Tuesday, November 4, 2025
Google search engine

Homeರಾಜ್ಯಸುದ್ದಿಜಾಲಮಳೆಯಿಂದ ಹಾನಿಗೀಡಾದ ಗ್ರಾಮಗಳಿಗೆ ಶಾಸಕ ಡಿ. ರವಿಶಂಕರ್ ಭೇಟಿ

ಮಳೆಯಿಂದ ಹಾನಿಗೀಡಾದ ಗ್ರಾಮಗಳಿಗೆ ಶಾಸಕ ಡಿ. ರವಿಶಂಕರ್ ಭೇಟಿ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ :‌ ಕೆ.ಆರ್.ನಗರ‌ ಮತ್ತು ಸಾಲಿಗ್ರಾಮ ಅವಳಿ ತಾಲ್ಲೂಕಿನಲ್ಲಿ ಹದಿನೈದು ದಿನಗಳಿಂದ ಸುರಿದ ಮಳೆಗೆ ತತ್ತರಿಸಿ ಹೋದ ತಾಲೂಕಿನ ಎಲ್ಲಾ ಗ್ರಾಮಗಳಿಗೆ ಶಾಸಕ ಡಿ.ರವಿಶಂಕರ್, ತಹಸೀಲ್ದಾರ್ ಹಾಗೂ ಸಂಬಂದಪಟ್ಟ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಳೆಯಿಂದ ಹಾನಿಗೀಡಾದ ಮನೆಗಳಿಗೆ ಭೇಟಿ ನೀಡಿದ ಶಾಸಕರು ಬಳಿಕ ಮಳೆಯಿಂದ ಹಾನಿಗೀಡಾದ ರೈತರ ಜಮೀನು ಕಂಡು ಮರುಕ ವ್ಯಕ್ತಪಡಿಸಿ ರೈತರಿಗೆ ಸಾಂತ್ವನ ಹೇಳಿ ಆದಷ್ಟು ಸರಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು. ಮುಂದಿನ ಕ್ರಮಕ್ಕಾಗಿ ಸ್ಥಳದಲ್ಲಿದ್ದ ತಹಸೀಲ್ದಾರ್‌ಗೆ ಸೂಚನೆ ನೀಡಿದರು.

ಹಲವು ವರ್ಷಗಳ ಹಿಂದೆ ಕೆರೆ, ಕಾಲುವೆ, ಕಟ್ಟೆಗಳನು ಆಗಿನ ಕಾಲಕ್ಕೆ ತಕ್ಕಂತೆ ನಿರ್ಮಾಣ ಮಾಡಲಾಗಿದೆ. ಭತ್ತದನಾಡು ತಾಲೂಕಿಗೆ ಬಹಳ ವರ್ಷಗಳಿಂದ ಕೆರೆ ಕಟ್ಟೆಗಳ ಹೂಳು ಮುಚ್ಚಿದ್ದು, ದುರಸ್ತಿ ಕಂಡಿಲ್ಲದ್ದರಿಂದ ಸಮಸ್ಯೆಗಳು ಎದುರಾಗಿವೆ ಎಂದರು.

ದಿಢೀರನೆ ಭಾರಿ ಮಳೆ ಬಿದ್ದಿದ್ದರಿಂದ ಮನೆಗಳಿಗೆ ನೀರು ನುಗ್ಗಿ ಅವಘಡಗಳು ಹೆಚ್ಚಾಗಿವೆ. ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳ ಜತೆ ಭೇಟಿ ಮಾಡಿ, ಅಂದಾಜು ವೆಚ್ಚ ತಯಾರಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಈಗಾಗಲೇ ಕೆ.ಆರ್.ನಗರ ತಾಲ್ಲೂಕಿನಲ್ಲಿ 27 ಮತ್ತು ಸಾಲಿಗ್ರಾಮ ತಾಲ್ಲೂಕಿನಲ್ಲಿ 28 ಮನೆಗಳು ಹಾನಿಗೀಡಾಗಿದ್ದು ಸರ್ಕಾರದ ಸುತ್ತೊಲೆಯಂತೆ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ ಶಾಸಕರು ಸಂಪೂರ್ಣವಾಗಿ ಮನೆ ಕಳೆದು ಕೊಂಡ ಫಲಾನುಭವಿಗಳಿಗೆ ಅದಷ್ಟು ಬೇಗ ರಾಜೀವ್ ಗಾಂಧಿ ವಸತಿ‌ ನಿಗಮದಿಂದ ಮನೆ‌ ಮಂಜೂರು ಮಾಡಿಸಲಾಗುವುದು ಎಂದು ತಿಳಿಸಿದರು.

ಇತ್ತೀಚೆಗೆ ಸುರಿದ ಬಾರಿ ಮಳೆಯುಂದಾಗಿ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಅಪಾರ ಪ್ರಮಾಣದಲ್ಲಿ‌ ಬೆಳೆ ಹಾನಿಯಾಗಿದೆ ಈ ಸಂಬಂದ ತಹಸೀಲ್ದಾರ್ ಮತ್ತು ಕೃಷಿ ಅಧಿಕಾರಿಗಳ ಜೊತೆ ಚರ್ಚಿಸಲಾಗಿದ್ದು ಎಲ್ಲೆಲ್ಲಿ‌ ಬೆಳೆಹಾನಿ ಮತ್ತು ನಾಲೆ,‌ಕೆರೆಕಟ್ಟೆ ಗಳಿಗೆ ಹಾಕಿಯಾಗಿರುವ ಸಂಕ್ಷಿಪ್ತವಾಗಿ ವರದಿ ಪಡೆದು ಕೊಂಡು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಹಂಪಾಪುರ, ಕಾರ್ಗಹಳ್ಳಿ ದೊಡ್ಡಕೊಪ್ಪಲು, ಕಲ್ಯಾಣಪುರ, ಅರ್ಜುನಹಳ್ಳಿ,ಭೇರ್ಯ, ಮುಂಜನಹಳ್ಳಿ ಗ್ರಾಮಗಳು ಸೇರಿದಂತೆ ‌ಅನೇಕ‌ ಕಡೆಗಳಲ್ಲಿ‌ ಮಳೆ ಹಾನಿ ಬಗ್ಗೆ ತಾಲ್ಲೂಕಿನ ಅಧಿಕಾರಿಗಳೊಂದಿಗೆ ಬೇಟಿ‌ ನೀಡಿ‌ ಪರಿಶೀಲನೆ ನಡೆಸಿದರಲ್ಲದೆ.ನೆ ಕಳೆದು ಕೊಂಡವರಿಗೆ ಸಾಂತ್ವನ ಹೇಳಿದರು.

ಚುಂಚನಕಟ್ಟೆ ಜಲಪಾತೋತ್ಸವ ಆಚರಣೆಗೆ ಸಂಬಂದಿಸಿದಂತೆ ‌ಈಗಾಗಲೇ ಮುಖ್ಯಮಂತ್ರಿಗಳಿಗೆ ಅನುದಾನಕ್ಕೆ‌ ಮನವಿ ಮಾಡಲಾಗಿದೆ. ನವೆಂಬರ್ ಕೊನೆ ವಾದದಲ್ಲಿ ಚುಂಚನಕಟ್ಟೆ ಕಾವೇರಿ ನದಿ ಜಲಪಾತೋತ್ಸವ ವಿಶಿಷ್ಠವಾಗಿ ಬಹಳ ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ.

ಡಿ.ರವಿಶಂಕರ್ ಶಾಸಕರು.ಕೆ.ಆರ್.ನಗರ ಕ್ಷೇತ್ರ.

ತಹಸೀಲ್ದಾರ್ ಜೆ.ಸುರೇಂದ್ರ ಮೂರ್ತಿ, ತಾ.ಪಂ.ಇಓ‌ ಕುಲದೀಪ್, ಕೃಷಿ ಸಹಾಯಕ ನಿರ್ದೇಶಕ ಕೆ.ಜೆ.ಮಲ್ಲಿಕಾರ್ಜುನ್, ಹಾರಂಗಿ ನೀರಾವರಿ ನಿಗಮದ ಇಇ ಕುಶುಕುಮಾರ್, ಎಇಇಗಳಾದ ಅಯಾಜ್ ಪಾಷ, ರಾಜೇಂದ್ರ ಜೆಇ ಕಿರಣ್, ಜಿ.ಪಂ.ಜೆಇ ರವಿ ಕುಮಾರ್, ಹಂಪಾಪುರ ಗ್ರಾ.ಪಂ.ಅಧ್ಯಕ್ಷೆ ವಿದ್ಯಾನಾರಾಯಣ್, ಸದಸ್ಯರಾದ ಹೆಚ್.ಕೆ.ನಾಗರಾಜ್, ಯೋಗೇಶ್, ಪಿಡಿಓ ಅಶ್ವಿನಿ, ಟಿಎಪಿಎಂಎಸ್ ಮಾಜಿ ನಿರ್ದೇಶಕ ಡಿ.ಸಿ.ರವಿ, ಗ್ಯಾರಂಟಿ ಅನುಷ್ಠಾನ ಸಮಿತಿ‌ ಅಧ್ಯಕ್ಷ ರಾದ ಎಂ.ಎಸ್.ಮಹದೇವ್, ಉದಯ್ ಶಂಕರ್, ‌ಕಾಂಗ್ರೆಸ್ ತಾಲ್ಲೂಕು ವಕ್ತಾರ ಜಾಬೀರ್ ಸೇರಿದಂತೆ ಅನೇಕರು ಇದ್ದರು.

RELATED ARTICLES
- Advertisment -
Google search engine

Most Popular