮತ್ತು ಸಾರಿಗೆ ಇಲಾಖೆಗೆ ಅದೇಶಿದ ಅವರು ಡಿಸೆಂಬರ್ 31 ರಿಂದಲೇ ಜಾತ್ರೆಗೆ ಭದ್ರತೆ ಒದಗಿಸಬೇಕೆಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಕೆಡಗ ನಟರಾಜು, ಮುಖಂಡರಾದ ಸಾಲಿಗ್ರಾಮ ಬಲರಾಮ್, ಮಹಾಲಿಂಗಣ್ಣ, ಮೀನ್ ಮಧು, ಸಿ.ಎಸ್.ಗಿರೀಶ್, ಗ್ರಾ.ಪಂ.ಮಾಜಿ.ಅಧ್ಯಕ್ಷೆ ಗೌರಮ್ಮ ಜಾತ್ರೆಯ ಕುರಿತು ಸಲಹೆ ಸೂಚನೆ ನೀಡಿ ಮಾತನಾಡಿದರು.

ರಥೋತ್ಸವದ ದಿನ ಮದ್ಯದ ಅಂಗಡಿ ಬಂದ್ ಮಾಡಿಸಿ

ಜನವರಿ 16 ರಂದು ಚುಂಚನಕಟ್ಟೆ ರಥೋತ್ಸವದ ದಿನ ಯಾವುದೇ ಅಹಿತಕರ ಘಟನೆ ನಡೆಯದಂತೆ ಚುಂಚನಕಟ್ಟೆ ಮತ್ತು ಸುತ್ತ ಮುತ್ತಲಿನ ಗ್ರಾಮದ ಮದ್ಯದ ಅಂಗಡಿಗಳನ್ನು ಮುಚ್ಚಿಸುವಂತೆ ಅಬಕಾರಿಗಳು ಕಟ್ಟು ನಿಟ್ಟಿನ ಕ್ರಮಕೈಗೊಳ್ಳಬೇಕು ಜತೆಗೆ ಜನವರಿ 1 ರಿಂದ ರೈತರು ರಾಸುಗಳೊಂದಿಗೆ ಅಗಮಿಸ ಬೇಕು ಅದಕ್ಕಿಂತ ಮುಂಚೆ ಬಂದರೆವ ಜಾತ್ರೆ ಮಾಳಕ್ಕೆ ಅವಕಾಶ ಇರುವುದಿಲ್ಲ‌

ಶಾಸಕ ಡಿ.ರವಿಶಂಕರ್

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಉದಯಶಂಕರ್, ಎಂ.ಎಸ್.ಮಹದೇವು, ವಕ್ತಾರ ಸಯ್ಯದ್ ಜಾಬೀರ್, ಕುಪ್ಪೆ ಗ್ರಾ.ಪಂ.ಅಧ್ಯಕ್ಷೆ ಶಾರದಮ್ಮ, ಸದಸ್ಯೆ ಗೌರಮ್ಮ, ಸಾಲಿಗ್ರಾಮ ತಹಸೀಲ್ಸರ್ ರುಕೀಯಾ ಬೇಗಂ, ತಾ.ಪಂ.ಇಓ.ರವಿಕಮಾರ್, ಬಿಇಓ ಕೃಷ್ಣಪ್ಪ, ಎಇಇ ಅರ್ಕೇಶ್ ಮೂರ್ತಿ, ಪಶು ಇಲಾಖೆಯ ಡಾ.ರಾಮು, ಉಪತಹಸೀಲ್ದಾರ್ ಮಹೇಶ್, ವಿ.ಎ.ಓ ಮೌನೇಶ್, ಪಾರುಪತ್ತೆದಾರ್ ಯತೀರಾಜ್ ಪಿಡಿಓ ಯೋಗನಂದ್, ಕಾಂಗ್ರೇಸ್ ಮುಖಂಡರಾದ ಮಿರ್ಲೆ ನಂದೀಶ್, ಡೈರಿ ಮಾದು, ಬಡ್ಡೆಮಂಜಣ್ಣ, ಚಿಕ್ಕಕೊಪ್ಪಲು ನವೀನ್, ಕೋಳಿಮನುಗೌಡ , ಕಾಡು ವಿಜಿ, ನಾಡಪ್ಪನಹಳ್ಳಿ ಅಶ್ವತ್, ನೂತನ್ ಗೌಡ, ಸಚಿನ್, ಮುದ್ದನಹಳ್ಳಿ ಟೈಲರ್ ತಮ್ಮೇಗೌಡ ಸೇರಿದಂತೆ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular