Thursday, September 11, 2025
Google search engine

Homeರಾಜ್ಯಸುದ್ದಿಜಾಲವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಿ.ರವಿಶಂಕರ್ ಚಾಲನೆ

ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಿ.ರವಿಶಂಕರ್ ಚಾಲನೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಪಟ್ಟಣದ ಪುರಸಭೆಯ ಬಯಲು ರಂಗಮಂದಿರವನ್ನು (ಡಾ.ರಾಜ್ ಬಾನಂಗಳ) ಒಂದೂವರೆ ಕೋಟಿ‌ ರೂಗಳಲ್ಲಿ ಅಭಿವೃದ್ಧಿ ಪಡಿಸಿ ಡಾ.ರಾಜ್.ಕುಟುಂಬದ ಡಾ.ಪಾರ್ವತಮ್ಮ, ನಾಡಿನ ಶ್ರೇಷ್ಠ ಯುವನಟ ಕೊಡಿಗೈ ದಾನಿ ಡಾ.ಪುನೀತ್ ರಾಜ್ ಕುಮಾರ್ ಅವರ ಪುತ್ಥಳಿ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಡಿ.ರವಿಶಂಕರ್ ತಿಳಿಸಿದರು.

ಪಟ್ಟಣದ 12 ಮತ್ತು 4 ನೇ ವಾರ್ಡ್ ನ ಬಡಾವಣೆಯಲ್ಲಿ ಅಂದಾಜು ಎರಡು ವೆಚ್ಚದ ವಿವಿದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೇ ನೀಡಿ ಮಾತನಾಡಿದರು.

ಬಯಲು ರಂಗಮಂದಿರವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವುರ ಜೊತೆಗೆ ಪಟ್ಟಣದ ಹಿರಿಯ ನಾಗರೀಕರು ವಾಯು ವಿಹಾರ ಮಾಡಲು ಮೈದಾನದ ಸುತ್ತಾ ಇಂಟರ್ ಲಾಕ್ ಕಾಮಗಾರಿ ಮಾಡಲಾಗುವುದು ಎಂದು ತಿಳಿಸಿದರು.

ಪಟ್ಟಣದ ಹೃದಯ ಭಾಗದಲ್ಲಿರುವ ಬಸವೇಶ್ವರ ಬಡಾವಣೆಯ ದೇವಿರಮ್ಮ ಶಿಶು ವಿಹಾರ ಮೈದಾನ ಮತ್ತು ಗಾಂಧಿ ಪಾರ್ಕ್ ಅಭಿವೃದ್ಧಿಗೆ ತಲಾ 25 ಲಕ್ಷ ಅನುದಾನ‌ ನೀಡಲಾಗಿದೆ ಎಂದು ತಿಳಿಸಿದರು.

ಪಟ್ಟಣದ ಶುದ್ದೀಕರಿಸಿ ಕುಡಿಯುವ ನೀರು ಸರಬರಾಜು ಮಾಡಲು ಅಮೃತ್ ಯೋಜನೆಯಡಿ 30 ಕೋಟಿ ವೆಚ್ಚದಲ್ಲಿ ಕಾಮಗಾರಿ ಹಮ್ಮಿಕೊಳ್ಳಲಾಗಿದ್ದು, ಮುಂದಿನ ಮೂವತ್ತು ವರ್ಷಕ್ಕೆ ಯಾವ ಸಮಸ್ಯೆ ಬಾರದಂತೆ ಹೆಚ್ಚಿನ ರೀತಿಯಲ್ಲಿ ಮಹತ್ವ ವಹಿಸಿ ಕಾಮಾಗಾರಿ ಮಾಡಿಸಲಾಗುತ್ತಿದೆ ಎಂದರು.

ಕೆ.ಆರ್.ನಗರ ಪಟ್ಟಣ ದಿನೇ ದಿನೇ ಬೆಳೆಯುತ್ತಿದ್ದು ಹಾಗೂ ಹೊಸ ಬಡಾವಣೆಗಳು ಹೆಚ್ಚುತ್ತಿರುವುದರಿಂದ ಒಳ ಚರಂಡಿ ವ್ಯವಸ್ಥೆ ಕಲ್ಪಸಲು ಈಗಾಗಲೇ 20 ಕೋಟಿ‌ ಹಣ ಬಿಡುಗಡೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತ್ತೀಚಿಗೆ ಕಾಮಗಾರಿಗೆ ಚಾಲನೇ ನೀಡಿರುವುದು ನಿಮೆಗೆಲ್ಲ ತಿಳಿದಿರುವ ಸಂಗತಿ ಆದ್ದರಿಂದ ಪಟ್ಟಣದ ಅಭಿವೃದ್ಧಿಗೆ ಈಗಾಗಲೇ 7 ಕೋಟಿ‌ಗೂ ಹೆಚ್ಚು ಅನುದಾನ‌ ಒದಗಿಸಲಾಗಿದೆ ಎಂದರು

ಪಟ್ಟಣದ ಹೊರವಲಯ ಚೌಕಹಳ್ಳಿ ಗ್ರಾಮದಿಂದ ಪ್ರಾರಂಭವಾಗುವ ಮೈಸೂರು- ಹಾಸನ ರಸ್ತೆಯಲ್ಲಿ ಸಾಕಷ್ಟು ಗುಂಡಿ ಬಿದ್ದಿದ್ದು ಈಗಾಗಲೇ ಮುಖ್ಯಮಂತ್ರಿಗಳು ಗುಂಡಿ ಮುಚ್ಚಲು ಹಣ ಒದಗಿಸಿದ್ದಾರೆ ಅತಿ ಶೀಘ್ರದಲ್ಲಿ ಮೈಸೂರು- ಹಾಸನ ರಸ್ತೆ ಹಾಗೂ ಪಟ್ಟಣದ ವಿವಿದ ರಸ್ತೆಗಳ ಗುಂಡಿ ಮುಚ್ಚಲಾಗುವುದು ಎಂದು ತಿಳಿಸಿದರು.

ಪಟ್ಟಣದ ಮೈಸೂರು-ಹಾಸನ ರಸ್ತೆಯಲ್ಲಿ: ಲೋಕೋಪಯೋಗಿ ಇಲಾಖೆಯ ಕೆಲವು ವಸತಿ ಗೃಹಗಳು ಪಾಳು ಬಿದ್ದಿದ್ದು ಅವುಗಳನ್ನು ನೆಲಸಮ ಮಾಡಿ ವಾಣಿಜ್ಯ ಸಂಕೀರ್ಣ ಮಾಡಲು ನೀಲಿ‌ನಕ್ಷೆ ತಯಾರಿಸಲಾಗಿದ್ದು ಅಗತ್ಯ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.

-ಡಿ.ರವಿಶಂಕರ್, ಶಾಸಕರು, ಕೆ.ಆರ್.ನಗರ

ಪುರಸಭಾ ಅಧ್ಯಕ್ಷ ಶಿವುನಾಯಕ್, ನವನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಕಸಾಪ ಅಧ್ಯಕ್ಷ ಡಿಂಡಿಮ ಶಂಕರ್, ಪುರಸಭಾ ಸದಸ್ಯರಾದ ಅಶ್ವಿನಿ ಪುಟ್ಟರಾಜು,ಶಂಕರ್ ಸ್ವಾಮಿ, ಮಿಕ್ಸರ್ ಶಂಕರ್, ನಟರಾಜ್, ಮಾಜಿ ಸದಸ್ಯ ವಿನಯ್, ಕೆ.ಜಿ.ಸುಬ್ರಹ್ಮಣ್ಯ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ರಮೇಶ್, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಕೆಂಚಿ ಮಂಜು, ತಾ.ಕಾಂಗ್ರೆಸ್ ವಕ್ತಾರ ಸಯ್ಯದ್ದ್ ಜಾಬೀರ್, ಮುಖಂಡರಾದ ಧರ್ಮರಾಜ್, ಜವರೇಗೌಡ, ಪುಟ್ಟು, ಉಮಾಶಂಕರ್, ವೈ.ಎಸ್.ಜಯಂತ್, ಏಸುರಾಜ್, ನಾಗರಾಜ್, ಆದರ್ಶ ಮುಖ್ಯಾಧಿಕಾರಿ ರಮೇಶ್, ಇಂಜಿನಿಯರ್ ‌ಸೌಮ್ಯ,ಮತ್ತಿತರರು ಇದ್ದರು.

RELATED ARTICLES
- Advertisment -
Google search engine

Most Popular